ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶವನ್ನು ಉದ್ದೇಶಿಸಿ ಮೋದಿ 'ಪ್ರವಚನ': ಶವಗಳ ಮೆರವಣಿಗೆಯ ನಡುವೆ ಭಾಷಣದ ತೆವಲು

|
Google Oneindia Kannada News

ದೇಶವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಂಗಳವಾರ (ಏ 20) ಮಾಡಿದ ಭಾಷಣವನ್ನು ವಿರೋಧ ಪಕ್ಷವಾದ ಕಾಂಗ್ರೆಸ್ ತೀವ್ರ ಪದಗಳಿಂದ ಟೀಕಿಸಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಟ್ವೀಟ್ ಮೇಲೆ ಟ್ವೀಟ್ ಮಾಡಿದ್ದಾರೆ.

ಕೊರೊನಾ ಎರಡನೇ ಅಲೆಯ ಬಗ್ಗೆ ಮಾತನಾಡುತ್ತಿದ್ದ ಮೋದಿ, ಹದಿನೆಂಟು ವರ್ಷದ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಮೇ ಒಂದರಿಂದ ಲಭ್ಯವಾಗಲಿದೆ ಎಂದು ಪುನರುಚ್ಚಿಸಿದರು.

ಕೊರೊನಾ ಹೊಸ ಗೈಡ್ಲೈನ್ಸ್ : ನಿರ್ದಿಷ್ಟ ಗೊತ್ತು ಗುರಿ, ಸ್ವಂತ ಬುದ್ದಿಯಿಲ್ಲದ ಸರಕಾರಕೊರೊನಾ ಹೊಸ ಗೈಡ್ಲೈನ್ಸ್ : ನಿರ್ದಿಷ್ಟ ಗೊತ್ತು ಗುರಿ, ಸ್ವಂತ ಬುದ್ದಿಯಿಲ್ಲದ ಸರಕಾರ

ಪ್ರಧಾನಿಯವರ ಭಾಷಣ ನಿರಾಶಾದಾಯಕ ಎಂದು ವ್ಯಂಗ್ಯವಾಡಿರುವ ಕಾಂಗ್ರೆಸ್ ಮುಖಂಡರು, ರಾಜ್ಯದಲ್ಲಿ ಆಮ್ಲಜನಕ, ಹಾಸಿಗೆ ಸಮಸ್ಯೆ ಎದುರಾಗಿದೆ. ಇದಕ್ಕೆ ಪರಿಹಾರ ನೀಡುವುದನ್ನು ಬಿಟ್ಟು, ಸುಮ್ಮನೆ ಭಾಷಣ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

 ಲಾಕ್‌ಡೌನ್ ಕೊನೆ ಆಯ್ಕೆಯಾಗಿ ಮಾತ್ರ ಪರಿಗಣಿಸಿ; ಮೋದಿ ಲಾಕ್‌ಡೌನ್ ಕೊನೆ ಆಯ್ಕೆಯಾಗಿ ಮಾತ್ರ ಪರಿಗಣಿಸಿ; ಮೋದಿ

ಇನ್ನು, ರಾಜ್ಯಪಾಲರು ಕರೆದಿದ್ದ ಸರ್ವಪಕ್ಷಗಳ ಸಭೆಯ ಬಗ್ಗೆಯೂ ಕಾಂಗ್ರೆಸ್ ಮುಖಂಡರು ತಕರಾರು ಎತ್ತಿದ್ದು, "ಬಹುಮತದ ಸರ್ಕಾರ ಅಸ್ತಿತ್ವದಲ್ಲಿರುವಾಗ ದಿನನಿತ್ಯದ ಆಡಳಿತದಲ್ಲಿ ರಾಜ್ಯಪಾಲರ ಪಾತ್ರ ಇರುವುದಿಲ್ಲ. @BJP4Karnataka ಸರ್ಕಾರ ಹೊಸ ಪರಂಪರೆಗೆ ನಾಂದಿ ಹಾಡಿದೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ರೆಮಿಡಿಸಿವೆರ್‌ನಂತಹ ಪ್ರಾಣರಕ್ಷಕ ಔಷಧಿ ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ

ಇಂದು ರಾತ್ರಿ ಪ್ರಧಾನಿ @narendramodi ಅವರು ಮಾಡಿದ ಭಾಷಣ ಅತ್ಯಂತ ನಿರಾಶದಾಯಕ. ಕೊರೊನಾ ಸೋಂಕಿನಿಂದ ತತ್ತರಿಸಿಹೋಗಿರುವ ರಾಜ್ಯಗಳಿಗೆ ತುರ್ತಾಗಿ ಬೇಕಾಗಿರುವುದು ನೆರವಿನ ಹಸ್ತವೇ ಹೊರತು ಉಪದೇಶದ ಬುರುಡೆ ಮಾತಲ್ಲ. ರಾಜ್ಯದಲ್ಲಿ ಕೊರೊನಾ ಸೋಂಕಿತರು ಆಮ್ಲಜನಕ ಇಲ್ಲದೆ, ಐಸಿಯು ಹಾಸಿಗೆಗಳಿಲ್ಲದೆ,‌ ರೆಮಿಡಿಸಿವೆರ್‌ನಂತಹ ಪ್ರಾಣರಕ್ಷಕ ಔಷಧಿ ಸಿಗದೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳಿಗೆ ಯಾವುದೇ ಪರಿಹಾರ ನೀಡದ @narendramodi ಜನತೆಗೆ ಜವಾಬ್ದಾರಿಯ ಪಾಠ ಹೇಳಿದ್ದಾರೆ. ಪ್ರಧಾನಿಗಳೇ, ಮೊದಲು ನಿಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ.

 ಇದೊಂದು ಪಬ್ಲಿಸಿಟಿ ಸ್ಟಂಟ್

ಇದೊಂದು ಪಬ್ಲಿಸಿಟಿ ಸ್ಟಂಟ್" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ

"ಭಾರೀ ಹೈಪ್ ಸೃಷ್ಟಿಸಿದ ಪ್ರಧಾನಿ ಮೋದಿಯವರ ಭಾಷಣ ನಿರಾಶಾದಾಯಕವಾಗಿತ್ತು. ಜನರ ಸಮಸ್ಯೆಗಳನ್ನು ಮೋದಿ ತಮ್ಮ ಭಾಷಣದಲ್ಲಿ ಎತ್ತುತ್ತಾರೆಂದು ಸಾರ್ವಜನಿಕರು ಭಾವಿಸಿದ್ದರು. ಆದರೆ, ಇದೊಂದು ಪಬ್ಲಿಸಿಟಿ ಸ್ಟಂಟ್" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಲೇವಡಿ ಮಾಡಿದ್ದಾರೆ.

 ಪ್ರಧಾನಿಯವರು ಎಂದಿನಂತೆ ಪ್ರವಚನವನ್ನು ಮಾಡಿದ್ದಾರೆ, ಖರ್ಗೆ

ಪ್ರಧಾನಿಯವರು ಎಂದಿನಂತೆ ಪ್ರವಚನವನ್ನು ಮಾಡಿದ್ದಾರೆ, ಖರ್ಗೆ

ಪ್ರಧಾನಿಯವರು ಎಂದಿನಂತೆ ಪ್ರವಚನವನ್ನು ಮಾಡಿದ್ದಾರೆ, ಜನರು ಮೋದಿಯವರಿಂದ ಆರೋಗ್ಯ ಕ್ಷೇತ್ರದ ವಿಚಾರದಲ್ಲಿ ದೇಶ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಮಾತನಾಡಬಹುದೆಂದು ನಿರೀಕ್ಷಿಸಿದ್ದರು. ಪ್ರಧಾನಿಯವರಿಂದ ಭಾಷಣದಿಂದ ಜನರಿಗೆ ಏನೂ ಆತ್ಮವಿಶ್ವಾಸ ಬಂದಿಲ್ಲ"ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ.

Recommended Video

'ಕೊರೊನಾ ಚೈನ್‌‌ ಲಿಂಕ್‌ ಕಟ್‌ ಮಾಡಲು 14 ದಿನಗಳ ಕಠಿಣ ಕ್ರಮ ಅಗತ್ಯ'- ಆರೋಗ್ಯ ಸಚಿವ ಕೆ.ಸುಧಾಕರ್‌ | Oneindia

ಶವಗಳ ಮೆರವಣಿಗೆಯ ನಡುವೆ ನಿಂತು ತಮ್ಮ ಭಾಷಣದ ತೆವಲು

ಮತ್ತದೇ ಭಾಷಣ, ಮತ್ತದೇ ಆತ್ಮವಂಚನೆಯ ಮಾತುಗಳು. ದೇಶದ ಸಂಕಟದ ನಡುವೆ ಖಾಲಿ ಡಬ್ಬಾವೊಂದು 20 ನಿಮಿಷ ಸದ್ದು ಮಾಡಿದಂತಿತ್ತು @narendramodi ಅವರ ಮಾತು. ಶವಗಳ ಮೆರವಣಿಗೆಯ ನಡುವೆ ನಿಂತು ತಮ್ಮ ಭಾಷಣದ ತೆವಲು ತೀರಿಸಿಕೊಂಡಿದ್ದಾರೆ ಅಷ್ಟೇ, ಪ್ರಧಾನಿಗಳೇ, ದೇಶದ ಸಂಕಷ್ಟಕ್ಕೆ ಬೇಕಿರುವುದು ನೆರವಿನ ಶಾಸನವೇ ಹೊರತು ನಿಮ್ಮ ನಿರೂಪಯೋಗಿ ಭಾಷಣವಲ್ಲ.

English summary
PM Modi Address To Nation, It Is PR Stunt, Congress Leaders Criticized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X