ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಕ್‌ಡೌನ್; ವಾಹನ ಬಳಕೆಗೆ ಷರತ್ತು ಬದ್ಧ ಅನುಮತಿ

|
Google Oneindia Kannada News

ಬೆಂಗಳೂರು, ಮೇ 10; ಸೋಮವಾರದಿಂದ ಕರ್ನಾಟಕದಲ್ಲಿ 14 ದಿನಗಳ ಲಾಕ್‌ಡೌನ್ ಜಾರಿಗೆ ಬಂದಿದೆ. ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಮನೆಯ ಹತ್ತಿರ ಸಂಚಾರ ನಡೆಸಲು ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ.

ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಸೋಮವಾರ ಸಂಜೆ ಈ ಕುರಿತು ಟ್ವೀಟ್ ಮಾಡಿದೆ. ನಗರದಲ್ಲಿ ಮನೆಯ ಸುತ್ತಮುತ್ತಲೂ ತರಕಾರಿ, ದಿನಸಿ ತರಲು ವಾಹನ ಬಳಸಬಹುದು ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಲಾಠಿ ಚಾರ್ಜ್ ಮಾಡದಂತೆ ಸೂಚನೆ ಕೊಟ್ಟ ಕಮಲ್ ಪಂತ್ ಲಾಠಿ ಚಾರ್ಜ್ ಮಾಡದಂತೆ ಸೂಚನೆ ಕೊಟ್ಟ ಕಮಲ್ ಪಂತ್

ಗ್ರಾಮೀಣ ಭಾಗದಲ್ಲಿ ಅಂಗಡಿಗಳು ಇರುವ ಪ್ರದೇಶಕ್ಕೆ ವಾಹನದಲ್ಲಿ ಹೋಗಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಬಹುದು ಎಂದು ತಿಳಿಸಲಾಗಿದೆ. ಅಗತ್ಯವಿದ್ದಾಗ ಮಾತ್ರ ಇದನ್ನು ಬಳಕೆ ಮಾಡಿ, ಎಲ್ಲೆಂದರಲ್ಲಿ ತಿರುಗಾಡಲು ಇದು ಲೈಸೆನ್ಸ್‌ ಅಲ್ಲ ಎಂದು ಟ್ವೀಟ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಲಾಕ್‌ಡೌನ್‌; ಲಾಠಿ ಹಿಡಿದ ಪೊಲೀಸರ ವಿರುದ್ಧ ಆಕ್ರೋಶ ಲಾಕ್‌ಡೌನ್‌; ಲಾಠಿ ಹಿಡಿದ ಪೊಲೀಸರ ವಿರುದ್ಧ ಆಕ್ರೋಶ

Police Allowed Use Of Vehicle To Neighbour Hood Shop In The Time Of Lockdown

ಕರ್ನಾಟಕ ಸರ್ಕಾರ ಲಾಕ್ ಡೌನ್ ಮಾರ್ಗಸೂಚಿ ಹೊರಡಿಸಿದಾಗ ತರಕಾರಿ, ದಿನಸಿ ತರಲು ನಡೆದುಕೊಂಡೇ ಹೋಗಬೇಕು ಎಂದು ಷರತ್ತು ಹಾಕಿತ್ತು. ಸೋಮವಾರ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು.

ರಾಜ್ಯದಲ್ಲಿ ಮತ್ತೆ ಕೋವಿಡ್ ಮಾರ್ಗಸೂಚಿ ಬದಲಿಸಿ ರಾಜ್ಯ ಸರ್ಕಾರ ಆದೇಶರಾಜ್ಯದಲ್ಲಿ ಮತ್ತೆ ಕೋವಿಡ್ ಮಾರ್ಗಸೂಚಿ ಬದಲಿಸಿ ರಾಜ್ಯ ಸರ್ಕಾರ ಆದೇಶ

ಹಳ್ಳಿಗಳಲ್ಲಿ ತರಕಾರಿ, ದಿನಸಿ ಹೊತ್ತು ಕಿ. ಮೀ.ಗಟ್ಟಲೇ ನಡೆಯಬೇಕು. ಸರ್ಕಾರದ ಮಾರ್ಗಸೂಚಿ ಜನಪರವಾಗಿಲ್ಲ ಎಂದು ಜನರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕಿದ್ದರು. ಆದ್ದರಿಂದ ಪೊಲೀಸ್ ಮಹಾನಿರ್ದೇಶಕರು ಈ ಕುರಿತು ಟ್ವೀಟ್ ಮಾಡಿದ್ದಾರೆ.

Recommended Video

Kamal Pant : ಇನ್ಮುಂದೆ ಯಾರಿಗೂ ಹೋಡಿಯೋ ಹಾಗಿಲ್ಲ! | Oneindia Kannada

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, "ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು 2-3 ಕಿ.ಮೀ.ದೂರದಲ್ಲಿವೆ. ಅಲ್ಲಿಂದ ಮನೆ ಸಾಮಾನುಗಳನ್ನು ಹಿರಿಯರು, ಅಶಕ್ತರು ಹೊತ್ತುಕೊಂಡು ಬರಬೇಕೇ ಮುಖ್ಯಮಂತ್ರಿಗಳೇ? ಆಯಾಸ-ಪ್ರಯಾಸದಿಂದ ಅವರಿಗೇನಾದರೂ ಆಗಿಬಿಟ್ಟರೆ ಯಾರು ಹೊಣೆ? ಈ ಸಾಮಾನ್ಯ ಜ್ಞಾನವೂ ಆಡಳಿತ ನಡೆಸುವವರಿಗೆ ಬೇಡವೇ?" ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

English summary
In a tweet DGP Karnataka said that to buy groceries, vegetables and daily needs there is no bar for using vehicle to your neighbour hood shop in cities or nearest availability point in rural areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X