ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2023ರ ಚುನಾವಣೆಯಲ್ಲಿ ನಿಮ್ಮ ಆಯ್ಕೆ ಬಹಳ ಮುಖ್ಯ: ಎಚ್ಡಿಕೆ ಮಹತ್ವದ ಸಂದೇಶ

|
Google Oneindia Kannada News

ಮುಂಬರುವ ಅಂದರೆ 2023ರ ಚುನಾವಣೆಗೆ ಪೂರ್ವ ತಯಾರಿ ನಡೆಸುತ್ತಿರುವ ಜೆಡಿಎಸ್ ಪಕ್ಷ, ಹಲವು ಮುಖಂಡರ ಜೊತೆಗೆ ಮಾತುಕತೆಯನ್ನು ನಡೆಸುತ್ತಿದೆ. ಜೊತೆಗೆ, ಸಾಮಾಜಿಕ ಜಾಲತಾಣದಲ್ಲೂ ಪಕ್ಷ ಸಕ್ರಿಯವಾಗಿದೆ. ಪ್ರಸಕ್ತ ದೇಶ ಎದುರಿಸುತ್ತಿರುವ ಸಮಸ್ಯೆ, ಮುಂಬರುವ ಚುನಾವಣೆಯಲ್ಲಿ ಮತದಾರರು ಯೋಚಿಸಿ ಮತ ನೀಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ಅದರ ಯಥಾವತ್ ಕಾಪಿ ಹೀಗಿದೆ:

ರಾಷ್ಟ್ರೀಯ ಪಕ್ಷಗಳು ರಾಜ್ಯದ ಹಿತವನ್ನು ಕಾಪಾಡಲಾರವು. ರಾಜ್ಯದಲ್ಲಿ ಯಾವುದೇ ಸಮಸ್ಯೆಗಳು ಉದ್ಭವಿಸಿದಾಗ ಪ್ರಾದೇಶಿಕ ಪಕ್ಷಗಳು ತುಂಬಾ ಅಗತ್ಯವಾಗಿ ಕೆಲಸ ನಿರ್ವಹಿಸುತ್ತವೆ. ಪ್ರಾದೇಶಿಕ ಪಕ್ಷದವರು ಮಾತ್ರ ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಹೊರತು ರಾಷ್ಟ್ರೀಯ ಪಕ್ಷದ ನಾಯಕರು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.

 ಅಕ್ಕಿಭಾಗ್ಯ ಯೋಜನೆಯ 'ರಹಸ್ಯ'ವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಕುಮಾರಸ್ವಾಮಿ ಅಕ್ಕಿಭಾಗ್ಯ ಯೋಜನೆಯ 'ರಹಸ್ಯ'ವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಕುಮಾರಸ್ವಾಮಿ

ಕಾರಣವೇನೆಂದರೆ ರಾಷ್ಟ್ರೀಯ ಪಕ್ಷದ ನಾಯಕರೆಲ್ಲ ದೆಹಲಿಯಲ್ಲಿ ವಾಸ್ತವ್ಯ ಹೂಡಿರುತ್ತಾರೆ. ಇಂತಹ ಸ್ಥಿತಿಯಲ್ಲಿ ರಾಷ್ಟ್ರೀಯ ಪಕ್ಷಗಳ ಸ್ಥಿತಿಗತಿಗಳಿಂದ ರಾಜ್ಯಗಳು ಅಭಿವೃದ್ಧಿಯಾಗದೇ ಸೊರಗುತ್ತಿವೆ. ಆದ್ದರಿಂದ ಪ್ರಾದೇಶಿಕ ಪಕ್ಷದ ಅವಶ್ಯಕತೆ ಹಿಂದಿಗಿಂತಲೂ ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಾಗಿ ಬೇಕಾಗಿದೆ. ರಾಷ್ಟ್ರೀಯ ಪಕ್ಷಗಳು ಮನಸ್ಸು ಮಾಡಿದ್ದರೆ ಮರಾಠ ಮತ್ತು ಬೆಳಗಾವಿ ಸಮಸ್ಯೆಯನ್ನು ಎಂದೊ ಬಗೆಹರಿಸಬಹುದಿತ್ತು.

ಸೋಲಾಪುರವನ್ನು ಕರ್ನಾಟಕಕ್ಕೆ ಸೇರಿಸಬಹುದಿತ್ತು, ಕಾಸರಗೋಡನ್ನು ಮಂಗಳೂರಿಗೆ ಸೇರಿಸಬಹುದಿತ್ತು. ಕರ್ನಾಟಕ ಮತ್ತು ತಮಿಳುನಾಡಿನ ಕಾವೇರಿ ಸಮಸ್ಯೆಯನ್ನು ಸಹ ಬಗೆಹರಿಸಬಹುದಿತ್ತು. ಇದನ್ನೆಲ್ಲ ಮಾಡದೆ ರಾಷ್ಟ್ರೀಯ ಪಕ್ಷಗಳು ಕೇವಲ ಅವಕಾಶಕ್ಕಾಗಿ ಕೆಲಸ ಮಾಡಿ ಪ್ರಾದೇಶಿಕ ಸಮಸ್ಯೆಗಳನ್ನು ಬಗೆಹರಿಸದೆ ಹಾಗೆ ಉಳಿದಿವೆ. ಆದ್ದರಿಂದ ಪ್ರಾದೇಶಿಕ ಪಕ್ಷದ ಅಗತ್ಯವಿದೆ.

 ಮೋದಿ ಎನ್ನುವ 'ಭ್ರಮೆ' ಬಿಡಿ: ಬಿಎಸ್ವೈ ಹೇಳಿಕೆಯ ಅರ್ಥವಾದರೂ ಏನು? ಮೋದಿ ಎನ್ನುವ 'ಭ್ರಮೆ' ಬಿಡಿ: ಬಿಎಸ್ವೈ ಹೇಳಿಕೆಯ ಅರ್ಥವಾದರೂ ಏನು?

 ದೇವೇಗೌಡರ ನೇತೃತ್ವದಲ್ಲಿ ಕುಮಾರಣ್ಣನವರ ಮುಂದಾಳತ್ವದಲ್ಲಿ ಸಾಗಲಿದ್ದೇವೆ

ದೇವೇಗೌಡರ ನೇತೃತ್ವದಲ್ಲಿ ಕುಮಾರಣ್ಣನವರ ಮುಂದಾಳತ್ವದಲ್ಲಿ ಸಾಗಲಿದ್ದೇವೆ

ನಮ್ಮ ಜಾತ್ಯತೀತ ಜನತಾದಳವು ಸನ್ಮಾನ್ಯ ದೇವೇಗೌಡರ ನೇತೃತ್ವದಲ್ಲಿ ಕುಮಾರಣ್ಣನವರ ಮುಂದಾಳತ್ವದಲ್ಲಿ ಈ ರಾಜ್ಯದ ನೆಲ ಜಲದ ವಿಷಯ ಬಂದಾಗ ಎಂದೂ ರಾಜಿಯಾಗಲಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಇರುವ ಮಹದಾಯಿ ಯೋಜನೆ, ಕೃಷ್ಣ ಮೇಲ್ದಂಡೆ ಯೋಜನೆ ಇವೆಲ್ಲಾ ನಮ್ಮ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ದೇವೇಗೌಡರ ಕೊಡುಗೆ ಎಂದು ಹೇಳಲು ಬಯಸುತ್ತೇನೆ. ಮಂತ್ರಿಗಳಾದರು ರಾಜರಿಗಿಂತ ಹೆಚ್ಚು ದರ್ಬಾರು ಮಾಡುತ್ತಾರೆ ಆದರೆ ನಮ್ಮ ಕುಮಾರಣ್ಣನವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಹೂಡುವ ಮೂಲಕ ಮಾದರಿಯ ಪುರುಷರಾಗಿದ್ದಾರೆ.

 ಎಂತಹ ಸಂದರ್ಭ ಬಂದರೂ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಭರವಸೆ

ಎಂತಹ ಸಂದರ್ಭ ಬಂದರೂ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಭರವಸೆ

ಕುಮಾರಣ್ಣ ಅಧಿಕಾರಕ್ಕೆ ಬಂದಾಗ ಎಂತಹ ಸಂದರ್ಭ ಬಂದರೂ ರೈತರ ಸಾಲಮನ್ನಾ ಮಾಡುತ್ತೇನೆ ಎಂದು ಭರವಸೆ ನೀಡಿದರು. ಅದೇ ರೀತಿ ಸಾಲ ಮನ್ನಾ ಮಾಡಿಯೇ ತೀರಿದರು. ಬಡವರಿಗೆ, ರೈತಾಪಿ ವರ್ಗದವರಿಗೆ, ಮಹಿಳಾ ಸಂಘದವರಿಗೆ ಹಾಗೂ ಇನ್ನಿತರ ಅನೇಕ ಬದಲಾವಣೆಗಳು ಆಗಿರುವಂಥದ್ದು ನಮ್ಮ ಕುಮಾರಣ್ಣನ ಅವರಿಂದಲೇ ಎಂದು ಹೇಳಬಹುದು. ಮಹಿಳಾ ಉದ್ಯಮಿಗಳಿಗೆ ಎರಡು ಕೋಟಿವರೆಗೆ ಶೇಕಡ ನಾಲ್ಕರಷ್ಟು ಬಡ್ಡಿದರದಲ್ಲಿ ಸಾಲವನ್ನು ನೀಡುವ ಯೋಜನೆ ಹಾಗೂ ಸಣ್ಣ ಕೈಗಾರಿಕಾ ಉದ್ಯಮಿಗಳಿಗೆ 5 ಕೋಟಿವರಗೆ ಶೇಕಡ ನಾಲ್ಕರಷ್ಟು ಬಡ್ಡಿ ದರದಲ್ಲಿ ಸಾಲ ನೀಡಿದ್ದಾರೆ. ಇದೆಲ್ಲ ಕುಮಾರಣ್ಣನವರ ಸರ್ಕಾರವಿದ್ದಾಗ ಮಾಡಿರುವ ಕೆಲಸವಾಗಿದೆ. ಇದನ್ನು ಜನ ಅರ್ಥಮಾಡಿಕೊಳ್ಳಬೇಕಾಗಿದೆ.

 ಮುಂಬರುವ ಚುನಾವಣೆಯು ಈ ರಾಜ್ಯದ ದೃಷ್ಟಿಯಿಂದ ನಿರ್ಣಾಯಕ ಚುನಾವಣೆಯಾಗಿದೆ

ಮುಂಬರುವ ಚುನಾವಣೆಯು ಈ ರಾಜ್ಯದ ದೃಷ್ಟಿಯಿಂದ ನಿರ್ಣಾಯಕ ಚುನಾವಣೆಯಾಗಿದೆ

ಈ ದಿಸೆಯಲ್ಲಿ ಜಾತ್ಯತೀತ ಜನತಾದಳವು ಪಕ್ಷದ ಬಲವರ್ಧನೆ ಮತ್ತು ಸಮರ್ಥನೆಗಾಗಿ ತಳಮಟ್ಟದಿಂದ ಸಂಘಟನೆಗಾಗಿ ಹೊರಟಿದ್ದೇವೆ ಉದಾಹರಣೆಗೆ ಬೂತ್, ವಾರ್ಡ್, ಹೋಬಳಿ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಸಂಘಟನೆ ನಡೆಯುತ್ತಿದೆ ಪ್ರತಿಯೊಬ್ಬ ಸದಸ್ಯನು ಹಳ್ಳಿಯ ಮೂಲ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಾಗಿದಾಗ ಮಾತ್ರ ನಮ್ಮ ಗುರಿ 2023 ರಂದು ತಲುಪಲು ಸಾಧ್ಯವಾಗುತ್ತದೆ. ರಾಷ್ಟ್ರೀಯ ಪಕ್ಷಗಳು ತಾವೇ ತೊಳಲಾಟದಲ್ಲಿ ಸಿಲುಕಿಕೊಂಡು ಸ್ಥಳೀಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಇಲ್ಲ ಎನ್ನುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ ಮುಂಬರುವ ಚುನಾವಣೆಯು ಈ ರಾಜ್ಯದ ದೃಷ್ಟಿಯಿಂದ ನಿರ್ಣಾಯಕ ಚುನಾವಣೆಯಾಗಿದೆ.

 ಪ್ರತಿಯೊಬ್ಬ ಮತದಾರನು ಯೋಚಿಸಬೇಕಾದ ಚುನಾವಣೆಯಾಗಿದೆ

ಪ್ರತಿಯೊಬ್ಬ ಮತದಾರನು ಯೋಚಿಸಬೇಕಾದ ಚುನಾವಣೆಯಾಗಿದೆ

ಪ್ರತಿಯೊಬ್ಬ ಮತದಾರನು ಯೋಚಿಸಬೇಕಾದ ಚುನಾವಣೆಯಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ವಿದ್ಯಾವಂತ ಇಂದಿನ ಯುವ ಪೀಳಿಗೆ ಜಾತ್ಯತೀತ ಜನತಾ ದಳದ ಕಡೆಗೆ ಹೋಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದನ್ನೆಲ್ಲ ಪತ್ರಿಕಾ ಪ್ರತಿನಿಧಿಗಳು ಹಾಗೂ ನ್ಯೂಸ್ ಚಾನೆಲ್ ರವರು ಅರ್ಥಮಾಡಿಕೊಂಡು ವಾಸ್ತವ ಅಂಶಗಳನ್ನು ಬಿತ್ತರಿಸುವ ನಿಟ್ಟಿನಲ್ಲಿ ಸಾಗಬೇಕಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ರಾಷ್ಟ್ರೀಯ ಪಕ್ಷಗಳಲ್ಲಿ ಸಚಿವ ಒಂದು ಸ್ಥಾನ ಬದಲಾಯಿಸಬೇಕಾದರೂ ದೆಹಲಿಯತ್ತ ಮುಖ ಮಾಡುವ ಸನ್ನಿವೇಶ ಉಂಟಾಗಿದೆ. ಆದರೆ ನಮ್ಮ ಪ್ರಾದೇಶಿಕ ಪಕ್ಷದಲ್ಲಿ ಇಂತಹ ಗೊಂದಲಗಳು ಇರುವುದಿಲ್ಲ. ಉದಾಹರಣೆಗೆ ನೀವು ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳನ್ನು ಗಮನಿಸಬಹುದು. ಈ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಅಧಿಕಾರದಲ್ಲಿರುವ ಕಾರಣ ಅಭಿವೃದ್ಧಿಯ ಕೆಲಸಗಳು ಸರಾಗವಾಗಿ ಸಾಗುತ್ತವೆ.

 ಯುವಕರ ಉದ್ಯೋಗದ ಬಗ್ಗೆ ನಾವು ಯೋಚನೆ ಮಾಡಬೇಕಾಗಿದೆ

ಯುವಕರ ಉದ್ಯೋಗದ ಬಗ್ಗೆ ನಾವು ಯೋಚನೆ ಮಾಡಬೇಕಾಗಿದೆ

ನಮ್ಮ ರಾಜ್ಯದಲ್ಲಿ ಸುಮಾರು 90 ಲಕ್ಷ ಜನ 18 ರಿಂದ 35 ವರ್ಷದೊಳಗಿನ ಯುವಕರಿದ್ದಾರೆ. ಈ ಯುವಕರ ಉದ್ಯೋಗದ ಬಗ್ಗೆ ನಾವು ಯೋಚನೆ ಮಾಡಬೇಕಾಗಿದೆ. ಇದರ ಜೊತೆಗೆ ಅವರು ಸ್ವ-ಉದ್ಯೋಗವನ್ನು ಕಂಡುಕೊಳ್ಳಲು ದಾರಿ ತೋರಿಸಬೇಕಾದ ಅಗತ್ಯತೆ ಇದೆ. ಇದನ್ನೆಲ್ಲಾ ರಾಷ್ಟ್ರೀಯ ಪಕ್ಷಗಳು ಮಾಡುವ ಸಾಧ್ಯತೆ ಇಲ್ಲ ಆದ್ದರಿಂದ ಈ ಬಾರಿ ಜನರು ಪ್ರಾದೇಶಿಕ ಪಕ್ಷವನ್ನು ಅನುಸರಿಸಿ ನಿಮ್ಮ ಯಶಸ್ಸಿಗೆ ಕಾರಣಕರ್ತರಾಗಿ ಎಂಬ ಮನವಿ ಮಾಡುತ್ತಿದ್ದೇವೆ .

Recommended Video

ಸೋಲು ಕಣ್ಣ ಮುಂದೆ ಇದ್ರೂ RCB ಆಟಗಾರನ ಕಣ್ಣು ಈಕೆ ಮೇಲೆ | Oneindia Kannada

English summary
People Of Karnataka Should Vote, Carefully Former CM H D Kumaraswamy Facebook Post. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X