ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಭಯ ಹುಟ್ಟಿಸುತ್ತಿದೆ ಬೆಳವಣಿಗೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ರಾಜ್ಯದಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ, ಆಗುತ್ತಿರುವ ಬೆಳವಣಿಗೆಗಳು ಭಯ ಹುಟ್ಟಿಸುತ್ತಿವೆ.

ಪೋಕ್ಸೋ ಕೋರ್ಟ್ ಕೋರ್ಟ್‌ನಲ್ಲಿರುವ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿಲೇ ಇದೆ. ಕೇವಲ ಶೇ.4.8ರಷ್ಟು ಪ್ರಕರಣಗಳು ಮಾತ್ರ ಇತ್ಯರ್ಥವಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ಏರಿಕೆಯಾಗುತ್ತಿದೆ ಆದರೆ ನ್ಯಾಯಾಲಯಗಳ ಸಂಖ್ಯೆ ಮಾತ್ರ ಹೆಚ್ಚಳವಾಗಿಲ್ಲ ಹಾಗಾಗಿ ಒಂದೇ ನ್ಯಾಯಾಲಯದಲ್ಲಿ ಸಾವಿರಾರು ಪ್ರಕರಣಗಳು ದಾಖಲಾಗುತ್ತಿದ್ದು, ನ್ಯಾಯಾಧೀಶರ ಮೇಲೆ ಒತ್ತಡ ಹೇರಲಾಗುತ್ತಿದೆ.

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ನಾಲ್ವರು ಸಹಪಾಠಿಗಳ ಬಂಧನ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದ ನಾಲ್ವರು ಸಹಪಾಠಿಗಳ ಬಂಧನ

ರಾಜ್ಯದಲ್ಲಿ 33 ಸುಸಜ್ಜಿತ ಪೋಕ್ಸೋ ನ್ಯಾಯಾಲಯಗಳಿದ್ದು, ಬೆಂಗಳೂರಲ್ಲಿ ಕೇವಲ 3 ನ್ಯಾಯಾಲಯಗಳು ಮಾತ್ರ ಇವೆ. ಆದರೂ ದಿನನಿತ್ಯ ಒತ್ತಡದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಿದೆ.

ಪೋಕ್ಸೋ ಪ್ರಕರಣದಲ್ಲಿ ಹೆಚ್ಚಗಿ ಬಾಲಕಿಯರೇ ಸಂತ್ರಸ್ಥರಾಗಿರುವುದರಿಂದ ಇವರ ಜತೆಗೆ ತಾಯಂದಿರೂ ನ್ಯಾಯಾಲಯದ ಮುಂದೆ ಬೆಳಗ್ಗೆಯಿಂದ ಸಂಜೆಯ ವರೆಗೂ ಕಾದು ಕುಳಿತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಕರಣಗಳ ಸಂಖ್ಯೆ ಏರುಮುಖ

ಪ್ರಕರಣಗಳ ಸಂಖ್ಯೆ ಏರುಮುಖ

ಸಾರ್ವಜನಿಕರಲ್ಲಿ ಹಾಗೂ ಪೋಷಕರಲ್ಲಿ ಪೋಕ್ಸೋ ಕುರಿತು ಜಾಗೃತಿ ಉಂಟಾಗಿರುವ ಪರಿಣಾಮ ದೂರುಗಳು ಹೆಚ್ಚಾಗಿ ದಾಖಲಾಗುತ್ತಿವೆ. 2015ರಲ್ಲಿ 273, 2017ರಲ್ಲಿ 317, 2017ರಲ್ಲಿ 353 ಪ್ರಕರಣಗಳು ದಾಖಲಾಗಿವೆ. 2018ರಲ್ಲಿ ಈಗಾಗಲೇ 308 ಪ್ರಕರಣಗಳು ದಾಖಲಾಗಿವೆ.

ಪೋಕ್ಸೋ ಪ್ರಕರಣದ ನ್ಯಾಯವಾದಿಗಳಿಗೆ ತರಬೇತಿ: ಪರಂ ಇಂಗಿತ ಪೋಕ್ಸೋ ಪ್ರಕರಣದ ನ್ಯಾಯವಾದಿಗಳಿಗೆ ತರಬೇತಿ: ಪರಂ ಇಂಗಿತ

ಪೋಕ್ಸೋ ಪ್ರಕರಣ, ಒಂದು ವರ್ಷದಲ್ಲಿ ತೀರ್ಪು

ಪೋಕ್ಸೋ ಪ್ರಕರಣ, ಒಂದು ವರ್ಷದಲ್ಲಿ ತೀರ್ಪು

ಒಂದು ವರ್ಷದಲ್ಲೇ ತೀರ್ಪುಪೋಕ್ಸೋ ಪ್ರಕರಣಗಳಲ್ಲಿ ಒಂದು ವರ್ಷದೊಳಗೆ ತೀರ್ಪು ನೀಡಬೇಕು ಎನ್ನುವ ಗುರಿ ಇದೆ. ಆದರೆ ಪೂರಕವಾದ ವಾತಾವರಣ ಇರಬೇಕು. ಮಕ್ಕಳ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಅತ್ಯಂತ ಸೂಕ್ಷ್ಮವಾಗಿ ವಿಚಾರಣೆ ನಡೆಸಬೇಕಾದ ಪೋಕ್ಸೋ ನ್ಯಾಯಾಲಯಗಳ ಸಂಖ್ಯೆಯನ್ನೂ ಹೆಚ್ಚಿಸಬೇಕು ಎನ್ನುತ್ತಾರೆ.

ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದ ಕಿರಾತಕರಿಗೆ ಮರಣ ದಂಡನೆ: ಐತಿಹಾಸಿಕ ತೀರ್ಪು ಅಪ್ರಾಪ್ತೆ ಮೇಲೆ ದೌರ್ಜನ್ಯ ಎಸಗಿದ್ದ ಕಿರಾತಕರಿಗೆ ಮರಣ ದಂಡನೆ: ಐತಿಹಾಸಿಕ ತೀರ್ಪು

ಪ್ರಕರಣಗಳ ಗೌಪ್ಯ ವಿಚಾರಣೆ

ಪ್ರಕರಣಗಳ ಗೌಪ್ಯ ವಿಚಾರಣೆ

ಪೋಕ್ಸೋ ದೂರುಗಳು ಬಹಳ ಸೂಕ್ಷ್ಮ ಆಗಿರುವುದರಿಂದ ಇತರೆ ಪ್ರಕರಣಗಳಂತೆ ತೆರೆದ ನ್ಯಾಯಾಲಯಗಳಲ್ಲಿ ನಡೆಸಲು ಸಾಧ್ಯವಿಲ್ಲ, ಗೌಪ್ಯವಾಗಿ ವಿಚಾರಣೆ ನಡೆಸಬೇಕಾಗುತ್ತದೆ. ಪ್ರತಿಯೊಂದು ಪ್ರಕರಣವನ್ನೂ ಬಹಳ ಸೂಕ್ಷ್ಮವಾಗಿ, ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ.ಇದಕ್ಕೆಲ್ಲಾ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ.

ಬೆಂಗಳೂರು: ಜೆಜೆ ನಗರದಲ್ಲಿ 5ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ ಬೆಂಗಳೂರು: ಜೆಜೆ ನಗರದಲ್ಲಿ 5ರ ಬಾಲೆ ಮೇಲೆ ಲೈಂಗಿಕ ದೌರ್ಜನ್ಯ

ದೂರು ಕುರಿತು ದುರಪಯೋಗ ಹೆಚ್ಚು

ದೂರು ಕುರಿತು ದುರಪಯೋಗ ಹೆಚ್ಚು

ಪೊಲೀಸರಿಗೆ ದೂರು ಬಂದ ತಕ್ಷಣ, ಆರೋಪಿಯನ್ನು ಬಂಧಿಸುತ್ತಾರೆ, ಕೆಳ ಹಂತದ ನ್ಯಾಯಾಲಯಗಳು ಜಾಮೀನು ನೀಡುವುದಿಲ್ಲ, ಹೀಗಾಗಿ ಮಕ್ಕಳ ರಕ್ಷಣೆಗಾಗಿ ಇರುವ ಕಾನೂನನ್ನು ಸಾರ್ವಜನಿಕರು ದುರಪಯೋಗ ಪಡಿಸಿಕೊಳ್ಳುವ ಪ್ರಕರಣಗಳು ಶೇ.15ರಿಂದ 20ರಷ್ಟು ಏರಿಕೆಯಾಗುತ್ತಿದೆ. ಹಾಗಾಗಿ ಯಾವ ದೂರುಗಳು ಬಂದರೂ ಕೂಡ ಗಂಭೀರವಾಗಿ ತೆಗೆದುಕೊಂಡು ನಿಧಾನವಾಗಿ ವಿಚಾರಣೆ ನಡೆಸಿದಾಗ ಸತ್ಯಗಳು ಹೊರಬೀಳುತ್ತದೆ.

English summary
In a shocking revelation, sexual harassment on children drastically increasing as POCSO court in Bengaluru has received 320 cases in the last three months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X