ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಒಬ್ಬ ಡಿಕ್ಟೇಟರ್ : ಕೃಷಿ ಸಚಿವ ಕೃಷ್ಣ ಭೈರೇಗೌಡ ಸಂದರ್ಶನ

By ಬಾಲರಾಜ್ ತಂತ್ರಿ
|
Google Oneindia Kannada News

Recommended Video

ಮೋದಿ ಒಬ್ಬ ಡಿಕ್ಟೇಟರ್ : ಕೃಷಿ ಸಚಿವ ಕೃಷ್ಣ ಭೈರೇಗೌಡ ಸಂದರ್ಶನ | Oneindia Kannada

ಸಿದ್ದರಾಮಯ್ಯನವರ ಸರಕಾರದ ಯುವ ಸಚಿವರಲ್ಲಿ ಕೃಷ್ಣ ಭೈರೇಗೌಡ ಕೂಡಾ ಒಬ್ಬರು. ಬೆಂಗಳೂರಿನ ಬ್ಯಾಟರಾಯನಪುರ ಕ್ಷೇತ್ರವನ್ನು ಸತತ ಎರಡು ಬಾರಿ ಪ್ರತಿನಿಧಿಸುತ್ತಿರುವ ಕೃಷ್ಣ ಭೈರೇಗೌಡ, ಹಾಲೀ ಕೃಷಿ ಸಚಿವರೂ ಕೂಡಾ.

ಜಿಎಸ್ಟಿ ಕೌನ್ಸಿಲ್ ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೃಷ್ಣ ಭೈರೇಗೌಡ ಅವರು ರಾಮಕೃಷ್ಣ ಹೆಗಡೆ ಮತ್ತು ಜೆ ಎಚ್ ಪಟೇಲ್ ಅವಧಿಯಲ್ಲಿ ಸಚಿವರಾಗಿದ್ದ ಮತ್ತು ವೇಮಗಲ್ ಕ್ಷೇತ್ರದ ಶಾಸಕರಾಗಿದ್ದ ಸಿ ಭೈರೇಗೌಡರ ಪುತ್ರ.

ಕರ್ನಾಟಕದ ರೈತರ ಪಾಲಿನ ಸೌಭಾಗ್ಯ 'ಕೃಷಿ ಭಾಗ್ಯ' ಕರ್ನಾಟಕದ ರೈತರ ಪಾಲಿನ ಸೌಭಾಗ್ಯ 'ಕೃಷಿ ಭಾಗ್ಯ'

ಇನ್ನೇನು ಎರಡು ತಿಂಗಳಲ್ಲಿ ಕರ್ನಾಟಕ ಅಸೆಂಬ್ಲಿ ಚುನಾವಣೆಯನ್ನು ಎದುರಿಸಲಿದೆ. ಈ ಸಂದರ್ಭದಲ್ಲಿ ಕೃಷ್ಣ ಭೈರೇಗೌಡ, ತಮ್ಮ ಇಲಾಖೆ, ತಮ್ಮ ಸರಕಾರದ ಸಾಧನೆ, ಪ್ರಧಾನಿ ಮೋದಿ ಮುಂತಾದ ವಿಚಾರಗಳನ್ನು 'ಒನ್ ಇಂಡಿಯಾ' ಜೊತೆ ಮುಕ್ತವಾಗಿ ಹಂಚಿಕೊಂಡಿದ್ದಾರೆ. ಸಚಿವರ ಜೊತೆಗಿನ ಸಂದರ್ಶನ ಆಯ್ದಭಾಗ ಇಂತಿದೆ.

ಪ್ರ: ಕಡಲೆ ಬೆಳೆಗಾರರ ಖಾತೆಗೆ ಸರಕಾರ ಸಂದಾಯ ಮಾಡುವ ಖರೀದಿ ಹಣವನ್ನು ಬ್ಯಾಂಕಿನವರು ರೈತರ ಸಾಲದ ಅಕೌಂಟಿಗೆ ಜಮಾ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾಹಿತಿಯಿದೆ. ಈ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಾ?

ಕೃಷ್ಣ: ಬ್ಯಾಂಕರ್ಸ್ ಕಮಿಟಿಗೆ ಮನವಿ ಮಾಡಿದ್ದೇವೆ. ಆದರೆ, ಬ್ಯಾಂಕುಗಳು ಆರ್ಬಿಐ ಕೆಳಗೆ ಕೆಲಸ ಮಾಡುತ್ತಿರುವುದರಿಂದ ಅವರದ್ದೇ ಆದ ನಿಯಮಗಳನ್ನು ಅವರು ಪಾಲಿಸಿಕೊಂಡು ಬರುತ್ತಾರೆ. ರಾಜ್ಯ ಸರಕಾರ ನೀಡುವ ಹಣವನ್ನು ಸಾಲದ ಅಕೌಂಟಿಗೆ ಜಮೆ ಮಾಡಿಕೊಳ್ಳಬಾರದೆಂದು ಕೇಂದ್ರ ಸರಕಾರಕ್ಕೂ ನಾವು ಮನವಿ ಮಾಡಿದ್ದೇವೆ. ..ಮುಂದೆ ಓದಿ..

ನಾವು ಜಿಎಸ್ಟಿ ಪರನೇ, ಆದರೆ ಅನುಷ್ಠಾನ ಸರಿಯಾಗಿ ಆಗಲಿಲ್ಲ

ನಾವು ಜಿಎಸ್ಟಿ ಪರನೇ, ಆದರೆ ಅನುಷ್ಠಾನ ಸರಿಯಾಗಿ ಆಗಲಿಲ್ಲ

ಪ್ರ: ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಕರ್ನಾಟಕವನ್ನು ನೀವು ಪ್ರತಿನಿಧಿಸುತ್ತಿದ್ದೀರಾ, ಒಟ್ಟಾರೆಯಾಗಿ ಈ ಹೊಸ ತೆರಿಗೆ ಪದ್ದತಿಯ ಬಗ್ಗೆ ನಿಮ್ಮ ಅಭಿಪ್ರಾಯ? ಏನಾದರೂ ಮಹತ್ವದ ಬದಲಾವಣೆ ಇದರಲ್ಲಿ ಆಗಬೇಕಿದೆಯಾ?
ಕೃಷ್ಣ: ಜಿಎಸ್ಟಿ ಆಗಲೇಬೇಕಾದಂತಹ ಬದಲಾವಣೆ. ಇದು ತೆರಿಗೆ ಸುಧಾರಣೆ ಕ್ರಮ, ನಾವು ಇದಕ್ಕೆ ಬೆಂಬಲ ನೀಡಿದ್ದೇವೆ. ಇದನ್ನು 2006ರಲ್ಲಿ ಮಾನ್ಯ ವಿತ್ತ ಸಚಿವರಾಗಿದ್ದ ಚಿದಂಬರಂ ಆರಂಭ ಮಾಡಿದ್ರು ಮತ್ತು 2009ರಲ್ಲಿ ಇದಕ್ಕೆ ಸ್ಪಷ್ಟ ರೂಪವನ್ನು ಕೊಟ್ಟಿದ್ದರು, ಸಂಸತ್ತಿನಲ್ಲಿ ಮಂಡನೆಯನ್ನೂ ಮಾಡಿದ್ದರು. ಆರು ತಿಂಗಳು ಇದನ್ನೂ ಸ್ಟಡಿ ಮಾಡಿ ಜಾರಿಗೆ ತರಬಹುದಾಗಿತ್ತು,

ಆದರೆ ತರಾತುರಿಯಲ್ಲಿ ಜಾರಿಗೆ ತಂದರು. ಇದು ಜಾರಿಗೆ ಬಂದಾಗ ಐಟಿ ಸಿಸ್ಟಂ ಸಂಪೂರ್ಣವಾಗಿ ತಯಾರಿರಲಿಲ್ಲ, ಇದು ಗೊಂದಲಕ್ಕೆ ಕಾರಣವಾಯಿತು. ಇದರಿಂದ ಹೊರಬರಲು ಜಿಎಸ್ಟಿಯ ಮೂಲಸ್ವರೂಪದಿಂದ ಹೊರಬರುವಂತಹ ಕೆಲಸವಾಯಿತು. ರಿಟರ್ನ್ಸ್ ಫೈಲ್ ಮಾಡುವಲ್ಲಿ ಸರಳೀಕರಣ ಇರಲಿಲ್ಲ.

ಆದರೆ ಈಗ ಪ್ರಯತ್ನ ನಡೆಯುತ್ತಿದೆ. ಕೆಲವೊಂದು ವಸ್ತುಗಳನ್ನು 28% ತೆರಿಗೆ ಬ್ರಾಕೆಟ್ ನಲ್ಲಿಟ್ಟರು. ನಾವು ಜಿಎಸ್ಟಿ ಪರನೇ, ಆದರೆ ಅನುಷ್ಠಾನ ಸರಿಯಾಗಿ ಆಗಲಿಲ್ಲ. ನಮ್ಮ ಸಲಹೆಗಳನ್ನು ಕೆಲವೊಮ್ಮೆ ಪಡೆದಿದ್ದೂ ಇದೆ, ತಿರಸ್ಕಾರ ಮಾಡಿದ ಉದಾಹರಣೆಗಳೂ ಇವೆ.

ಕೇಂದ್ರ ಸರಕಾರ 24 ವಸ್ತುಗಳಿಗೆ ದರ ನಿಗದಿ ಮಾಡುತ್ತದೆ

ಕೇಂದ್ರ ಸರಕಾರ 24 ವಸ್ತುಗಳಿಗೆ ದರ ನಿಗದಿ ಮಾಡುತ್ತದೆ

ಪ್ರ: MSP (ಮಿನಿಮಂ ಸಪೋರ್ಟ್ ಪ್ರೈಸ್) ಬಗ್ಗೆ ಸ್ವಲ್ಪ ವಿವರಿಸುತ್ತೀರಾ?

ಕೃಷ್ಣ: ಕನಿಷ್ಟ ಬೆಂಬಲ ಬೆಲೆ ಏನಿದೆಯೋ, ಅದು ಇವತ್ತಲ್ಲಾ, ಸುಮಾರು 30-40ವರ್ಷಗಳಿಂದ ಕೇಂದ್ರ ಸರಕಾರವೇ ನಿರ್ಧರಿಸುವುದು. ಕೃಷಿ ಬೆಲೆ ವೆಚ್ಚಗಳ ಆಯೋಗದ ಮೂಲಕ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಅದರ ಆಧಾರದ ಮೇಲೆ ಮುಂಗಾರು ಮತ್ತು ಹಿಂಗಾರು ಬೆಳೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರ 24 ವಸ್ತುಗಳಿಗೆ ದರ ನಿಗದಿ ಮಾಡುತ್ತದೆ.

ಮೋದಿ ಒಬ್ಬ ಡಿಕ್ಟೇಟರ್ : ಕೃಷ್ಣ ಭೈರೇಗೌಡ ಸಂದರ್ಶನ

ಮೋದಿ ಒಬ್ಬ ಡಿಕ್ಟೇಟರ್ : ಕೃಷ್ಣ ಭೈರೇಗೌಡ ಸಂದರ್ಶನ

ಪ್ರ; ಕರ್ನಾಟಕ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯ, ಕೇಂದ್ರದಿಂದ ಬರಬೇಕಾಗಿರುವ ತೆರಿಗೆ ಹಣಗಳು ಸರಿಯಾಗಿ ಬರುತ್ತಿದೆಯೇ? ನೀವೇನು ನಮಗೆ ಉದಾರತನ ತೋರುತ್ತಿಲ್ಲ ಎಂದು ಅಮಿತ್ ಶಾ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದೀರಿ?
ಕೃಷ್ಣ: ನಮ್ಮ ದುರಾದೃಷ್ಟ ಅಮಿತ್ ಶಾ ಮತ್ತು ಪ್ರಧಾನಿಗಳು ರಾಜ್ಯಕ್ಕೆ ಬಂದಾಗ ಬರೀ ಸುಳ್ಳನ್ನು ಹೇಳಿ ಹೋಗುತ್ತಿದ್ದಾರೆ. ಕರ್ನಾಟಕಕ್ಕೆ ಬರುವ ಎಲ್ಲಾ ಹಕ್ಕು ಅವರಿಗಿದೆ, ಕಾಂಗ್ರೆಸ್ ಮುಕ್ತ್ ಭಾರತ್ ಎನ್ನುವ ಮನೋಭಾವನೆ ಅವರಿಗಿದೆ, ನಮಗಿಲ್ಲ. ಯಾರನ್ನೂ ನಿರ್ಮೂಲನೆ ಮಾಡುತ್ತೇವೆ ಎನ್ನುವ ಮಾತನ್ನು ನಾವು ಆಡುವುದಿಲ್ಲ. ಅದು ಅವರ ಡಿಕ್ಟೇಟರ್ ಶಿಪ್ ಮೈಂಡ್ ಸೆಟ್ ಇರುವುದನ್ನು ತೋರಿಸುತ್ತದೆ, ಸೊಂಟದ ಕೆಳಗಿನ ಮಾತು ಅವರದ್ದು.

ದೇಶದ ಪ್ರಧಾನಿಯಾಗಿ ಇದನ್ನು ನಾವು ನಿರೀಕ್ಷಿಸುವುದಿಲ್ಲ. ರಾಜಕೀಯ ಹೊರತು ಪಡಿಸಿ ಮಾತನಾಡುವುದಾದರೆ, ಇಂತಹ ಸಣ್ಣತನವನ್ನು ಪ್ರಧಾನಿ ತೋರಿಸುತ್ತಿದ್ದಾರಲ್ಲಾ ಎಂದು ಬೇಸರವಾಗುತ್ತದೆ. 2-3ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ಬಂದು ಸುಳ್ಳು ಹೇಳುತ್ತಾರೆ. ಮೂರು ವರ್ಷದಲ್ಲಿ 95ಸಾವಿರ ಕೋಟಿ ಬರಬೇಕಾಗಿತ್ತು, ಬಂದಿದ್ದು 84ಸಾವಿರ ಕೋಟಿ. ನಮಗೆ ಕೊಡುವ ಹಣ ಕೊಡಿ. ಇದು ಕೇಂದ್ರ ಕೊಡುತ್ತಿರುವ ಹಣವಲ್ಲ, ಕರ್ನಾಟಕಕ್ಕೆ ಬರುತ್ತಿರುವುದು ನೂರಕ್ಕೆ 47 ರೂಪಾಯಿ ಮಾತ್ರ.

ಕರ್ನಾಟಕದ ತೆರಿಗೆ ದುಡ್ಡು ಇತರ ಬಿಜೆಪಿ ರಾಜ್ಯಕ್ಕೆ ಹೋಗುತ್ತಿದೆ, ಇದಕ್ಕೆ ನನ್ನ ಅಭ್ಯಂತರವಿಲ್ಲ. ಕೆಲವು ತೆರಿಗೆಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಕೇಂದ್ರ ನಿಭಾಯಿಸುತ್ತಿರುವುದು ನಮ್ಮ ಸಂವಿಧಾನದ ಪದ್ದತಿ, ಒಂದು ಲೆಕ್ಕದಲ್ಲಿ ಕೇಂದ್ರ ಇತರ ರಾಜ್ಯಗಳ ಕಲೆಕ್ಷನ್ ಏಜೆಂಟ್. ಮೋದಿ ಮತ್ತು ಅಮಿತ್ ಶಾ ಹೇಳುತ್ತಿರುವುದು ಕನ್ನಡಿಗರಿಗೆ ಮಾಡುತ್ತಿರುವ ಅವಮಾನ.

ಬರೆದಿಟ್ಟುಕೊಳ್ಳಿ, ಕರ್ನಾಟಕದಲ್ಲೂ ನಾವೇ ಗೆಲ್ಲುತ್ತೇವೆ

ಬರೆದಿಟ್ಟುಕೊಳ್ಳಿ, ಕರ್ನಾಟಕದಲ್ಲೂ ನಾವೇ ಗೆಲ್ಲುತ್ತೇವೆ

ಪ್ರ: ಬರೆದಿಟ್ಟುಕೊಳ್ಳಿ, ಕರ್ನಾಟಕದಲ್ಲೂ ನಾವೇ ಗೆಲ್ಲುತ್ತೇವೆ ಎಂದು ಅಮಿತ್ ಶಾ ಹೇಳಿದ್ದಾರಲ್ಲಾ, ಈ ಬಗ್ಗೆ ಏನು ಹೇಳ್ತೀರಾ?

ಕೃಷ್ಣ: ಅಮಿತ್ ಶಾ ಹೇಳದ ಮಾತೇ ಇಲ್ಲ, ಎಲ್ಲರ ಅಕೌಂಟಿಗೆ ಹದಿನೈದು ಲಕ್ಷ ದುಡ್ಡು ಹಾಕುತ್ತೇವೆ ಎಂದರು, ಆಮೇಲೆ ಹೇಳಿದರು ಚುನಾವಣೆ ಗೆಲ್ಲಲು ಹೇಳಿದ ಜುಮ್ಲಾ ಎಂದು. ಮೊದಲು ಹದಿನೈದು ಲಕ್ಷ ಬೇಡ, ಹದಿನೈದು ರೂಪಾಯಿ ಆದರೂ ಹಾಕಿ, ಆಮೇಲೆ ಅವರ ಮಾತನ್ನು ನಂಬುತ್ತೇವೆ.

ಇವಿಎಂ ಬೇಕಾ, ಬ್ಯಾಲೆಟ್ ಪೇಪರ್ ಸರೀನಾ?

ಇವಿಎಂ ಬೇಕಾ, ಬ್ಯಾಲೆಟ್ ಪೇಪರ್ ಸರೀನಾ?

ಪ್ರ: ಪಕ್ಷಾತೀತವಾಗಿ, ಒಬ್ಬರು ಶಾಸಕರಾಗಿ ನೀವು ಹೇಳುವುದಾದರೆ, ಇವಿಎಂ ಬೇಕಾ, ಬ್ಯಾಲೆಟ್ ಪೇಪರ್ ಸರೀನಾ?

ಕೃಷ್ಣ: ಇಲೆಕ್ಟ್ರಾನಿಕ್ ದಿಕ್ಕಿನಲ್ಲೇ ನಾವು ಹೋಗಬೇಕು ಆದರೆ ನಾನಾ ಕಾರಣಗಳಿಂದ ಅನುಮಾನಗಳು ಬೆಳೆಯುತ್ತಿದೆ. ಅನುಮಾನಕ್ಕೆ ತಿಳಿಹೇಳುವ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕು. ಇವಿಎಂ ಮೇಲಿರುವ ಅನುಮಾನ ಬೆಳೆಯುತ್ತಿರುವುದಕ್ಕೆ ಆಯೋಗ ಅತ್ಯಂತ ಸ್ಪಷ್ಟವಾಗಿ ಉತ್ತರ ಕೊಡಬೇಕಾಗಿದೆ. ಆಯೋಗದ ಸ್ಪಂದನೆ ಕಮ್ಮಿಯಾಗುತ್ತಿದೆ, ಇದಕ್ಕೆ ಆಯೋಗ ಕೂಡಲೇ ಸ್ಪಂಧಿಸಬೇಕು.

English summary
Prime Minister Narendra Modi is a dictator, Agriculture Minister Krishna Byre Gowda - Part 1. In an exclusive interview with Oneindia, Minister expressed his views on various issue like, Union Government functioning, PM Modi, GST and EVM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X