ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಷಿ ಕ್ಷೇತ್ರದಲ್ಲಿ ಉತ್ತರಾದಿ ಮಠ ಕಟ್ಟಡ ನಿರ್ಮಾಣಕ್ಕೆ ನೆರವಾಗಿ

|
Google Oneindia Kannada News

ತೀರ್ಥಹಳ್ಳಿ, ಜುಲೈ 5: ಭಕ್ತರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ಮಹಿಷಿಯಲ್ಲಿ ಉತ್ತರಾದಿ ಮಠದಿಂದ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಥಳದಲ್ಲಿ ಉತ್ತರಾದಿ ಮಠವಿದ್ದು, ಮಠದ ಪರಂಪರೆಯ ಸ್ವಾಮಿಗಳಾದ ಸತ್ಯಸಂಧರು ಇಲ್ಲೇ ವೃಂದಾವನಸ್ಥರಾಗಿದ್ದಾರೆ.

ಹೈದರಾಬಾದ್ ನಲ್ಲಿ ಸತ್ಯ ಪ್ರಮೋದ ತೀರ್ಥರ ಪಾದುಕಾ ಆರಾಧನೆಹೈದರಾಬಾದ್ ನಲ್ಲಿ ಸತ್ಯ ಪ್ರಮೋದ ತೀರ್ಥರ ಪಾದುಕಾ ಆರಾಧನೆ

ಎರಡು ವರ್ಷಗಳ ಹಿಂದೆ ಭಕ್ತರ ನೆರವಿನಿಂದ ಬಂದ ಹದಿನಾಲ್ಕು ಲಕ್ಷ ರುಪಾಯಿಯಲ್ಲಿ ಗೋಶಾಲೆ ನಿರ್ಮಾಣ ಮಾಡಲಾಗಿದ್ದು, ಸತ್ಯಾತ್ಮ ತೀರ್ಥರು ಉದ್ಘಾಟನೆ ಮಾಡಿದ್ದರು. ಈಗ ಇಲ್ಲಿ ಎಂಟು ಹಸು ಹಾಗೂ ಹನ್ನೆರಡು ಕರುಗಳಿವೆ. ಇದರಿಂದ ದೊರೆಯುವ ಹಾಲು, ಮೊಸರು, ಬೆಣ್ಣೆ, ತುಪ್ಪವನ್ನು ಮಠದಲ್ಲಿ ಹಾಗೂ ಮಠದ ಇತರ ಶಾಖೆಗಳಲ್ಲಿ ಬಳಸಲಾಗುತ್ತಿದೆ.

Please help to Uttaradi Mutt building construction In Mahishi

ಇತ್ತೀಚೆಗೆ ಮಠಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಿದ್ದು, ಉಪನಯನ-ಹೋಮ, ಹವನ ಮುಂತಾದ ಕಾರ್ಯಗಳನ್ನು ಇಲ್ಲಿ ಮಾಡಲಾಗುತ್ತಿದೆ. ಆದ್ದರಿಂದ ಭಕ್ತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಪ್ರತ್ಯೇಕ ಅಡುಗೆ ಮನೆ, ಉಗ್ರಾಣ, ಭೋಜನ ಶಾಲೆ, ಅರ್ಚಕರಿಗೆ ಪ್ರತ್ಯೇಕ ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ.

ಇಂಥ ದೊಡ್ಡ ಸಂಕಲ್ಪಕ್ಕೆ ಮೊದಲನೇ ಹಂತದಲ್ಲಿ ಎಪ್ಪತ್ತೈದು ಲಕ್ಷ ರುಪಾಯಿ ಬೇಕಾಗಬಹುದು ಎಂಬ ಅಂದಾಜಿದೆ. ಇದಕ್ಕೆ ಭಕ್ತರ ನೆರವಿನ ಅಗತ್ಯವಿದೆ. ಸಹಾಯ ಮಾಡುವ ಇಚ್ಛೆ ಇದ್ದವರು ಚೆಕ್ ಅಥವಾ ಡ್ರಾಫ್ಟ್ ಮೂಲಕ ಆರ್ಥಿಕವಾಗಿ ನೆರವಾಗಬಹುದು. ಅದಕ್ಕಾಗಿ ರಸೀದಿ ಪಡೆಯಿರಿ ಎಂದು ಮನವಿ ಮಾಡಲಾಗಿದೆ.

Please help to Uttaradi Mutt building construction In Mahishi

ಜತೆಗೆ ಬ್ಯಾಂಕ್ ಖಾತೆಗೆ ಕೂಡ ಹಣ ಜಮೆ ಮಾಡಬಹುದು. ಅದರ ವಿವರ ಇಂತಿದೆ.

ಶ್ರೀ ಉತ್ತರಾದಿ ಮಠ- ಮಹಿಷಿ

ಕರ್ನಾಟಕ ಬ್ಯಾಂಕ್, ತೀರ್ಥಹಳ್ಳಿ

ಖಾತೆ ಸಂಖ್ಯೆ 7622500101178301

IFSC Code: KARB0000762

Mahishi

ವಿಳಾಸ:

ವ್ಯವಸ್ಥಾಪಕರು, ಶ್ರೀ ಸತ್ಯಸಂಧ ಗುರು ಸನ್ನಿಧಿ, ಉತ್ತರಾದಿ ಮಠ,

ಮಹಿಷಿ, ತೀರ್ಥಹಳ್ಳಿ ತಾಲೂಕು, ಶಿವಮೊಗ್ಗ ಜಿಲ್ಲೆ

08181-29473, 9449896874

English summary
A building is constructing from Uttaradi mutt with the intention of helping devotees in Mahishi,Tirthhalli taluk, Shivamogga. So there is a need of monetary help. Please donate to construction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X