ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡರಿಗೆ ಪ್ರಧಾನಿ ಮೋದಿಯಿಂದ ಪ್ರಶಂಸಾ ಪತ್ರ

|
Google Oneindia Kannada News

ಬೆಂಗಳೂರು, ಮೇ 15: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಪ್ರಧಾನಿ ಮೋದಿ ಪ್ರಶಂಸಾ ಪತ್ರವನ್ನು ಕಳುಹಿಸಿದ್ದಾರೆ. ಪಿಎಂ ಕೇರ್ ನಿಧಿಗೆ ಗೌಡ್ರು ದೇಣಿಗೆಯನ್ನು ನೀಡಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ದೇವೇಗೌಡ್ರು, "ಪ್ರಧಾನಮಂತ್ರಿ ನಿಧಿಗೆ ನಾನು ನೀಡಿದ ಕಾಣಿಕೆಯನ್ನು ಗೌರವಪೂರ್ವಕವಾಗಿ ಸ್ವೀಕರಿಸಿರುವುದಾಗಿ ಪ್ರಧಾನಿಗಳು ಪತ್ರ ಮುಖೇನ ತಿಳಿಸಿದ್ದಾರೆ"ಎಂದು ಗೌಡ್ರು ಟ್ವೀಟ್ ಮಾಡಿದ್ದಾರೆ.

ಕೇರಳ ಗಡಿ ಸೀಲ್ಡ್: ಈಗ ಪಿಣರಾಯಿ ಸರಕಾರಕ್ಕೆ ಮಾನವೀಯತೆಯ ಪಾಠ ಮಾಡುವವರಾರು, ಸಿದ್ದರಾಮಯ್ಯ, ಗೌಡ್ರೇ? ಕೇರಳ ಗಡಿ ಸೀಲ್ಡ್: ಈಗ ಪಿಣರಾಯಿ ಸರಕಾರಕ್ಕೆ ಮಾನವೀಯತೆಯ ಪಾಠ ಮಾಡುವವರಾರು, ಸಿದ್ದರಾಮಯ್ಯ, ಗೌಡ್ರೇ?

"ಕೋವಿಡ್ ವಿರುದ್ದದ ಹೋರಾಟದಲ್ಲಿ ಎಲ್ಲಾ ಒಂದಾಗಬೇಕು. ನಾವೆಲ್ಲರೂ, ದೇಶದ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲು ಪ್ರಯತ್ನಿಸೋಣ" ಎಂದು ಗೌಡ್ರು, ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ.

PM Graciously Acknowledged My Contribution To PM Care Fund: Deve Gowda Tweet

ಪಿಎಂ ಕೇರ್, ಕರ್ನಾಟಕ ಮತ್ತು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇವೇಗೌಡ್ರು, ತಲಾ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು, ತಮ್ಮ ಪೆನ್ಸನ್ ಹಣದ ಮೂಲಕ ನೀಡಿದ್ದರು.

ಕಳೆದ ತಿಂಗಳು ಏಪ್ರಿಲ್ ಐದನೇ ತಾರೀಕಿಗೆ, ಪ್ರಧಾನಿ ಮೋದಿ, ಜೆಡಿಎಸ್ ವರಿಷ್ಠ ದೇವೇಗೌಡರಿಗೆ ದೂರವಾಣಿ ಕರೆಮಾಡಿ, ಕೋವಿಡ್ ವಿರುದ್ದದ ಹೋರಾಟಕ್ಕೆ ಸಲಹೆಯನ್ನು ಪಡೆದಿದ್ದರು.

"ನೀವು ನೀಡಿದ ದೇಣಿಗೆ ಇನ್ನಷ್ಟು ಜನರಿಗೆ ಪ್ರೇರಣೆಯಾಗಲಿದೆ. ತಾಳ್ಮೆ, ಶಿಸ್ತು, ಎಚ್ಚರಿಕೆಯ ಮೂಲಕ, ಕೋವಿಡ್ ವಿರುದ್ದದ ಹೋರಾಟದಲ್ಲಿ ಗೆಲುವು ಸಾಧಿಸೋಣ"ಎಂದು ಪ್ರಧಾನಿಗಳ ಪ್ರಶಂಸಾ ಪತ್ರದಲ್ಲಿ ಬರೆಯಲಾಗಿದೆ.

English summary
PM Graciously Acknowledged My Contribution To PM Care Fund: Deve Gowda Tweet,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X