ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯನ ಅನ್ನಭಾಗ್ಯದ ಅಕ್ಕಿ ತಿಂದು ಮೋದಿಗೆ ವೋಟ್ ಹಾಕ್ತಾರೆ!

|
Google Oneindia Kannada News

ಕೋಲಾರ, ಜುಲೈ 1: ಕೆಲಸಕ್ಕೆ ನಾವು ಬೇಕು, ಅಭಿವೃದ್ದಿ ಕೆಲಸ ನಮ್ಮಿಂದಾಗ ಬೇಕು, ವೋಟ್ ಮಾತ್ರ ನರೇಂದ್ರ ಮೋದಿಗೆ ಹಾಕುತ್ತೀರಾ.. ಎನ್ನುವ ಕಾಂಗ್ರೆಸ್ ಮುಖಂಡರ ಹತಾಶೆಯ ಮಾತು ಮುಂದುವರಿದಿದೆ.

ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ನಂತರ ಕೋಲಾರದ ಮಾಜಿ ಸಂಸದ ಕೆ ಎಚ್ ಮುನಿಯಪ್ಪನವರ ಸರದಿ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ನಾನು ಗೆಲ್ಲಿಸಿದವರೇ ನನ್ನನ್ನು ಸೋಲಿಸಿದರು ಎಂದು ಮುನಿಯಪ್ಪ ಬೇಸರದ ಮಾತನ್ನಾಡಿದ್ದಾರೆ.

ಪ್ರಬಲ ನಾಯಕ: ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿರಿಮೆಗೆ ಪಾತ್ರರಾದ ಪ್ರಧಾನಿ ಮೋದಿಪ್ರಬಲ ನಾಯಕ: ಜಾಗತಿಕ ಮಟ್ಟದಲ್ಲಿ ಮತ್ತೊಂದು ಹಿರಿಮೆಗೆ ಪಾತ್ರರಾದ ಪ್ರಧಾನಿ ಮೋದಿ

ಜೊತೆಗೆ, ಸಿದ್ದರಾಮಯ್ಯನವರ ಸರಕಾರದ ಜನಪ್ರಿಯ ಅನ್ನಭಾಗ್ಯ ಯೋಜನೆಗೂ ಮತ್ತು ಲೋಕಸಭಾ ಚುನಾವಣೆಯ ಸೋಲಿಗೂ ಒಂದಕ್ಕೊಂದು ತುಲನೆ ಮಾಡಿದ್ದಾರೆ.

ಮೋದಿ ವಿರುದ್ದ ತೀರಾ ಕೆಳಮಟ್ಟದ ಪದ ಬಳಸಿದ ಕಾಂಗ್ರೆಸ್ ಸಂಸದಮೋದಿ ವಿರುದ್ದ ತೀರಾ ಕೆಳಮಟ್ಟದ ಪದ ಬಳಸಿದ ಕಾಂಗ್ರೆಸ್ ಸಂಸದ

ಕಳೆದ ಐದು ವರ್ಷದ ಅವಧಿಯಲ್ಲಿ, ಕೇಂದ್ರ ಸರಕಾರ ಉದ್ಯೋಗ ಸೃಷ್ಟಿಯಾಗಿಲ್ಲ. ಸಿದ್ದರಾಮಯ್ಯನ ಅನ್ನಭಾಗ್ಯದ ಅಕ್ಕಿ ತಿಂದು ಮೋದಿಗೆ ವೋಟ್ ಹಾಕಿದ್ದಾರೆ ಎನ್ನುವ ವಿವಾದಕಾರಿ ಹೇಳಿಕೆಯನ್ನು ಮುನಿಯಪ್ಪ ನೀಡಿದ್ದಾರೆ. ಮುನಿಯಪ್ಪ ವಿರುದ್ದ ಹಾಲೀ ಸಂಸದ ಮುನಿಸ್ವಾಮಿ ವಾಗ್ದಾಳಿ..

ಕೋಲಾರದ ಹಾಲೀ ಸಂಸದ ಎಸ್ ಮುನಿಸ್ವಾಮಿ ತಿರುಗೇಟು

ಕೋಲಾರದ ಹಾಲೀ ಸಂಸದ ಎಸ್ ಮುನಿಸ್ವಾಮಿ ತಿರುಗೇಟು

ಕೆ ಚ್ ಮುನಿಯಪ್ಪನವರ ಮಾತಿಗೆ ಕೋಲಾರದ ಹಾಲೀ ಸಂಸದ ಎಸ್ ಮುನಿಸ್ವಾಮಿ ತಿರುಗೇಟು ನೀಡಿದ್ದು, ರಾಜ್ಯದ ಜನತೆ ಯಾರ ಮನೆಯ ಅಕ್ಕಿಯನ್ನೂ ತಿಂದಿಲ್ಲ. ಸರಕಾರದ ಅಕ್ಕಿಯನ್ನು ತಿಂದಿರುವುದು ಎನ್ನುವುದನ್ನು ಮುನಿಯಪ್ಪನವರು ಅರಿಯಲಿ ಎಂದು ಮುನಿಸ್ವಾಮಿ ತಿರುಗೇಟು ನೀಡಿದ್ದಾರೆ.

ನರೇಂದ್ರ ಮೋದಿ ಸರಕಾರ ಬರೀ ಮಾತಿನಲ್ಲಿ ಕಾಲ ಕಳೆಯಿತು

ನರೇಂದ್ರ ಮೋದಿ ಸರಕಾರ ಬರೀ ಮಾತಿನಲ್ಲಿ ಕಾಲ ಕಳೆಯಿತು

ಕಳೆದ ಸಿದ್ದರಾಮಯ್ಯನವರ ಸರಕಾರ ಹಲವಾರು ಯೋಜನೆಯನ್ನು ತಂದಿತು. ನರೇಂದ್ರ ಮೋದಿ ಸರಕಾರ ಬರೀ ಮಾತಿನಲ್ಲಿ ಕಾಲ ಕಳೆಯಿತು. ರಾಷ್ಟ್ರೀಯತೆ, ಪುಲ್ವಾಮ, ಏರ್ ಸ್ಟ್ರೈಕ್ ಅನ್ನು ಬಳಸಿಕೊಂಡು, ಭಾವನಾತ್ಮಕವಾಗಿ ಜನರನ್ನು ಬಿಜಿಪಿ ಮೋಡಿ ಮಾಡಿತು. ಸಿದ್ದರಾಮಯ್ಯನವರ ಸರಕಾರದ ಅನ್ನಭಾಗ್ಯದ ಅಕ್ಕಿಯನ್ನು ತಿಂದು, ಮೋದಿಗೆ ಮತ ಹಾಕಿದರು ಎಂದು ಮುನಿಯಪ್ಪ ಹೇಳಿದರು.

ಬಹಿರಂಗವಾಗಿ ಹೇಳಿಕೆ ನೀಡಬಾರದು ಎನ್ನುವ ನಿರ್ದೇಶನವಿದೆ

ಬಹಿರಂಗವಾಗಿ ಹೇಳಿಕೆ ನೀಡಬಾರದು ಎನ್ನುವ ನಿರ್ದೇಶನವಿದೆ

ನನ್ನ ಸೋಲಿಗೆ ಕಾರಣವಾದ ಅಂಶವನ್ನು ಒಂದಲ್ಲಾ ಒಂದು ದಿನ ಬಿಚ್ಚಿಡುತ್ತೇನೆ. ಸಮ್ಮಿಶ್ರ ಸರಕಾರ ಅಧಿಕಾರದಲ್ಲಿ ಇರುವುದರಿಂದ, ಬಹಿರಂಗವಾಗಿ ಹೇಳಿಕೆ ನೀಡಬಾರದು ಎನ್ನುವ ನಿರ್ದೇಶನವಿದೆ. ನಾನು ಯಾರನ್ನು ಹಿತೈಶಿ ಎಂದು ನಂಬಿದ್ದೆನೋ ಅವರೆಲ್ಲಾ ನನಗೆ ಕೈಕೊಟ್ಟರು. ಕೆ ಸಿ ವ್ಯಾಲಿಯ ಲಾಭವನ್ನು ಪಡೆದವರು ಆ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡೇ ಇರಲಿಲ್ಲ ಎಂದು ಮುನಿಯಪ್ಪ ಬೇಸರ ವ್ಯಕ್ತ ಪಡಿಸಿದ್ದರು.

ಹಿರಿಯ ರಾಜಕಾರಣಿ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ

ಹಿರಿಯ ರಾಜಕಾರಣಿ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ

ಮುನಿಯಪ್ಪ ಹಿರಿಯ ರಾಜಕಾರಣಿ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿರುವ ಮುನಿಸ್ವಾಮಿ, ಮಾಲೂರು ಶಾಸಕ ನಂಜೇಗೌಡರ ಅವ್ಯವಹಾರವನ್ನು ಸದ್ಯದಲ್ಲೇ ಬಯಲುಗೆಳೆಯುತ್ತೇನೆ. ಸದ್ಯದಲ್ಲೇ ಅವರು ರಾಜೀನಾಮೆಗೆ ಸಿದ್ದರಾಗಿರಲಿ ಎಂದು ಮುನಿಸ್ವಾಮಿ ಎಚ್ಚರಿಕೆಯನ್ನು ನೀಡಿದ್ದಾರೆ.

ಲೋಕಸಭಾ ಚುನಾವಣೆಯ ಸೋಲಿನ ಹತಾಶೆ ಹೇಳಿಕೆ

ಲೋಕಸಭಾ ಚುನಾವಣೆಯ ಸೋಲಿನ ಹತಾಶೆ ಹೇಳಿಕೆ

ಈ ಹಿಂದೆ ಕುಮಾರಸ್ವಾಮಿ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮುಂತಾದವರೂ, ಲೋಕಸಭಾ ಚುನಾವಣೆಯ ಸೋಲಿನ ಹತಾಶೆಯ ಹೇಳಿಕೆಯನ್ನು ನೀಡಿದ್ದರು. ಮೋದಿಗೆ ವೋಟ್ ಹಾಕ್ತೀರಾ, ಅಭಿವೃದ್ದಿ ನಾವು ಮಾಡಬೇಕಾ ಎನ್ನುವ ಹೇಳಿಕೆಯನ್ನು ನೀಡಿದ್ದರು. ಅದು ವ್ಯಾಪಕ ಚರ್ಚೆಗೊಳಗಾಗಿತ್ತು. ಈಗ, ಹಿರಿಯ ರಾಜಕಾರಣಿ ಮುನಿಯಪ್ಪ ಕೂಡಾ ಅವರ ಸಾಲಿಗೆ ಸೇರಿದ್ದಾರೆ.

English summary
People used Anna Bhagya facility but voted for Narenda Modi: EX Kolar MP KH Muniyappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X