ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಾಹುಲಿ ಎಂದು ಕರೆಸಿಕೊಂಡು ಮೋದಿ ಮುಂದೆ 'ಪೇಪರ್ ಟೈಗರ್' ಆಗ್ಬೇಡಿ

|
Google Oneindia Kannada News

ಬೆಂಗಳೂರು, ಸೆ 3: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಚಾರದಲ್ಲಿ ರಾಜ್ಯ ಸರಕಾರ ತೆಗೆದುಕೊಂಡ ಕ್ರಮಕ್ಕೆ, ಕಾಂಗ್ರೆಸ್ ಮುಖಂಡ, ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

Recommended Video

Ragini ಹಾಗು Sanjana ಬಗ್ಗೆ ಹೊಸ ಬಾಂಬ್ ಸಿಡಿಸಿದ Prashanth Sambargi | Oneindia Kannada

ಈ ಬಗ್ಗೆ ಟ್ವೀಟ್ ಮಾಡಿರುವ ದಿನೇಶ್, "ಪ್ರಧಾನಿ ಮೋದಿಯವರ ಮುಂದೆ ಪೇಪರ್ ಟೈಗರ್ ಆಗಬೇಡಿ" ಎಂದು ಕಿಚಾಯಿಸಿದ್ದಾರೆ. ದಿನೇಶ್ ಗುಂಡೂರಾವ್ ಮಾಡಿದ ಟ್ವೀಟ್ ಹೀಗಿದೆ, "@BSYBJP ರವರೆ, ನೀವು 'ರಾಜಾಹುಲಿ' ಎಂದು ಕರೆಸಿಕೊಂಡು ಮೋದಿಯವರ ಮುಂದೆ 'ಪೇಪರ್ ಟೈಗರ್' ಆಗಬೇಡಿ".

ಕೊರೊನಾ ನೆಪದಲ್ಲಿ ತಪ್ಪು ಮುಚ್ಚಿಕೊಳ್ಳಲು ಮೋದಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಟೀಕೆಕೊರೊನಾ ನೆಪದಲ್ಲಿ ತಪ್ಪು ಮುಚ್ಚಿಕೊಳ್ಳಲು ಮೋದಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಟೀಕೆ

"ಆದಾಯ ಸರಿದೂಗಿಸಲು GST ಪಾಲನ್ನು ಪಡೆಯುವ ಬದಲು ನಾವ್ಯಾಕೆ RBI ನಿಂದ ಸಾಲ ಪಡೆಯಬೇಕು? ತೆರಿಗೆ ಪಾಲು ಕೇಳುವುದು ನಮ್ಮ ಹಕ್ಕು. ಆ ಹಕ್ಕನ್ನೂ ಕೇಳದಷ್ಟು ನಿಮ್ಮ ನಾಲಗೆ ಬಿದ್ದು ಹೋಯ್ತೆ ಯಡಿಯೂರಪ್ಪನವರೆ!"ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

Please Dont Be A Paper Tiger Infront Of PM Modi: Dinesh Gundu Rao To CM Yediyurappa

ಜಿಎಸ್ಟಿಯಿಂದ ರಾಜ್ಯಕ್ಕೆ ಆಗಿರುವ ತೆರಿಗೆ ಖೋತಾವನ್ನು ಸಾಲವಾಗಿ ಪಡೆಯುವ ಆಯ್ಕೆಯನ್ನು ಕೇಂದ್ರ ಸರಕಾರದ ಮುಂದಿಡಲು ಯಡಿಯೂರಪ್ಪ ಸರಕಾರ ಮುಂದಾಗಿದೆ. ಸರಕಾರದ ಈ ಕ್ರಮವನ್ನು, ವಿರೋಧ ಪಕ್ಷಗಳು ವ್ಯಾಪಕವಾಗಿ ಟೀಕಿಸಿದೆ.

ದಿನೇಶ್ ಗುಂಡೂರಾವ್ ಅವರ ಟ್ವೀಟಿಗೆ ಬಂದಂತಹ ಕೆಲವೊಂದು ಪ್ರತಿಕ್ರಿಯೆಗಳು ಹೀಗಿದೆ,"ಇಲ್ಲಿ ಯಾರು ರಾಜಾಹುಲಿ ಯಾರು ಪೇಪರ್ ಹುಲಿ ಎಂದು ಅರಿತ ಜನತೆಯೇ ತಮ್ಮ ಪರದೇಶಿ ಪಾರ್ಟಿಯನ್ನ ಡಸ್ಟ್ ಬಿನ್‌ಗೆ ಹಾಕಿದ್ದಾರೆ".

ಮಮತಾ ಬ್ಯಾನರ್ಜಿಯಿಂದ ಪ್ರಧಾನಿ ಮೋದಿಗೆ ಆಕ್ರೋಶಭರಿತ ಪತ್ರಮಮತಾ ಬ್ಯಾನರ್ಜಿಯಿಂದ ಪ್ರಧಾನಿ ಮೋದಿಗೆ ಆಕ್ರೋಶಭರಿತ ಪತ್ರ

"ತಮ್ಮ ಅವಧಿಯಲ್ಲಿ ಅದೆಷ್ಟರ ಮಟ್ಟಿಗೆ ಇಟಲಿ ಸೀರೆ ಒಗೆದಿದ್ದೀರಾ ಎನ್ನುವುದು ಸಹ ಅರ್ಥವಾಗಿದೆ. ತೆರಿಗೆಯಲ್ಲಿ ಪಾಲು ಕೇಳಿ ವಿದೇಶದಲ್ಲಿ ಮೋಜು ಮಸ್ತಿ ಮಾಡುವುದು ತಮ್ಮ ಕಾಂಗ್ರೆಸ್ ಪಾರ್ಟಿಗೆ ಮಾತ್ರ ಕರಗತವಾಗಿದೆ" ಎನ್ನುವ ಪ್ರತಿಕ್ರಿಯೆಗಳು ಬಂದಿವೆ.

English summary
Please Don't Be A Paper Tiger Infront Of PM Modi: Dinesh Gundu Rao To CM Yediyurappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X