ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಔಷಧ ಅಂಗಡಿ ಮುಷ್ಕರ : ಸಾರ್ವಜನಿಕರಿಗಿಲ್ಲ ಔಷಧಕ್ಕೆ ಬರ

|
Google Oneindia Kannada News

ಬೆಂಗಳೂರು: ಸೆ. 24 : ಕರ್ನಾಟಕ ಔಷಧ ವ್ಯಾಪಾರಿಗಳ ಸಂಘವು ಸೆ.28ರಂದು ರಾಜ್ಯದ ಔ‍ಷಧ ವ್ಯಾಪಾರ ಬಂದ್ ಮಾಡಲು ನಿರ್ಧರಿಸಿದ್ದಾರೆ.

ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ, ಸುವರ್ಣ ಕರ್ನಾಟಕ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಅಸೋಸಿಯೇಷನ್ ಆನ್‌ಲೈನ್ ಮೂಲಕ ಔಷಧ ಮಾರಾಟ ಮಾಡುವುದರ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಕರಡನ್ನು ಹಿಂಪಡೆಯುವಂತೆ ಒತ್ತಾಯಿಸಿ ಬಂದ್ ಮಾಡಲಾಗುತ್ತಿದೆ.

 ಸೆ.28ರಂದು ಮೆಡಿಕಲ್ ಶಾಪ್ ಬಂದ್ ಸೆ.28ರಂದು ಮೆಡಿಕಲ್ ಶಾಪ್ ಬಂದ್

ಈ ನಿಟ್ಟಿನಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ, ಖಾಸಗಿ ಆಸ್ಪತ್ರೆಗಳಲ್ಲಿ, ನರ್ಸಿಂಗ್ ಹೋಂಗಳಲ್ಲಿ, ಕಾರ್ಪೋರೇಟ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವಂತಹ ಔಷಧ ಅಂಗಡಿಗಳು ಬಂದ್‌ನಿಂದ ವಿನಾಯಿತಿ ಹೊಂದಿದ್ದು, ಸೆಪ್ಟೆಂಬರ್ 28ರಂದು ಎಂದಿನಂತೆ ತೆರೆದಿರುತ್ತವೆ. ಸಾರ್ವಜನಿಕರು ಔಷಧಿಗಳಿಗಾಗಿ ಔಷಧಿ ಅಂಗಡಿಯನ್ನು ಸಂಪರ್ಕಿಸಬಹುದಾಗಿದೆ.

Pharmacists strike on Sep.28: Drugs will available for public

ಔಷಧ ನಿಯಂತ್ರಣ ಇಲಾಖೆಯ ರಾಜ್ಯದ ಎಲ್ಲಾ ಜಿಲ್ಲೆಯ ಕಚೇರಿಗಳ ಸಹಾಯಕ ಔಷಧ ನಿಯಂತ್ರಕರುಗಳಿಗೆ ಸಾರ್ವಜನಿಕರಿಗೆ ಔಷಧ ಲಭ್ಯತೆ ಕುರಿತು ಮಾಹಿತಿಯನ್ನು ನೀಡಲು ಸೂಚಿಸಲಾಗಿದೆ.

ಸೆಪ್ಟೆಂಬರ್ 28ರಂದು ಸಾರ್ವಜನಿಕರಿಗೆ ಔಷಧಗಳ ಲಭ್ಯತೆಯ ಬಗ್ಗೆ ಮಾಹಿತಿಯನ್ನು ನೀಡಲು ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಅವರುಗಳನ್ನು ಸಂಪರ್ಕಿಸಬಹುದಾಗಿದೆ.

 ಹಳಿಗಳ ಮೇಲೆ ಆರೋಗ್ಯ: ಬಳ್ಳಾರಿಗೆ ಬಂದ ರೈಲು ಆಸ್ಪತ್ರೆ ಹಳಿಗಳ ಮೇಲೆ ಆರೋಗ್ಯ: ಬಳ್ಳಾರಿಗೆ ಬಂದ ರೈಲು ಆಸ್ಪತ್ರೆ

ನಮೃತಾ ಹಳ್ಳೂರ, ಸಹಾಯಕ ಔಷಧ ನಿಯಂತ್ರಕರು - 1, ಬೆಂಗಳೂರು ವೃತ್ತ-1, ಮೊಬೈಲ್ ಸಂಖ್ಯೆ 9739658184 ಹಾಗೂ ದೂರವಾಣಿ ಸಂಖ್ಯೆ 080-22341745.

ಎಂ. ಸುರೇಶ್, ಸಹಾಯಕ ಔಷಧ ನಿಯಂತ್ರಕರು - 1, ಬೆಂಗಳೂರು ವೃತ್ತ-2, ಮೊಬೈಲ್ ಸಂಖ್ಯೆ 9141166046 ಹಾಗೂ ದೂರವಾಣಿ ಸಂಖ್ಯೆ 080-22341789.

ವೆಂಕಟೇಶ್ ಬಿ.ಆರ್. ಸಹಾಯಕ ಔಷಧ ನಿಯಂತ್ರಕರು - 1, ಬೆಂಗಳೂರು ವೃತ್ತ-3, ಮೊಬೈಲ್ ಸಂಖ್ಯೆ 9980938139 ಹಾಗೂ ದೂರವಾಣಿ ಸಂಖ್ಯೆ 080-22341742.

ಗೋಣಿ ಫಕೀರಪ್ಪ ಸಹಾಯಕ ಔಷಧ ನಿಯಂತ್ರಕರು - 1, ಬೆಂಗಳೂರು ವೃತ್ತ-4, ಮೊಬೈಲ್ ಸಂಖ್ಯೆ 902759871 ಹಾಗೂ ದೂರವಾಣಿ ಸಂಖ್ಯೆ 080-2341743

ಮಲ್ಲಿಕಾರ್ಜುನ ನಾಗೂರ, ಸಹಾಯಕ ಔಷಧ ನಿಯಂತ್ರಕರು - 1, ಬೆಂಗಳೂರು ವೃತ್ತ-5, ಮೊಬೈಲ್ ಸಂಖ್ಯೆ 9449262039 ಹಾಗೂ ದೂರವಾಣಿ ಸಂಖ್ಯೆ 080-22341741.

ಉಮಾಕಾಂತ್ ಪಾಟೀಲ್, ಸಹಾಯಕ ಔಷಧ ನಿಯಂತ್ರಕರು - 1, ಬೆಂಗಳೂರು ವೃತ್ತ-6, ಮೊಬೈಲ್ ಸಂಖ್ಯೆ 9341264210 ಹಾಗೂ ದೂರವಾಣಿ ಸಂಖ್ಯೆ 080-2341740 ಕರೆ ಮಾಡಿ ಮಾಹಿತಿ ಪಡೆಯಬಹುದು.

ಜಿ.ವಿ. ನಾರಾಯಣ ರೆಡ್ಡಿ ಸಹಾಯಕ ಔಷಧ ನಿಯಂತ್ರಕರು, ಬೆಂಗಳೂರು ಗ್ರಾಮಾಂತರ ವೃತ್ತ ಮೊಬೈಲ್ ಸಂಖ್ಯೆ 9880139146 ಹಾಗೂ ದೂರವಾಣಿ ಸಂಖ್ಯೆ 080-2341805 ಈ ಸಂಖ್ಯೆಗಳನ್ನು ಸಂಪರ್ಕಿಸಿ.

English summary
State government has made an alternative arrangements for supply and stock of drugs in the state during strike called by Karnataka pharmacist association on September 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X