ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಗ ರಾಜ್ಯದ ನೆರವಿಗೆ ಬಂದಿದ್ದರು ಮನಮೋಹನ್ ಸಿಂಗ್: ಈಗ ಮೋದಿ ಎಲ್ಲಿದ್ದಾರೆ?

|
Google Oneindia Kannada News

Recommended Video

Karnataka Flood : ಅಂದು ರಾಜ್ಯದ ಸಹಾಯಕ್ಕೆ ಬಂದಿದ್ದರು ಮನಮೋಹನ್ ಸಿಂಗ್ | ಇಂದು ಮೋದಿ ಎಲ್ಲಿದ್ದಾರೆ?

ಬೆಂಗಳೂರು, ಆಗಸ್ಟ್ 11: ಸಾಮಾಜಿಕ ಜಾಲತಾಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಸಿಎಂ ಯಡಿಯೂರಪ್ಪ ಅವರು ಒಟ್ಟಿಗೆ ವೈಮಾನಿಕ ಸಮೀಕ್ಷೆ ಮಾಡುತ್ತಿರುವ ಚಿತ್ರ ವೈರಲ್ ಆಗಿದ್ದು, ಮೋದಿ ಎಲ್ಲಿದ್ದಾರೆ? ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ.

ಯಡಿಯೂರಪ್ಪ ಅವರು ಈ ಹಿಂದೆ 2008 ರಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದಾಗಲೂ ಈಗಿನಂತೆಯೇ ಉತ್ತರ ಕರ್ನಾಟದಲ್ಲಿ ಭಾರಿ ಪ್ರವಾಹ ಬಂದಿತ್ತು. ಆಗ ರಾಜ್ಯದ ನೆರವಿಗೆ ತುರ್ತಾಗಿ ಧಾವಿಸಿದ್ದ ಅಂದಿನ ಪ್ರಧಾನಿ ಕಾಂಗ್ರೆಸ್‌ನ ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಒಟ್ಟಿಗೆ ವೈಮಾನಿಕ ಸಮೀಕ್ಷೆ ನಡೆಸಿದ್ದರು.

ಪ್ರವಾಹದಿಂದ 6 ಸಾವಿರ ಕೋಟಿ ನಷ್ಟ, 24 ಸಾವು: ಯಡಿಯೂರಪ್ಪ ಪ್ರವಾಹದಿಂದ 6 ಸಾವಿರ ಕೋಟಿ ನಷ್ಟ, 24 ಸಾವು: ಯಡಿಯೂರಪ್ಪ

ಅಷ್ಟೆ ಅಲ್ಲದೆ, ಸಿಎಂ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಮನಮೋಹನ್ ಸಿಂಗ್ ಅವರು, ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಕ್ಕೆ ಕೇಂದ್ರದಿಂದ ಭಾರಿ ನೆರವನ್ನು ಘೋಷಿಸಿದ್ದರು. ಯಡಿಯೂರಪ್ಪ ಅವರೂ ಸಹ ಮನಮೋಹನ್ ಸಿಂಗ್ ಅವರ ನೆರವಿಗೆ ತುಂಬು ಮನಸ್ಸಿನಿಂದ ಕೃತಜ್ಞತೆ ಸಲ್ಲಿಸಿದ್ದರು.

ರಾಜ್ಯದೆಡೆಗೆ ಇಲ್ಲ ಕೇಂದ್ರದ ಕರುಣೆಯ ಕಣ್ಣು?

ರಾಜ್ಯದೆಡೆಗೆ ಇಲ್ಲ ಕೇಂದ್ರದ ಕರುಣೆಯ ಕಣ್ಣು?

ಈಗ ಮತ್ತೆ ಯಡಿಯೂರಪ್ಪ ಅವರು ಸಿಎಂ ಆಗಿದ್ದಾರೆ. ಈಗ ಮತ್ತೆ ಉತ್ತರ ಕರ್ನಾಟಕ ಸೇರಿದಂತೆ ಕರಾವಳಿಯಲ್ಲೂ ಪ್ರವಾಹ ಪರಿಸ್ಥಿತಿ ತಲೆದೂರಿದೆ. ಕಳೆದ ಬಾರಿಗಿಂತಲೂ ಭೀಕರ ನೆರೆ ಈ ಬಾರಿ ಇದೆ. ಆದರೆ ಕೇಂದ್ರವು ಏಕೋ ರಾಜ್ಯದೆಡೆ ಕರುಣೆಯ ಕಣ್ಣು ಬಿಟ್ಟಿಲ್ಲ.

ಮೋದಿಯಿಂದ ಬಂದಿಲ್ಲ ನೆರವಿನ ಭರವಸೆ?

ಮೋದಿಯಿಂದ ಬಂದಿಲ್ಲ ನೆರವಿನ ಭರವಸೆ?

ಯಡಿಯೂರಪ್ಪ ಅವರು ಮೋದಿ ಅವರನ್ನು ಭೇಟಿ ಆಗಿ ಬಂದದ್ದೇ ಬಂತು ಆದರೆ ನೆರವಿನ ಭರವಸೆ ಬರಲಿಲ್ಲ. ಇದಕ್ಕೆ ಪ್ರತಿಯಾಗಿ ರಾಜ್ಯದ ಸಂಸದರೇ ಆಗಿರುವ ಕೇಂದ್ರದಲ್ಲಿ ಸಚಿವರಾಗಿರುವ ಪ್ರಹ್ಲಾದ್ ಜೋಶಿ ಅವರು, ಬೇಜವಾಬ್ದಾರಿ ಹೇಳಿಕೆ ನೀಡಿ, ರಾಜ್ಯವು ಕೇಂದ್ರಕ್ಕೆ ನೆರವನ್ನೇ ಕೇಳಿಲ್ಲ, ಅವರು ಕೇಳಲಿ ನಾವು ಸಹಾಯ ಮಾಡುತ್ತೇವೆ ಎಂದರು. ಇದು ಗಾಯದ ಏಲೆ ಉಪ್ಪು ಸವರಿದಂತಾಗಿದೆ.

ಯಡಿಯೂರಪ್ಪ ಸಂಪುಟ ರಚನೆ ವಿಳಂಬಕ್ಕೆ 'ಕೆಜೆಪಿ' ಎಫೆಕ್ಟ್ ಕಾರಣ?ಯಡಿಯೂರಪ್ಪ ಸಂಪುಟ ರಚನೆ ವಿಳಂಬಕ್ಕೆ 'ಕೆಜೆಪಿ' ಎಫೆಕ್ಟ್ ಕಾರಣ?

25 ಸಂಸದರನ್ನು ಆರಿಸಿದ್ದು ವ್ಯರ್ಥವಾಯಿತೇ?: ನೆಟ್ಟಿಗರ ಪ್ರಶ್ನೆ

25 ಸಂಸದರನ್ನು ಆರಿಸಿದ್ದು ವ್ಯರ್ಥವಾಯಿತೇ?: ನೆಟ್ಟಿಗರ ಪ್ರಶ್ನೆ

ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೆ ಹೆಚ್ಚು ಅನುದಾನಗಳು ಸಹಾಯಗಳು ದೊರೆಯುತ್ತವೆ ಎಂದು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯವರು ಹೇಳಿದ್ದರು. ಬಿ.ಎಲ್.ಸಂತೋಶ್ ಅವರಂತೂ ಒಂದು ಹೆಜ್ಜೆ ಮುಂದೆ ಹೋಗಿ ಒಂದು ಮತ ಎರಡು ಸರ್ಕಾರ ಎಂದು ರಾಜ್ಯದಲ್ಲಿ ಪ್ರಚಾರ ಮಾಡಿದ್ದರು. ಅದರಂತೆ ಬಿಜೆಪಿಯ 25 ಸಂಸದರನ್ನು ಜನ ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಅದರಿಂದ ಲಾಭ ಆಗುತ್ತಿರುವುದಂತೂ ಪ್ರಸ್ತುತ ಕಂಡು ಬರುತ್ತಿಲ್ಲ ಎಂಬುದು ನೆಟ್ಟಿಗರ ನೋವು.

ಐದು ಸಾವಿರ ಕೋಟಿ ನೆರವಿಗೆ ಸಿದ್ದರಾಮಯ್ಯ ಸತತ ಒತ್ತಾಯ

ಐದು ಸಾವಿರ ಕೋಟಿ ನೆರವಿಗೆ ಸಿದ್ದರಾಮಯ್ಯ ಸತತ ಒತ್ತಾಯ

ರಾಜ್ಯದಲ್ಲಿ ಉದ್ಭವಿಸಿರುವ ಪ್ರಹಾವ ಪರಿಸ್ಥಿತಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ವಿಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಪ್ರತಿದಿನವೂ ಒತ್ತಾಯಿಸುತ್ತಲೇ ಇದ್ದಾರೆ. ಜೊತೆಗೆ ರಾಜ್ಯಕ್ಕೆ ತುರ್ತಾಗಿ 5000 ಕೋಟಿ ನೆರವನ್ನು ಬಿಡುಗಡೆ ಮಾಡಬೇಕು ಎಂದು ಸಹ ಒತ್ತಾಯ ಮಾಡುತ್ತಿದ್ದಾರೆ.

ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಸಿದ್ದರಾಮಯ್ಯ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ: ಸಿದ್ದರಾಮಯ್ಯ

English summary
Former PM Manmohan Singh did joing flood aerial survey in 2008 while flood hit North Karnataka. people demanding Modi to come.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X