ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಪ್ರಧಾನಿ ಮೋದಿಯಿಂದ ಮುಖ್ಯಮಂತ್ರಿ ಬಿಎಸ್ವೈಗೆ ಬಂದ ಸೂಚನೆ

|
Google Oneindia Kannada News

ನವದೆಹಲಿ, ಮಾರ್ಚ್ 27: ಇಡೀ ದೇಶದಲ್ಲಿ ಮುಂದಿನ ಏಪ್ರಿಲ್ 14ರವರೆಗೆ ಲಾಕ್ ಡೌನ್ ಘೋಷಣೆಯಾಗಿದ್ದರೂ, ಹಲವು ರಾಜ್ಯಗಳು ಅದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ.

ಕರ್ನಾಟಕದಲ್ಲೂ ಸರಕಾರ ಮತ್ತು ಪೊಲೀಸರ ಆದೇಶವನ್ನು ಉಲ್ಲಂಘಿಸಿ, ಸಾರ್ವಜನಿಕರು ಓಡಾಡುತ್ತಿರುವುದನ್ನು ನಿಯಂತ್ರಿಸಲು ಆಡಳಿತ ವ್ಯವಸ್ಥೆ ಹರಸಾಹಸ ಪಡುತ್ತಿದೆ.

ಕೊರೊನಾ ಸೋಂಕಿತರ ಟ್ರ್ಯಾಕ್ ಮಾಡಲು Corona Watch Appಕೊರೊನಾ ಸೋಂಕಿತರ ಟ್ರ್ಯಾಕ್ ಮಾಡಲು Corona Watch App

ಈ ನಡುವೆ, ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಹೊಸ ಸೂಚನೆ ಬಂದಿದೆ ಎಂದು ವರದಿಯಾಗಿದೆ.

PM Modi Unhappy With People Are Coming Out In The Crucial Period, Given Direction To CM

"ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ತುಂಬಾ ಜಾಗರೂಕತೆಯಿಂದ ಇರಬೇಕಾಗಿರುವ ಸಮಯವಿದು. ಆದರೆ, ಕರ್ನಾಟಕದಲ್ಲಿ ಲಾಕ್ ಡೌನ್ ಆದೇಶಕ್ಕೆ ಜನ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುವ ಮಾಹಿತಿಯಿದೆ".

"ಸಾರ್ವಜನಿಕರ ಓಡಾಟ ಈ ಕೂಡಲೇ ನಿಯಂತ್ರಣಕ್ಕೆ ಬರಬೇಕು. ಕೂಡಲೇ ಸೂಕ್ತ ಕ್ರಮವನ್ನು ತೆಗೆದುಕೊಳ್ಳಿ" ಎನ್ನುವ ಸೂಚನೆ, ಮುಖ್ಯಮಂತ್ರಿಗಳಿಗೆ, ಪ್ರಧಾನಿಗಳಿಂದ ಬಂದಿದೆ ಎಂದು ವರದಿಯಾಗಿದೆ.

ಕೊರೊನಾ; ರೈತರಿಂದ ನೇರವಾಗಿ ಮನೆ ಬಾಗಿಲಿಗೆ ತರಕಾರಿಕೊರೊನಾ; ರೈತರಿಂದ ನೇರವಾಗಿ ಮನೆ ಬಾಗಿಲಿಗೆ ತರಕಾರಿ

ಗುರುವಾರ (ಮಾ 26) ಜಿಲ್ಲಾಧಿಕಾರಿಗಳ ಜೊತೆ ನಡೆದ ವಿಡಿಯೋ ಕಾನ್ಪರೆನ್ಸ್ ನಲ್ಲಿ, ಸುಮ್ಮನೇ ರಸ್ತೆಯಲ್ಲಿ ತಿರುಗಾಡುವವರ ವಿರುದ್ದ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳಿ ಎಂದು ಸಿಎಂ ಯಡಿಯೂರಪ್ಪ ಆದೇಶ ನೀಡಿದ್ದರು.

English summary
PM Modi Unhappy With People Are Coming Out In The Crucial Period, Given Direction To CM
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X