• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ವಿಧೇಯ ಡಿವಿಎಸ್‌ಗೆ ಯಾವ ಖಾತೆ?

|

ನವದೆಹಲಿ, ನ.9 : ಪ್ರಧಾನಿ ನರೇಂದ್ರ ಮೋದಿ ತಮ್ಮ ಸಚಿವ ಸಂಪುಟಕ್ಕೆ ಇಂದು 21 ನೂತನ ಸಚಿವರನ್ನು ಸೇರಿಸಿಕೊಂಡಿದ್ದಾರೆ. ಯಾರಿಗೆ ಯಾವ ಖಾತೆ ಎಂಬ ಲೆಕ್ಕಾಚಾರಗಳು ಆರಂಭವಾಗಿದ್ದು, ರೈಲ್ವೆ ಸಚಿವ ಡಿ.ವಿ.ಸದಾನಂದ ಗೌಡರಿಗೆ ಖಾತೆ ಕೈತಪ್ಪಲಿದೆಯೇ? ಎಂಬ ಮಾತು ಕೇಳಿಬರುತ್ತಿದೆ.

ರೈಲ್ವೆ ಇಲಾಖೆಯಲ್ಲಿ ಸದಾನಂದ ಗೌಡರು ಪ್ರಧಾನಿ ನರೇಂದ್ರ ಮೋದಿ ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ. ಆದ್ದರಿಂದ ಅವರ ಖಾತೆ ಬದಲಾವಣೆಯಾಗಲಿದೆ ಎಂದು ಮಾಧ್ಯಮಗಳಲ್ಲಿ ಉಹಾಪೋಹ ಸುಳಿದಾಡುತ್ತಿದೆ. ಇಂದು ರಾತ್ರಿ ಅಥವ ನಾಳೆ ಖಾತೆ ಹಂಚಿಕೆ ಅಂತಿಮಗೊಳ್ಳುವ ಸಾಧ್ಯತೆ ಇದ್ದು, ಆಗ ಯಾರಿಗೆ ಯಾವ ಖಾತೆ? ಗೌಡರಿಗೆ ಏನು ಸಿಗುತ್ತೆ ಎನ್ನುವುದು ಗೊತ್ತಾಗತ್ತೆ.

ರೈಲ್ವೆ ಇಲಾಖೆಯಲ್ಲಿ 49 % ರಷ್ಟು ಖಾಸಗಿ ಬಂಡವಾಳ ಹೂಡಿಕೆಗೆ ಸರ್ಕಾರ ಅವಕಾಶ ನೀಡಿದೆ. ಪ್ರತಿದಿನ 2 ಕೋಟಿ ಜನರು ಸಂಚರಿಸುವ ರೈಲ್ವೆಯನ್ನು ಪ್ರಯಾಣಿಕ ಸ್ನೇಹಿಯಾಗಿ ಮಾಡಬೇಕೆಂಬುದು ಪ್ರಧಾನಿ ಮೋದಿ ಕನಸಾಗಿತ್ತು. ಆದರೆ, ಗೌಡರು ಮೋದಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲ ಎನ್ನುತ್ತಿವೆ ಮಾಧ್ಯಮಗಳು. [ನೂತನ ಸಚಿವರ ಪ್ರಮಾಣ ವಚನ ಚಿತ್ರಗಳು]

ಆದ್ದರಿಂದ, ನೂತನವಾಗಿ ಸಂಪುಟ ಸೇರಿದ ಸುರೇಶ್ ಪ್ರಭು ಅವರಿಗೆ ರೈಲ್ವೆ ಖಾತೆಯ ಜವಾಬ್ದಾರಿ ನೀಡಿ, ಸದಾನಂದ ಗೌಡರಿಗೆ ಬೇರೆ ಖಾತೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ನರೇಂದ್ರ ಮೋದಿ ಅವರ ಮನಸ್ಸಿನಲ್ಲಿ ಏನಿದೆ ಎನ್ನುವುದು ನಿಗೂಢ. [ಸಂಪುಟ ಸೇರಿದ 21 ಸಚಿವರು]

ಹಲವು ದಿನಗಳ ಸುದ್ದಿ : ನರೇಂದ್ರ ಮೋದಿ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದ ದಿನದಿಂದ ಡಿ.ವಿ. ಸದಾನಂದ ಗೌಡರನ್ನು ರೈಲ್ವೆ ಖಾತೆಯಿಂದ ಕೈಬಿಟ್ಟು ಸ್ವಲ್ಪ ಕಡಿಮೆ ಮಹತ್ವದ ಖಾತೆ ನೀಡುಬಹುದು ಎಂಬ ಸುದ್ದಿ ಹಬ್ಬಿದೆ. ಸಚಿವ ಸ್ಥಾನದ ಹೊರೆಯಿಂದ ಮುಕ್ತಗೊಳಿಸಬಹುದು ಎಂಬ ಮಾತುಗಳು ಹರಿದಾಡುತ್ತಿವೆ.

ಪ್ರಧಾನಿ ನರೇಂದ್ರ ಮೋದಿಯವರ ಜಪಾನ್ ಪ್ರವಾಸದ ಸಂದರ್ಭದಲ್ಲಿ ಹೈಸ್ಪೀಡ್ ಇಲ್ಲವೇ ಬುಲೆಟ್ ರೈಲು ಸ್ವಲ್ಪ ಸುದ್ದಿ ಮಾಡಿದ್ದನ್ನು ಬಿಟ್ಟರೆ ಈಗ ಈ ವಿಷಯದಲ್ಲಿ ರೈಲ್ವೆ ಸಚಿವಾಲಯದಲ್ಲಿ ಸಂಪೂರ್ಣ ಮೌನ ಎದ್ದು ಕಾಣುತ್ತಿದೆ. ಯೋಜನೆಗಳು ಘೋಷಣೆಗಳಿದ್ದರೂ ಅನುಷ್ಠಾನದಲ್ಲಿ ವಿಳಂಬವಾಗುತ್ತಿದೆ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆಯಂತೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime minister Narendra Modi inducted 21 new ministers in to NDA cabinet. There were indications that railway minister Sadananda Gowda may be given a different assignment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more