ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಪೂರ್ಣ ನಿಷೇಧ, ಕರ್ನಾಟಕದಲ್ಲಿ ಯಾವಾಗ?

|
Google Oneindia Kannada News

ಬೆಂಗಳೂರು, ಜೂನ್ 23: ಮಹಾರಾಷ್ಟ್ರದಲ್ಲಿ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಆದೇಶ ಹೊರಡಿಸಿದ್ದು ಇಂದಿನಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ.

ಮೊದಲ ಬಾರಿ ತಪ್ಪು ಮಾಡಿ ಸಿಕ್ಕಿಬಿದ್ದರೆ 5 ಸಾವಿರ ರೂ, ಎರಡನೇ ಬಾರಿ ತಪ್ಪು ಮಾಡಿದರೆ 10 ಸಾವಿರ ರೂ. ದಂಡ ಮತ್ತು ಮೂರನೇ ಬಾರಿಗೆ ತಪ್ಪು ಮಾಡಿ ಸಿಕ್ಕಿಬಿದ್ದರೆ 25 ಸಾವಿರ ರೂ ದಂಡ ಮತ್ತು 3 ತಿಂಗಳವರೆಗಿನ ಜೈಲು ಶಿಕ್ಷೆ ನೀಡಲಾಗುತ್ತದೆ.

ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ, ಆದೇಶ ಉಲ್ಲಂಘಿಸಿದರೆ ಜೈಲುಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ನಿಷೇಧ, ಆದೇಶ ಉಲ್ಲಂಘಿಸಿದರೆ ಜೈಲು

ಕರ್ನಾಟಕದಲ್ಲಿದಲ್ಲಿ ಅಧಿಕೃತವಾಗಿ ಪ್ಲಾಸ್ಟಿಕ್ ನಿಷೇಧ ಜಾರಿಯಲ್ಲಿಲ್ಲವಾದರೂ ಅದು ಸ್ಥಳೀಯ ಆಡಳಿತದ ಮೇಲೆ ಅವಲಂಬಿತವಾಗಿದೆ. ಉತ್ತಮ ಅಧಿಕಾರಿಗಳಿರುವ ಜಿಲ್ಲಾಡಳಿತಗಳು ತಮ್ಮ-ತಮ್ಮ ಜಿಲ್ಲೆಗಳಲ್ಲಿ ಪ್ಲಾಸ್ಟಿಕ್ ನಿಷೇಧ ಹೇರಿ ಯಶಸ್ವಿಯಾಗಿದ್ದ ಉದಾಹರಣೆಗಳಿವೆ. ಆದರೆ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವೇ ಆಗಿಲ್ಲ.

Plastic ban in Maharashtra what about in karnataka

ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬುಟ್ಟಿಗಳು, ಆಟಿಕೆಗಳು ಇಂತಹಾ ವಿವಿಧ ಪ್ಲಾಸ್ಟಿಕ್ ಉತ್ಪನ್ನಗಳಿಗೆ ನಿಷೇಧ ಇದೆ. ಆದರೆ ಕಡ್ಡಾಯವಾಗಿ ಜಾರಿಗೆ ತರಲು ಇಚ್ಛಾಶಕ್ತಿಕೊರತೆಯಿಂದಾಗಿ ಪ್ಲಾಸ್ಟಿಕ್ ಬಳಕೆ ಅವ್ಯಾಹತವಾಗಿ ನಡೆಯುತ್ತಲೇ ಇದೆ.

40 ಮೈಕ್ರಾನ್‌ಗಿಂತಲೂ ಕಡಿಮೆ ಸಾಂದ್ರತೆಯ ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು ಇದನ್ನು ಬಳಸುವುದು ನಿಷೇಧಿಸಲಾಗಿದೆ. ಆದರೆ ಬಳಕೆ ನಿಂತಿಲ್ಲ. ವ್ಯಾಪಾರಿಗಳನ್ನು ಕೇಳಿದರೆ ಮೊದಲು ಪ್ಲಾಸ್ಟಿಕ್ ಉತ್ಪಾದನೆ ನಿಲ್ಲಿಸಿ ಆಗ ನಾವೂ ಮಾರುವುದು ನಿಲ್ಲಿಸುತ್ತೇವೆ ಎನ್ನುತ್ತಾರೆ.

Plastic ban in Maharashtra what about in karnataka

ಪ್ಲಾಸ್ಟಿಕ್ ಉತ್ಪಾದನೆಯನ್ನೇ ನಿಲ್ಲಿಸಿಲು ರಾಜಕಾರಣಿಗಳಿಗೆ ಇಚ್ಛಾಶಕ್ತಿಯ ಕೊರತೆ. ಏಕೆಂದರೆ ವ್ಯಾಪಾರಿಗಳಂತಹಾ ಸಣ್ಣವರನ್ನು ಆಡಳಿತ ಯಂತ್ರ ಬಳಸಿ ಬಗ್ಗು ಬಡಿಯಬಹದು ಆದರೆ ಉದ್ಯಮಿಗಳನ್ನು ಸಾಧ್ಯವೇ ಅವರೇ ಅಲ್ಲವೇ ರಾಜಕಾರಣಿಗಳ ಎಟಿಎಂ!

ಪರಿಸರ ರಕ್ಷಣೆಯ ಮಂತ್ರ ಜಪಿಸಿದ ಪ್ರಧಾನಿ ನರೇಂದ್ರ ಮೋದಿಪರಿಸರ ರಕ್ಷಣೆಯ ಮಂತ್ರ ಜಪಿಸಿದ ಪ್ರಧಾನಿ ನರೇಂದ್ರ ಮೋದಿ

ಪರಿಸರ ದಿನದಂದು ಮಾತ್ರ ಗಿಡ ಹಿಡಿದು ಫೊಟೊಕ್ಕೆ ಫೋಸು ನೀಡುವ ರಾಜಕಾರಣಿಗಳಿಗೆ ಎಂದು ಇಚ್ಛಾಶಕ್ತಿ ಜಾಗೃತವಾಗಿ ಪ್ಲಾಸ್ಟಿಕ್ ಎಂಬ ಮಾರಿಯನ್ನು ಸಂಪೂರ್ಣ ನಿಷೇಧ ಮಾಡುತ್ತಾರೋ ಕಾದು ನೋಡಬೇಕು.

English summary
Maharashtra government banned plastic from today onward. Karnataka also banned plastic but not implemented properly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X