• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಿಎಂ ವಿಡಿಯೋ ಸಂವಾದದಲ್ಲಿ ಶಾಲಾ, ಕಾಲೇಜು ತೆರೆಯುವ ಬಗ್ಗೆ ಪ್ರಸ್ತಾಪವಾಗಿಲ್ಲ: ಸುಧಾಕರ್

|

ಬೆಂಗಳೂರು, ಸೆಪ್ಟೆಂಬರ್ 23: ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆಸ ಸಂವಾದದಲ್ಲಿ ಶಾಲಾ,ಕಾಲೇಜುಗಳನ್ನು ತೆರೆಯುವ ಕುರಿತು ಯಾವುದೇ ಪ್ರಸ್ತಾಪವಾಗಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ 7 ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಇಂದು ವಿಡಿಯೋ ಸಂವಾದ ನಡೆಸಿದರು.ಶಾಲಾ, ಕಾಲೇಜುಗಳ ಪುನರಾರಂಭದ ಕುರಿತು ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿಸಿದರು.

ಕೊವಿಡ್ ನಿಯಂತ್ರಣ, ಸಾವಿನ ಪ್ರಮಾಣ ಯಾವ ರೀತಿ ಹತೋಟಿಗೆ ತರಲಾಗಿದೆ ಎಂದು ಕೂಲಂಕುಷವಾಗಿ ಸಿಎಂ, ಆರೋಗ್ಯ ಸಚಿವರ ಜೊತೆ ಸಂವಾದ ನಡೆಯಿತು.

ಕರ್ನಾಟಕದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದ್ದು 1.54 ಇದೆ, ಆದರೆ 9 ಜಿಲ್ಲೆ ಹೆಚ್ಚು ಸೋಂಕಿತರ ಪ್ರಮಾಣ ಕಳೆದ ಎರಡು ವಾರದಿಂದ ಹೆಚ್ಚು ದಾಖಲಾಗಿವೆ., ಇಲ್ಲಿ ವಿಶೇಷ ಯೋಜನೆ ರೂಪಿಸಿ, ಕಾರ್ಯಪಡೆ ರಚಿಸಿ ಪ್ರತಿ ದಿನ ಈ ಜಿಲ್ಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸೋಂಕು ಪ್ರಮಾಣ ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದಾರೆ.

ಸಾವಿನ ಪ್ರಮಾಣ ಜೂನ್ ಜುಲೈ ನಲ್ಲಿ ಶೇ. 2.8-2.3 ಇಂದು 1.45 ಕ್ಕೆ ಬಂದಿದೆ, ಸೋಂಕಿತರ ಪದ ಮಾಣ7-8.ಸಾವಿರ ಬೇಸರ ತರಿಸಿದೆ, ಪಾಸಿಟಿವ್ ಪ್ರಕರಣಗಳ ಕಡಿತಕ್ಕೆ ಪ್ರಯತ್ನ ಮಾಡಲಾಗುತ್ತಿದೆ.

ಇವತ್ತು ಪಿಎಂ ನಡೆಸಿದ ಸಭೆಯಲ್ಲಿ ರಾಜ್ಯದ ಸಾವಿನ‌ ಪ್ರಮಾಣದ ಬಗ್ಗೆ ಚರ್ಚೆ ನಡೆದಿದೆ.9 ಜಿಲ್ಲೆಗಳಲ್ಲಿ ಸಾವಿನ ಪ್ರಮಾಣದ ಬಗ ಕಾಳಜಿ ವಹಿಸಲು ವಿಶೇಷ ಟಾಸ್ಕ್ ಪೋರ್ಸ್ ಮಾಡಲು ಸೂಚನೆ ಕೊಡಲಾಗಿದೆ..

ಟೆಸ್ಟ್ ಪ್ರಮಾಣವನ್ನು ಮೂರು ಪಟ್ಟು ಹೆಚ್ಚು ಮಾಡಲು ಸೂಚನೆ ಕೊಡಲಾಗಿದೆ..RTPCR ಟೆಸ್ಟ್ ಗೆ ಹೆಚ್ಚಿನ ಆದ್ಯತೆ ನೀಡಲು ಸೂಚನೆ ಕೊಡಲಾಗಿದೆ...

ಟೆಲಿ ಐಸಿಯು ನಾವು ಬಹಳ ಹಿಂದೆಯೇ ಮಾಡಿದ್ದೇವೆ, ರೋಗದ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ.

ಮಾಸ್ಕ್ ಹಾಕೋದು ಜೀವನದ ಒಂದು ಭಾಗವಾಗಬೇಕಿದೆ.ಮುಂದಿನ ದಿನಗಳಲ್ಲಿ ಬರುವ ಹಬ್ಬಗಳ ವೇಳೆ ಎಚ್ಚರಿಕೆ ವಹಿಸಲು ತಿರ್ಮಾನಿಸಲಾಗಿದೆ.

ಕೊವಿಡ್ ನಿಗ್ರಹಕ್ಕೆ ಅನುದಾನ ಬಳಕೆ

ಕೊವಿಡ್ ನಿಗ್ರಹಕ್ಕೆ ಅನುದಾನ ಬಳಕೆ

Sdrf ನಿಧಿ ಶೇ. 50. ರಷ್ಟು ಇನ್ನು‌ ಮುಂದೆ ಕೋವಿಡ್ ನಿಗ್ರಹಕ್ಕೆ ಅನುದಾನ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದಾರೆ ಇದು ರಾಜ್ಯ ಸರ್ಕಾರಕ್ಕೆ ಬಹಳ ಅನುಕೂಲವಾಗಿದೆ.

ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ಸೂಚನೆ

ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ಸೂಚನೆ

ಪರೀಕ್ಷಾ ಸಾಮರ್ಥ್ಯ ಹೆಚ್ಚು ಮಾಡಿ, rtpcr. ಮೂರು ಪಟ್ಟು ಹೆಚ್ಚು ಮಾಡಲು ಎಲ್ಲಾ ರಾಜ್ಯಕ್ಕೂ ಸೂಚಜೆ ನೀಡಿದ್ದಾರೆ, ರೋಗಲಕ್ಷಣ ಇದ್ದು ನೆಗಟಿವ್ ಬಂದರೆ rtpcr ಮಾಡಲು ಹೇಳಿದ್ದಾರೆ, ನಮ ಲ್ಯಾಬ್ ಪರೀಕ್ಷೆ ಸಂಖ್ಯೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ..

ಹೊಸ ಪದ್ಧತಿ ರೂಢಿ

ಹೊಸ ಪದ್ಧತಿ ರೂಢಿ

ಹೊಸ ಪದ್ದತಿ ನಾವು ರೂಢಿ ಮಾಡಿದ್ದೇವೆ, ಟಿಲಿ ಐಸಿಯು ಮಾಡುವುದಾಗಿ ಮಹಾರಾಷ್ಟ್ರ ಹೇಳಿದೆ, ನಾವು ಕಳೆದ ಐದು ತಿಂಗಳ ಹಿಂದೆಯೇ ಮಾಡಿದ್ದೆವು, ನಾವೇ ಮೊದಲು..

ನಾಗರಿಕರ ಸಹಭಾಗಿತ್ವದಲ್ಲಿ ಕೊರೊನಾ ನಿಯಂತ್ರಣ ಸಾಧ್ಯ ಎಂದು ಪಿಎಂ ಹೇಳಿದ್ದಾರೆ, ಜನರಲ್ಲಿ ಜಾಗೃತಿ, ಅರಿವು ಮೂಡಿಸುವ ಕೆಲಸ, ಕಡ್ಡಾಯ ಮಾಸ್ಕ್ ಧರಿಸಬೇಕು, ಜೀವನದ ಒಂದು ಭಾಗ ಆಗಬೇಕು ಎಂದು ಹೇಳಿ ಅದಕ್ಕೆ ಒತ್ತು ಕೊಡಲು ಕೊಟ್ಟಿದ್ದಾರೆ..

  Karnataka ಬಂದ್ ಯಾವಾಗ ಅನ್ನೋದು ಕೊನೆಗೂ ನಿಗದಿ | Oneindia Kannada
  ಸಾಮಾಜಿಕ ಪ್ರಜ್ಞೆ ಇರಬೇಕು

  ಸಾಮಾಜಿಕ ಪ್ರಜ್ಞೆ ಇರಬೇಕು

  ಹಬ್ಬಗಳು ಬರುತ್ತಿವೆ, ಲಸಿಕೆ ಇಲ್ಲದ ಕಾರಣ ಸಾಮಾಜಿಕ ಪ್ರಜ್ಞೆ ಇಡಬೇಕು ಅದರ ಮೂಲಕ ನಿಗ್ರಹ ಸಾಧ್ಯ, ನಾಗರಿಕರಲ್ಲಿ ಪ್ರಮುಖ ಪ್ರಜ್ಞೆ ಹೆಚ್ಚು ಇದ್ದ ಕಡೆ ಕಡಿಮೆ ಸೋಂಕು ಇದೆ.

  English summary
  In a conversation with Prime Minister Narendra Modi, there is no mention of opening schools and colleges, said medical education minister Dr Sudhakar.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X