• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದಗಂಗಾ ಶ್ರೀಗಳ ಅಂತ್ಯವಿಧಿಗೆ ಮೋದಿ ಗೈರು: ಕೆಣಕಿದ ಪರಮೇಶ್ವರ್, ಚಳಿಬಿಡಿಸಿದ ಟ್ವಿಟ್ಟಿಗರು

|

ನಡೆದಾಡುವ ದೇವರು ಡಾ. ಶಿವಕುಮಾರ ಸ್ವಾಮೀಜಿಯವರ ಅಂತ್ಯವಿಧಿ, ಲಕ್ಷ ಲಕ್ಷ ಭಕ್ತರ ಸಮ್ಮುಖದಲ್ಲಿ ಮಂಗಳವಾರ ( ಜ 22) ನಡೆಯುತು. ಕೇಂದ್ರ ಸರಕಾರದ ಪರವಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿ ಅಂತಿಮ ಗೌರವ ಸಲ್ಲಿಸಿದರು.

ಮೂಲಗಳ ಪ್ರಕಾರ ಪ್ರಧಾನಿಯವರ ಭದ್ರತೆಯನ್ನು ನೋಡಿಕೊಳ್ಳುವ ಎಸ್ ಪಿ ಜಿ ಅನುಮತಿ ದೊರೆಯದ ಹಿನ್ನಲೆಯಲ್ಲಿ ನರೇಂದ್ರ ಮೋದಿ, ಸಿದ್ದಗಂಗಾ ಶ್ರೀಗಳ ಅಂತಿಮ ವಿಧಿವಿಧಾನದಲ್ಲಿ ಭಾಗವಹಿಸಿರಲಿಲ್ಲ. ಪ್ರಧಾನಿ ಬರುವುದು ಅನುಮಾನ ಎಂದು ಒಂದು ದಿನದ ಹಿಂದೆಯೇ ಯಡಿಯೂರಪ್ಪ ಹೇಳಿದ್ದರು.

ರೇಲಾ ಆಸ್ಪತ್ರೆ ವೈದ್ಯರಿಗೆ ದೇವರನ್ನು ತೋರಿಸುವೆ ಎಂದಿದ್ದ ಸಿದ್ದಗಂಗಾ ಶ್ರೀಗಳು

ಈಗ, ಪ್ರಧಾನಿ ಬರದೇ ಇರುವುದನ್ನು ಕೆಣಕಿರುವ ಉಪಮುಖ್ಯಮಂತ್ರಿ ಡಾ. ಪರಮೇಶ್ವರ್, ಸೆಲೆಬ್ರಿಟಿಗಳ ಮದುವೆಗೆ ಹೋಗಲು ಪುರುಷೋತ್ತು ಇದೆ, ನಡೆದಾಡುವ ದೇವರ ಅಂತ್ಯವಿಧಿಗೆ ಬರಲು ಮೋದಿಗೆ ಸಮಯವಿಲ್ಲವೇ ಎಂದು ಟ್ವೀಟ್ ಮಾಡಿದ್ದಾರೆ.

ಶ್ರೀಗಳ ಅಂತಿಮ ದರ್ಶನಕ್ಕೆ ಬಾರದ ಮೋದಿ ಮೇಲೆ ಪರಂ ಗರಂ!

ಮಂಗಳವಾರ, ವಾರಣಾಸಿಯಲ್ಲಿ ನಡೆದ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಸಿದ್ದಗಂಗಾ ಶ್ರೀಗಳನ್ನು ನೆನೆಸಿಕೊಂಡು, ಅವರು ನನ್ನನು ಮಗನಂತೆ ಕಂಡಿದ್ದರು ಎಂದು ಪ್ರಧಾನಿ ಹೇಳಿದ್ದರು. ಡಾ. ಪರಮೇಶ್ವರ್ ಮಾಡಿರುವ ಟ್ವೀಟಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಟ್ವಿಟ್ಟಿಗರು ಉಪಮುಖ್ಯಮಂತ್ರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಡೆದಾಡುವ ದೇವರ ಅಂತಿಮ ಸಂಸ್ಕಾರಕ್ಕೆ ಬರುವುದಿಲ್ಲ

ಪ್ರಧಾನಿ ಮೋದಿಯವರು ಸೆಲೆಬ್ರಿಟಿಗಳ ಮದುವೆಗೆ ಹಾಜರಾಗುತ್ತಾರೆ, ಅವರನ್ನು ಭೇಟಿಯಾಗುತ್ತಾರೆ. ಆದರೆ, ನಮ್ಮ ನಡೆದಾಡುವ ದೇವರ ಅಂತಿಮ ಸಂಸ್ಕಾರಕ್ಕೆ ಬರುವುದಿಲ್ಲ. ಶಿವಕುಮಾರ ಶ್ರೀಗಳು ಬಡವರ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದವರು. ಭಾರತರತ್ನ ಕೊಡಿ ಎಂದು ಹಲವು ಬಾರಿ ಮನವಿ ಮಾಡಿದರೂ, ಅದು ಪ್ರಯೋಜನಕ್ಕೆ ಬರಲಿಲ್ಲ. ಮೋದಿ ಕೋಟ್ಲರ್ ಪ್ರಶಸ್ತಿಗೇ ಅರ್ಹರು.

ಹಳೆಯ ತಂತ್ರವನ್ನು ಬಳಸಿದರೆ, ಯಾರೂ ಮೂರ್ಖರಾಗುವುದಿಲ್ಲ

ಹಳೆಯ ತಂತ್ರವನ್ನು ಬಳಸಿದರೆ, ಯಾರೂ ಮೂರ್ಖರಾಗುವುದಿಲ್ಲ

ಸ್ವಾಮೀಜಿವರ ನಿಧನವನ್ನೂ ರಾಜಕೀಯಕ್ಕೆ ಬಳಸುವ ಕಾಂಗ್ರೆಸ್ಸಿಗೆ ಏನಾಗಿದೆ? ಈ ಹಳೆಯ ತಂತ್ರವನ್ನು ಬಳಸಿದರೆ, ಯಾರೂ ಮೂರ್ಖರಾಗುವುದಿಲ್ಲ. ಅರವತ್ತು ವರ್ಷದಿಂದ ನಿಮ್ಮ ಪಕ್ಷ ಅಧಿಕಾರದಲ್ಲಿತ್ತು, ಆಗ ಯಾಕೆ ನೀವು ಕನಿಷ್ಠ ಪದ್ಮ ಪ್ರಶಸ್ತಿಯನ್ನು ನೀಡಲಿಲ್ಲ. ಶ್ರೀಗಳಿಗೆ ಪದ್ಮಭೂಷಣ ನೀಡಿದ್ದು ಮೋದಿ ಸರಕಾರ ಎನ್ನುವುದು ನೆನಪಿರಲಿ

ಭದ್ರತಾ ಪಡೆಯ ಅನುಮತಿ ಸಿಗದ ಹಿನ್ನಲೆ

ಭದ್ರತಾ ಪಡೆಯ ಅನುಮತಿ ಸಿಗದ ಹಿನ್ನಲೆ

ನಿಮ್ಮಿಂದ ಇದನ್ನು ಅಪೇಕ್ಷಿಸಬಹುದು, ಎಷ್ಟೇ ಆದರು ನಾನು DCM convoy ತಗೆದು ಕೊಳ್ಳಬಾರದು ಎಂದು ಕೇಳಿದವರು ನೀವು. ಮೋದಿ ಆಗಮಿಸಬೇಕಿತ್ತು. ಆದರೆ, ಭದ್ರತಾ ಪಡೆಯ ಅನುಮತಿ ಸಿಗದ ಹಿನ್ನಲೆಯಲ್ಲಿ ಅವರು ಬರಲಿಲ್ಲ. ಹದಿನೈದು ಲಕ್ಷ ಜನರು ತುಮಕೂರಿಗೆ ಆಗಮಿಸಲಿದ್ದು, ಪ್ರಧಾನಿ ಬಂದರೆ ಬಹುತೇಕ ರಸ್ತೆಗಳು ಬಂದ್ ಮಾಡುವುದರ ಜೊತೆಗೆ, ಹೆಚ್ಚಿನ ಭದ್ರತೆ ನೀಡಬೇಕಾಗಿತ್ತು. ಇದರಿಂದ ಭಕ್ತರಿಗೆ ತೊಂದರೆಯಾಗಿ ಅವ್ಯವಸ್ಥೆ ಉಂಟಾಗುತ್ತಿತ್ತು ಎಂದು ಮೋದಿ, ಗೈರನ್ನು ಸಮರ್ಥಿಸಿಕೊಳ್ಳುವ ಪೋಸ್ಟ್.

ಭಕ್ತಿಯಿಂದಲ್ಲ, ರಾಜಕೀಯ ಲಾಭಕ್ಕಾಗಿ

ಭಕ್ತಿಯಿಂದಲ್ಲ, ರಾಜಕೀಯ ಲಾಭಕ್ಕಾಗಿ

ನೀವೂ ಸ್ವಾಮೀಜಿ ಅಂತಿಮ ದರ್ಶನಕ್ಕೆ ಹೋಗಿದ್ದು ಭಕ್ತಿಯಿಂದಲ್ಲ, ರಾಜಕೀಯ ಲಾಭಕ್ಕಾಗಿ.. ಭಕ್ತಿಯಿಂದ ಹೋಗಿದ್ದರೆ ಅವರು ಬಂದಿಲ್ಲ, ಇವರು ಬಂದಿಲ್ಲ ಅಂತಾ ಪೋಸ್ಟ್ ಮಾಡುವುದಿಲ್ಲ.. ಎಲ್ಲದರಲ್ಲೂ ರಾಜಕೀಯ.. ಮೋದಿ ಬರದೇ ಇರುವುದಕ್ಕೆ ಕಾರಣ ಏನೆಂದು ಗೊತ್ತಿದ್ದರೂ ನೀಚ ಬುದ್ದಿ ಬಿಡುವುದಿಲ್ಲ.. ನಿಮ್ಮ ರಾಹುಲ್ ಮತ್ತು ಸೋನಿಯಾ ದನ ಕಾಯೋಕೆ ಹೋಗಿದ್ರಾ?

ಭಾರತ ರತ್ನ ಬಿಡಿ ಕಡೆ ಪಕ್ಷ ಒಂದು ಪದ್ಮ ಪ್ರಶಸ್ತಿ ಸಹ ಕೊಟ್ಟಿಲ್ಲ

ಭಾರತ ರತ್ನ ಬಿಡಿ ಕಡೆ ಪಕ್ಷ ಒಂದು ಪದ್ಮ ಪ್ರಶಸ್ತಿ ಸಹ ಕೊಟ್ಟಿಲ್ಲ

ದೇಶ ವಿರೋದಿ ಹೇಳಿಕೆ ಕೊಡೋ ಕನ್ಹಯ್ಯಾ, ವಂದೇ ಮಾತರಂ ವಿರೋಧಿಸೋ ಅಸಾದುದ್ದೀನ್ ಓವೈಸಿ ಇಂತಹ ಹಲ್ಕಟ್ ನನ್ ಮಕ್ಕಳಿಗೆ ಕರ್ನಾಟಕದ ಮೈತ್ರಿ ಸರಕಾರದಿಂದ ರಾಜ ಮಾರ್ಯಾದೆ ಎಂತಾ ದರಿದ್ರ ಅವಸ್ಥೆ ಬಂತು ಕರ್ನಾಟಕಕ್ಕೆ! ನಿನ್ನೆ ತಾವು ಮುಂದೆ ನಿಂತು ಕಾರ್ಯ ಮಾಡುವಾಗ , ಭಕ್ತಿಯಿಂದ ಮಾಡುತ್ತಿದ್ದೀರಿ ಅಂದು ಕೊಂಡಿದ್ದೆ, ಅದರಲ್ಲಿ ನಿಮ್ಮ ಕಲ್ಮಶ ತುಂಬಿದ ರಾಜಕೀಯ ಮನಸ್ಸು ಇದೇ ಅಂತ ಗೊತ್ತಿರಲಿಲ್ಲ. ಅದೆಲ್ಲಾ ಸರಿ ಸ್ವಾಮಿ ನಿಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಸ್ವಾಮೀಜಿ ಗೆ ಭಾರತ ರತ್ನ ಬಿಡಿ ಕಡೆ ಪಕ್ಷ ಒಂದು ಪದ್ಮ ಪ್ರಶಸ್ತಿ ಸಹ ಕೊಟ್ಟಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
PM Narendra Modi absense in funeral of Dr. Shivakumara Swamiji of Siddaganga Seer. Karnataka DCM G Parameshwar tweet, strong reply to twitterite
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more