ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾನ ಮಾಡುವಂತೆ ಮೋದಿ, ರಾಹುಲ್, ಸಿದ್ದರಾಮಯ್ಯ ಮನವಿ

By Nayana
|
Google Oneindia Kannada News

ಬೆಂಗಳೂರು, ಮೇ 12: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ರಾಜ್ಯದ ಜನತೆಗೆ ಮತದಾನ ಮಾಡಲು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ ಮತದಾನ ಚುರುಕುಗೊಂಡಿದೆ. ಬೆಳಗ್ಗೆ 9ಗಂಟೆ ಹೊತ್ತಿಗೆ ಶೇ.10ರಷ್ಟು ಮತದಾನವಾಗಿದ್ದರೆ. ಬೆಳಗ್ಗೆ 11ಗಂಟೆಯವರೆಗೆ ಶೇ.24 ರಷ್ಟು ಮತದಾನವಾಗಿದೆ.

LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು LIVE: ಇದುವರೆಗೆ ಶೇ. 10.51 ರಷ್ಟು ಮತದಾನ ದಾಖಲು

ಗೋವಿಂದರಾಜನಗರದಲ್ಲಿ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದು, ಉತ್ಸಾಹದಿಂದ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ ಅಧಿಕಾರಿಗಳ ಮಾಹಿತಿ ಪ್ರಕಾರ ಶೇ.30ರಷ್ಟು ಮತದಾನ ನಡೆದಿದೆ. ಬೆಳಗಾವಿ, ದಕ್ಷಿಣ ಕನ್ನಡ,ಮೈಸೂರು, ಮಂಡ್ಯ, ಉಡುಪಿ, ಶಿವಮೊಗ್ಗ ಜಿಲ್ಲೆಗಳಲ್ಲಿ ಬಿರುಸಿನ ಮತದಾನ ನಡೆಯುತ್ತಿದೆ.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು

ಮತದಾರರು ತಪ್ಪದೆ ತಮ್ಮ ಮತವನ್ನು ಚಲಾಯಿಸುವಂತೆ ಅನೇಕ ಗಣ್ಯರು ಟ್ವಿಟ್ಟರ್ ಮೂಲಕ ಮನವಿ ಮಾಡಿದ್ದಾರೆ.

ಮತಹಾಕಲು ಮರೆಯದಿರಿ: ಮೋದಿ ಮನವಿ

ಕರ್ನಾಟಕದ ನನ್ನ ಸೋದರಿಯರೇ ಹಾಗೂ ಸೋದರರೇ, ಇಂದು ಮತದಾನ ಮಾಡಿ. ಪ್ರಮುಖವಾಗಿ ಯುವ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಮತದಾರರು ತಮ್ಮ ಹಕ್ಕನ್ನು ತಪ್ಪದೇ ಚಲಾಯಿಸುವುದೇ ಕ್ರಿಯಾತ್ಮಕ ಪ್ರಜಾಪ್ರಭುತ್ವದ ಸಂಕೇತ. ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ರಾಜ್ಯದ ಅಭಿವೃದ್ಧಿ ಮುಂದುವರೆಯಲು ಸಹಕರಿಸಿ

ನಮ್ಮ ಕರ್ನಾಟಕವು ಚುನಾವಣೆಗೆ ಸಿದ್ಧವಾಗಿದೆ., ಈ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಜನರು, ವಿಶೇಷವಾಗಿ ಯುವ ಜನತೆ ತಪ್ಪದೇ ಮತ ಚಲಾಯಿಸಿ, ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು, ಕರ್ನಾಟಕದಲ್ಲಿ ಕಳೆದ ಐದು ವರ್ಷದಲ್ಲಾದ ಅಭಿವೃದ್ಧಿ ಮುಂದುವರೆಯಲು ಹಾಗೂ ನಿರಂತರ ಪ್ರಗತಿಗಾಗಿ, ಮತಚಲಾಯಿಸಿ ಎಂದು ಟ್ವಿಟ್ಟರ್ ಮೂಲಕ ಸಿದ್ದರಾಮಯ್ಯ ರಾಜ್ಯದ ಜನತೆಗೆ ಮವಿ ಮಾಡಿದ್ದಾರೆ.

ಮತದಾರರಿಗೆ ವಂದನೆ

ನಾನು ಕರ್ನಾಟಕದಲ್ಲಿ ಮೊದಲ ಬಾರಿ ಮತ ಚಲಾಯಿಸುವ ನನ್ನೆಲ್ಲಾ ಯುವ ಸ್ನೇಹಿತರನ್ನು ಸ್ವಾಗತಿಸುತ್ತೇನೆ. ಕರ್ನಾಟಕದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಜಾಪ್ರಭುತ್ವದ ಅತೀದೊಡ್ಡ ಹಬ್ಬವನ್ನು ಸಂಭ್ರಮದಿಂದ ಆಚರಿಸಿ ಯಶಸ್ವಿಗೊಳಿಸುವಂತೆ ಕೋರಿಕೊಳ್ಳುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಮನವಿ ಮಾಡಿದ್ದಾರೆ.

ಕಾಂಗ್ರೆಸ್‌ಗೆ ವೋಟು ಹಾಕುವ ಮೂಲಕ ಆಶೀರ್ವದಿಸಿ

ಕಳೆದ ಐದು ವರ್ಷಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಅತ್ಯಂತ ಪ್ರಗತಿಪರ ಪ್ರಾಮಾಣಿಕ ಸರ್ಕಾರವನ್ನು ಕೊಟ್ಟಿದ್ದೇವೆ, ನಮ್ಮ ಜನತೆಯಲ್ಲಿ ಮನವಿ ಮಾಡುತ್ತೇವೆ, ಮಾಡಿರುವ ಕೆಲಸಕ್ಕೆ ಕೂಲಿ ಕೊಡಿ, ಕಾಂಗ್ರೆಸ್‌ ಪಕ್ಷಕ್ಕೆ ವೋಟು ಮಾಡುವ ಮೂಲಕ ಆಶೀರ್ವದಿಸಿ ಎಂದು ದಿನೇಶ್‌ ಗುಂಡೂರಾವ್‌ ಟ್ವೀಟ್‌ ಮಾಡಿದ್ದಾರೆ.

ರಾಜ್ಯದ ಅಭಿವೃದ್ಧಿಗಾಗಿ ಯುವ ಮತದಾರರು ಹಕ್ಕು ಚಲಾಯಿಸಿ

ಯುವ ಮತದಾರರು ಮರೆಯದೇ ಮತ ಚಲಾಯಿಸಿ

English summary
Prime minister Narendra Modi and Chief minister Siddaramaiah, and Rahul Gandhi have both tweeted individually appealing people of Karnataka to cast their vote for strengthening the democracy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X