• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದಗಂಗಾ ಶ್ರೀಗಳೇ ಪ್ರಧಾನಿ ಮೋದಿ ಭಾಷಣ ಹೊಗಳಿದ್ದಾರೆ, ನಿಮ್ಮದೇನ್ರೀ..

|
   ಎಚ್ದಿಕೆಗೆ ತಿರುಗೇಟು ಕೊಟ್ಟ ರಾಜ್ಯ ಬಿಜೆಪಿ | Oneindia Kannada

   ಬೆಂಗಳೂರು, ಜ 4: ಪ್ರಧಾನಮಂತ್ರಿ ನರೇಂದ್ರ ಮೋದಿ ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾಡಿದ ಭಾಷಣದ ವಿಚಾರಕ್ಕೆ ಸಂಬಂಧಿಸಿದಂತೆ, ಮೂರು ಪಕ್ಷಗಳ ನಡುವಿನ ಕೆಸೆರೆರೆಚಾಟ ಮುಂದುವರಿದಿದೆ.

   "ಮಾತಿನಲ್ಲೇ ಹೊಟ್ಟೆ ತುಂಬಿಸಿದ ಮೋದಿ" ಎಂದು ಸಿದ್ದರಾಮಯ್ಯ ಟೀಕಿಸಿದ್ದರೆ, "ನೀವು ಭಾರತದ ಪ್ರಧಾನಿಯೋ, ಪಾಕಿಸ್ತಾನದ್ದೋ" ಎಂದು ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

   ಇದಕ್ಕೆ ಬಿಜೆಪಿ ಐಟಿ ಘಟಕ ತಿರುಗೇಟು ನೀಡಿದ್ದು, "ಖುದ್ದು ಸಿದ್ದಗಂಗಾ ಮಠದ ಶ್ರೀಗಳೇ ಮೋದಿ ಭಾಷಣವನ್ನು ಶ್ಲಾಘಿಸಿರಬೇಕಾದರೆ, ನಿಮ್ಮದೇನ್ರೀ" ಎಂದು ಎರಡೂ ಪಕ್ಷಗಳಿಗೆ ತಿರುಗೇಟು ನೀಡಿದೆ.

   ಮೋದಿಯವರಿಗೆ ಪ್ರಶ್ನೆ ಕೇಳುವ ಸರದಿ ಈಗ ಕುಮಾರಸ್ವಾಮಿ ಅವರದು

   ಎರಡು ದಿನಗಳ ಕರ್ನಾಟಕ ಭೇಟಿಗಾಗಿ ಜನವರಿ ಎರಡರಂದು ಮೋದಿ ಆಗಮಿಸಿ, ತುಮಕೂರು ಮತ್ತು ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮೋದಿ ಭಾಷಣದ ಬಗ್ಗೆ ಸಿದ್ದಗಂಗಾ ಶ್ರೀಗಳು ಹೇಳಿದ್ದಿಷ್ಟು:

   ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ ಕಾರ್ಯಕ್ರಮ

   ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ ಕಾರ್ಯಕ್ರಮ

   "ಮಕ್ಕಳೊಂದಿಗೆ ಪ್ರಧಾನಿ ಮೋದಿ ಸಂವಾದ ಕಾರ್ಯಕ್ರಮವನ್ನು ಮಠವಾಗಲಿ, ಸರಕಾರವಾಗಲಿ ಆಯೋಜಿಸಿರಲಿಲ್ಲ. ಮೋದಿಯವರ ಭಾಷಣ ಹಲವು ವಿಚಾರದಲ್ಲಿ ಮಕ್ಕಳಿಗೆ ಉಪಯುಕ್ತವಾಗಿದೆ" ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.

   ಪ್ಲಾಸ್ಟಿಕ್, ಬಯಲು ಶೌಚಮುಕ್ತ

   ಪ್ಲಾಸ್ಟಿಕ್, ಬಯಲು ಶೌಚಮುಕ್ತ

   "ಪ್ಲಾಸ್ಟಿಕ್, ಬಯಲು ಶೌಚಮುಕ್ತ ವಿಚಾರದಲ್ಲಿ ಮೋದಿಯವರು ಭಾಷಣ ಮಾಡಿದ್ದರು. ಇದು ಮುಂದಿನ ಪೀಳಿಗೆಗಳಿಗೆ ಉಪಯೋಗವಾಗಲಿದೆ. ಮೋದಿಯವರೇ ಸ್ವಪ್ರೇರಣೆಯಿಂದ ಬಂದು ಶಿವಕುಮಾರ ಸ್ವಾಮೀಜಿಗಳ ಗದ್ದುಗೆಯ ದರ್ಶನವನ್ನು ಪಡೆದಿದ್ದಾರೆ" ಎಂದು ಸಿದ್ದಲಿಂಗ ಶ್ರೀಗಳು ಹೇಳಿದ್ದಾರೆ.

   ಕೇಂದ್ರದ ಚಂದಮಾಮನನ್ನು ತೋರಿಸಿ'ಅನರ್ಹ ಸರ್ಕಾರ' ರಚಿಸಿದ್ದಾರೆ:ಎಚ್‌ಡಿಕೆ

   ನೀವು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ್ದೋ

   ನೀವು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ್ದೋ

   "ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಗದ್ದುಗೆಗೆ ನಮಿಸಿ, ವಿದ್ಯಾರ್ಥಿಗಳ ಎದುರು ಭಾಷಣ ಮಾಡಿದ ನೀವು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಏನಾದರೂ ಸಲಹೆ ಕೊಟ್ಟಿರಾ? ಇಲ್ಲ... ಅದು ಬಿಟ್ಟು ಪಾಕಿಸ್ತಾನದ ಜಪ ಮಾಡುತ್ತೀರಿ. ಇದು ನಿಮ್ಮ ರಾಜಕೀಯ, ಅಧಿಕಾರದ ಆಸೆಯನ್ನು ಸಾಬೀತು ಮಾಡುತ್ತದೆ. ನೀವು ಭಾರತದ ಪ್ರಧಾನಿಯೋ ಅಥವಾ ಪಾಕಿಸ್ತಾನದ್ದೋ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದರು.

   ಸಿದ್ದಗಂಗಾ ಮಠದ ಸ್ವಾಮೀಜಿಗಳೇ ಮೋದಿ ಭಾಷಣವನ್ನು ಹೊಗಳಿದ್ದಾರೆ

   ಸಿದ್ದಗಂಗಾ ಮಠದ ಸ್ವಾಮೀಜಿಗಳೇ ಮೋದಿ ಭಾಷಣವನ್ನು ಹೊಗಳಿದ್ದಾರೆ

   "ಮಾನ್ಯ @hd_kumaraswamy ಅವರೇ, ಸಿದ್ದಗಂಗಾ ಮಠದ ಸ್ವಾಮೀಜಿಗಳೇ ಪ್ರಧಾನಿ ಮೋದಿ ಭಾಷಣವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. √ ಪಾಸ್ಟಿಕ್ ನಿಷೇಧ, √ ಬಯಲು ಶೌಚಾಲಯ ಮುಕ್ತ ಕನಸು, √ ಜಲಸಂರಕ್ಷಣೆ ಈ ವಿಚಾರಗಳು ಮಕ್ಕಳಿಗೆ ಪ್ರೇರಣೆ ಎಂದು ಶ್ರೀಗಳೇ ಹೇಳಿರುವಾಗ, ನಿಮ್ಮ ಕುಹಕಕ್ಕೆ ನಾಡಿನ ಜನತೆ ಉತ್ತರಿಸುತ್ತಾರೆ" ಇದು ಬಿಜೆಪಿ, ಎಚ್ಡಿಕೆಗೆ ತಿರುಗೇಟು ನೀಡಿದ್ದು.

    ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರುವುದು ಒಂದು ಗೌರವದ ಸಂಗತಿ

   ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರುವುದು ಒಂದು ಗೌರವದ ಸಂಗತಿ

   "ತುಮಕೂರಿನಲ್ಲಿರುವ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರುವುದು ಒಂದು ಗೌರವದ ಸಂಗತಿ. ಕಳೆದ ಹಲವಾರು ವರ್ಷಗಳಿಂದ ಈ ಮಠವು ತನ್ನ ಅಸಾಧಾರಣ ಸೇವೆಗೆ ಹೆಸರಾಗಿದೆ. ಬಡವರಿಗೆ ಶಿಕ್ಷಣ ನೀಡಿ ಅವರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ" ಎಂದು ಮೋದಿ, ಕನ್ನಡದಲ್ಲಿ ಟ್ವೀಟ್ ಮಾಡಿದ್ದರು.

   English summary
   Prime Minister Narendra Modi Tumakuru Siddaganga Mutt Speech: BJP Reply To HD Kumaraswamy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X