ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

PM Modi in Karnataka : ನೀರಿನ ಸಂರಕ್ಷಣೆ ಬಗ್ಗೆ ಮೋದಿ ಕಾಳಜಿ

|
Google Oneindia Kannada News

ತುಮಕೂರು, ಜನವರಿ 02: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಭೇಟಿಗಾಗಿ ಕರ್ನಾಟಕಕ್ಕೆ ಆಗಮಿಸಿದ್ದಾರೆ. ಗುರುವಾರ ಮತ್ತು ಶುಕ್ರವಾರ ವಿವಿಧ ಕಾರ್ಯಕ್ರಮಗಳಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಮೋದಿ ಭೇಟಿಯ ಹಿನ್ನಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಗುರುವಾರ ಮಧ್ಯಾಹ್ನ 1.20ಕ್ಕೆ ನರೇಂದ್ರ ಮೋದಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಲಿಸಿದರು. ತುಮಕೂರು ಮತ್ತು ಬೆಂಗಳೂರಿನಲ್ಲಿ ಜನವರಿ 2ರಂದು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಜನವರಿ 3ರಂದು ಬೆಂಗಳೂರಿನಲ್ಲಿ ಅವರು ಕಾರ್ಯಕ್ರದಲ್ಲಿ ಪಾಲ್ಗೊಳ್ಳಲಿದ್ದಾರೆ.

6 ಕೋಟಿ ರೈತರಿಗೆ 12,000 ಕೋಟಿ ರೂ ಹಂಚಿಕೆ ಮಾಡಲಿದ್ದಾರೆ ಮೋದಿ6 ಕೋಟಿ ರೈತರಿಗೆ 12,000 ಕೋಟಿ ರೂ ಹಂಚಿಕೆ ಮಾಡಲಿದ್ದಾರೆ ಮೋದಿ

ನರೇಂದ್ರ ಮೋದಿ ಗುರುವಾರ ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಆದ್ದರಿಂದ ಬೆಂಗಳೂರು ನಗರದಲ್ಲಿ ಭದ್ರತೆ ಹೆಚ್ಚಿಸಲಾಗಿತ್ತು. ಪ್ರಧಾನಿ ಸಾಗುವ ಮಾರ್ಗದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.

ನರೇಂದ್ರ ಮೋದಿ ತುಮಕೂರು ಭೇಟಿ ವಿರೋಧಿಸಿದ ರೈತರು ನರೇಂದ್ರ ಮೋದಿ ತುಮಕೂರು ಭೇಟಿ ವಿರೋಧಿಸಿದ ರೈತರು

Narendra Modi

ಗುರುವಾರ ನರೇಂದ್ರ ಮೋದಿ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದರು. ಬಳಿಕ ರೈತ ಸಮಾವೇಶದಲ್ಲಿ ಭಾಗವಹಿಸಿದ್ದರು. ಸಂಜೆ ಬೆಂಗಳೂರಿನ ಡಿಆರ್‌ಡಿಓನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜನವರಿ 2ರಂದು ಸಿದ್ದಗಂಗಾ ಮಠಕ್ಕೆ ನರೇಂದ್ರ ಮೋದಿ ಭೇಟಿ ಜನವರಿ 2ರಂದು ಸಿದ್ದಗಂಗಾ ಮಠಕ್ಕೆ ನರೇಂದ್ರ ಮೋದಿ ಭೇಟಿ

Newest FirstOldest First
11:21 AM, 3 Jan

ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ನರೇಂದ್ರ ಮೋದಿ ದೆಹಲಿಗೆ ವಾಪಸ್ ಆಗಲಿದ್ದಾರೆ.
11:09 AM, 3 Jan

ಕೇಂದ್ರ ಸರ್ಕಾರ ಒಂದು ಬಾರಿ ಬಳಕೆ ಮಾಡುವ ಪ್ಲಾಸ್ಟಿಕ್ ನಿಷೇಧ ಮಾಡಿದೆ. ಎಲೆಕ್ಟ್ರಾನಿಕ್ ಉಪಕರಣಗಳಲ್ಲಿರುವ ಲೋಹಗಳನ್ನು ಹೊರತೆಗೆದು ಬಳಕೆ ಮಾಡಲು ಸಾಧ್ಯವಾಗುವ ತಂತ್ರಜ್ಞಾನದ ಕುರಿತು ಆಲೋಚಿಸಬೇಕಿದೆ.
11:07 AM, 3 Jan

ವಿಜ್ಞಾನಿಗಳು ನೀರಿನ ನಿರ್ವಹಣೆ ಬಗ್ಗೆ ಹೆಚ್ಚು ಗಮನ ನೀಡಬೇಕು. ಮನೆಯಿಂದ ಹೊರ ಹೋಗುವ ನೀರನ್ನು ಕೃಷಿಗೆ ಹೇಗೆ ಸುಲಭವಾಗಿ ಬಳಕೆ ಮಾಡಬಹುದು ಎಂಬ ಬಗ್ಗೆ ಯೋಚಿಸಬೇಕಿದೆ. ಕಡಿಮೆ ನೀರಿನಲ್ಲಿ ಬೆಳೆಯುವ ಬೆಳಗಳ ಬೀಜದ ಅಭಿವೃದ್ಧಿ ಆಗಬೇಕು ಎಂದು ಮೋದಿ ಕರೆ ನೀಡಿದರು.
11:05 AM, 3 Jan

ಗ್ರಾಮೀಣ ಪ್ರದೇಶದಲ್ಲಿ ಸ್ಮಾರ್ಟ್‌ ಪೋನ್‌ಗಳಿಂದ ಹಲವು ಉಪಯೋಗ ಆಗುತ್ತಿದೆ. ರೈತರು ಇನ್ನೊಬ್ಬರ ಹಂಗಿಲ್ಲದೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ರೈತರಿಗೆ ಅಗತ್ಯವಿರುವ ಹವಾಮಾನ ಮುನ್ಸೂಚನೆಯನ್ನು ಫೋನ್ ಮೂಲಕ ಜನರು ಬೆರಳ ತುದಿಯಲ್ಲಿ ಪಡೆಯುತ್ತಿದ್ದಾರೆ.
11:03 AM, 3 Jan

ತಂತ್ರಜ್ಞಾನದ ಸದ್ಬಳಕೆಯಿಂದ ದೇಶದ ಎಲ್ಲರೂ ಸರ್ಕಾರದ ಭಾಗವಾಗಲು ಸಾಧ್ಯವಾಗಿದೆ. ಇಂತಹ ಪರಿವರ್ತನೆಯನ್ನು ನಾವು ಪ್ರೋತ್ಸಾಹಿಸಬೇಕು ಎಂದು ಮೋದಿ ಹೇಳಿದರು.
11:01 AM, 3 Jan

ನರೇಂದ್ರ ಮೋದಿ ಭಾಷಣ
11:00 AM, 3 Jan

ಸಂಶೋಧಿಸಿ, ಪೇಟೆಂಟ್ ಪಡೆದುಕೊಳ್ಳಿ, ಉತ್ಪಾದಿಸಿ, ಸಮೃದ್ಧರಾಗಿರಿ ಎನ್ನುವ ನಾಲ್ಕು ಮಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ನರೇಂದ್ರ ಮೋದಿ ಕರೆ ನೀಡಿದರು.
Advertisement
10:58 AM, 3 Jan

ನಮ್ಮ ವಿಜ್ಞಾನಿಗಳು ಬಹಳಷ್ಟು ಸಾಧನೆ ಮಾಡಿದ್ದಾರೆ. ದೇಶದ ಅಭಿವೃದ್ಧಿಯನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆ ತೀರ್ಮಾನಿಸುತ್ತದೆ ಎಂದು ಮೋದಿ ಹೇಳಿದರು.
10:58 AM, 3 Jan

ಯುವ ವಿಜ್ಞಾನಿಗಳು, ಉದ್ಯಮಿಗಳು ಕೇವಲ ತಮ್ಮ ವೈಯಕ್ತಿಕ ಪ್ರಗತಿಗಾಗಿ ಮಾತ್ರ ಶ್ರಮಿಸುವುದಿಲ್ಲ. ದೇಶಕ್ಕಾಗಿ ಏನಾದರೂ ಮಾಡಬೇಕು ಎಂಬ ಭಾವನೆ ಅವರಲ್ಲಿದೆ ಎಂದು ನರೇಂದ್ರ ಮೋದಿ ಬಣ್ಣಿಸಿದರು.
10:55 AM, 3 Jan

ಉದ್ಯಾನ ನಗರಿಯಾಗಿದ್ದ ಬೆಂಗಳೂರು ಈಗ ಹೊಸ ಉದ್ಯಮಗಳಿಗೆ ನೆಚ್ಚಿನ ತಾಣವಾಗಿದೆ. ಈಗ ಬೆಂಗಳೂರು ಸ್ಟಾರ್ಟ್ ಅಪ್ ಸಿಟಿ ಎಂದು ಮೋದಿ ಹೇಳಿದರು.
10:51 AM, 3 Jan

ವಿಜ್ಞಾನ ಕಾಂಗ್ರೆಸ್ ಸಮ್ಮೇಳನ ಉದ್ಘಾಟಿಸಿ ಭಾಷಣ ಆರಂಭಿಸಿದ ನರೇಂದ್ರ ಮೋದಿ
10:42 AM, 3 Jan

ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಡಾ. ಹರ್ಷವರ್ಧನ್, "ಪ್ರಧಾನಿಗಳು ಎಲ್ಲಾ ಕ್ಷೇತ್ರಗಳಿಗೂ ಗುರಿಗಳನ್ನು ನಿಗದಿಪಡಿಸಿ ಅದಕ್ಕೆ ಅನುಗುಣವಾದ ನೀತಿ ರೂಪಿಸುತ್ತಿದ್ದಾರೆ. ಎಲ್ಲರನ್ನು ಭಾಗಿದಾರರನ್ನಾಗಿ ಮಾಡಿ ಯೋಜನೆ ಅನುಷ್ಠಾನಕ್ಕೆ ತರಲು ಶ್ರಮಿಸುತ್ತಿದ್ದಾರೆ" ಎಂದರು.
Advertisement
10:32 AM, 3 Jan

ಭಾರತೀಯ ವಿಜ್ಞಾನ ಕಾಂಗ್ರೆಸ್ ಅಧ್ಯಕ್ಷ ಪ್ರೊ. ರಂಗಪ್ಪ ಸ್ವಾಗತ ಭಾಷಣ ಮಾಡಿದರು. "ಮೋದಿ ಆರಂಭಿಸಿದ ಹಲವು ಯೋಜನೆಗಳು ಈಗಾಗಲೇ ಫಲ ನೀಡುತ್ತಿವೆ. ದೇಶದ ಅಭಿವೃದ್ಧಿಗಾಗಿ ರೈತರಿಗೆ ಶಕ್ತಿ ತುಂಬುವುದು ಅಗತ್ಯ" ಎಂದು ಹೇಳಿದರು.
10:30 AM, 3 Jan

ಐದು ದಿನಗಳ ಕಾಲ ನಡೆಯುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 107ನೇ ಸಮಾವೇಶವನ್ನು ಮೋದಿ ಉದ್ಘಾಟಿಸಲಿದ್ದಾರೆ. 150ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ. 24 ದೇಶಗಳ 74 ಸಂಪನ್ಮೂಲ ವ್ಯಕ್ತಿಗಳು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
10:27 AM, 3 Jan

ಮೈಸೂರು ಅರಮನೆಯ ಸ್ಮರಣಿಕೆಯನ್ನು ನರೇಂದ್ರ ಮೋದಿಗೆ ನೀಡಿ ಸನ್ಮಾನ
10:19 AM, 3 Jan

ಪ್ರಧಾನಿ ಜೊತೆ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾಗಿ
10:16 AM, 3 Jan

ಭಾರತೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶ
10:15 AM, 3 Jan

ಪ್ರಧಾನಿ ಸಾಗುವ ಮಾರ್ಗದಲ್ಲಿ ಸಂಚಾರ ಬದಲಾವಣೆ ಮಾಡಲಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ
10:14 AM, 3 Jan

ನರೇಂದ್ರ ಮೋದಿ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಸಮಾವೇಶವನ್ನು ಜಿಕೆವಿಕೆಯಲ್ಲಿ ಉದ್ಘಾಟಿಸಲಿದ್ದಾರೆ.
10:13 AM, 3 Jan

ಪ್ರಧಾನಿ ನರೇಂದ್ರ ಮೋದಿ ಜಿಕೆವಿಕೆಗೆ ಆಗಮಿಸಿದರು
8:18 PM, 2 Jan

ನರೇಂದ್ರ ಮೋದಿ ಅವರು ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಕಾರಣ ರಾಜಭವನದ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
8:17 PM, 2 Jan

ನಾಳೆ ಮೋದಿ ಅವರು ಜಿಕೆವಿಕೆ ಯಲ್ಲಿ 107 ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಅನ್ನು ಉದ್ಘಾಟಿಸಲಿದ್ದಾರೆ.
8:16 PM, 2 Jan

ಡಿಆರ್‌ಡಿಓ ಕಾರ್ಯಕ್ರಮ ಮುಗಿಸಿದ ಮೋದಿ ರಾಜಭವನ ತಲುಪಿದ್ದಾರೆ. ಇಂದು ರಾಜಭವನದಲ್ಲಿಯೇ ಉಳಿಯಲಿರುವ ಮೋದಿ ನಾಳೆ ಜಿಕೆವಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
4:32 PM, 2 Jan

ತುಮಕೂರಿನಲ್ಲಿ ರೈತ ಸಮಾವೇಶ ಮುಕ್ತಾಯ. ತುಮಕೂರಿನಿಂದ ಕೆಲವೇ ಕ್ಷಣಗಳಲ್ಲಿ ಬೆಂಗಳೂರಿಗೆ ಹೊರಡಲಿರುವ ನರೇಂದ್ರ ಮೋದಿ
4:29 PM, 2 Jan

ಮೀನುಗಾರಿಕೆಗೆ ಆದ್ಯತೆ ನೀಡಲು ಮೂರು ಸ್ತರದ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಗ್ರಾಮಗಳಲ್ಲಿ ಹೆಚ್ಚಿನ ಆದ್ಯತೆ ನೀಡುವುದು, ಆರ್ಥಿಕ ನೆರವು ನೀಡುವುದು, ನೀಲಿಕ್ರಾಂತಿ ಮೂಲ ಸೌಕರ್ಯವನ್ನು ಒದಗಿಸುವುದು ನಮ್ಮ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
4:27 PM, 2 Jan

ಸರ್ಕಾರ ಪ್ರಧಾನಮಂತ್ರಿ ಕೌಶಲ ಅಭಿವೃದ್ಧಿ ಯೋಜನೆಯಡಿ ರಬ್ಬರ್ ಬೆಳೆಗಾರರಿಗೆ ಹೆಚ್ಚಿನ ತರಬೇತಿ ನೀಡಲಾಗಿದೆ. ರಬ್ಬರ್ ಉತ್ಪಾದನೆ ಹೆಚ್ಚಳಕ್ಕೆ ಸರ್ಕಾರವೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ.
4:20 PM, 2 Jan

ಅರಿಶಿಣ ಉತ್ಪಾದನೆಗೆ ಕರ್ನಾಟಕವೂ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದೆ. ದೇಶದಲ್ಲಿ ಅರಿಶಿಣ ಉತ್ಪಾದನೆ ಕಳೆದ ಐದು ವರ್ಷಗಳಲ್ಲಿ ಹೆಚ್ಚಾಗಿದೆ. ಈ ಬೆಳೆಗಳ ಮೇಲೆ ಸಂಶೋಧನೆಯನ್ನು ಆರಂಭಿಸಿದ್ದೇವೆ. ತೆಲಂಗಾಣ ರಾಜ್ಯ ಅರಿಶಿಣ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.
4:18 PM, 2 Jan

ಬೆಳಗಾವಿಯಲ್ಲಿ ದಾಳಿಂಬೆ, ಚಿಕ್ಕಬಳ್ಳಾಪುರದಲ್ಲಿ ಬೆಂಗಳೂರು ಗುಲಾಬಿ, ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಯ ಕ್ಲಸ್ಟರ್ ನಿರ್ಮಾಣ ಮಾಡುವ ಉದ್ದೇಶ ನಮ್ಮ ಮುಂದಿದೆ.
4:16 PM, 2 Jan

ಸಾಂಬಾರ ಪದಾರ್ಥಗಳ ರಫ್ತಿನಲ್ಲಿ ಭಾರತದ ಸಾಧನೆ ಮಾಡಿದೆ. 19 ಸಾವಿರ ಕೋಟಿಗಳಷ್ಟು ಮಸಾಲೆ ಪದಾರ್ಥಗಳನ್ನು ಭಾರತ ಈಗ ರಫ್ತು ಮಾಡುತ್ತಿದೆ.
4:15 PM, 2 Jan

ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಭೇಟಿಯ ಜೊತೆಯಲ್ಲೇ #GobackModi ಹ್ಯಾಷ್ ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.
READ MORE

English summary
PM Modi in Karnataka Live Updates in Kannada: Prime Minister Narendra Modi is in Karnataka for two days (jan 2nd & 3rd) to participate in various functions. Stay with Kannada Oneindia for all the live updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X