ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ: ಇನ್ನುಮುಂದೆ ಸಾವಿರ ದಂಡ

By Nayana
|
Google Oneindia Kannada News

ಬೆಂಗಳೂರು, ಜೂನ್ 2: ಧೂಮಪಾನ ಮಾಡುವುದು ತುಂಬಾ ಅಪಾಯಕಾರಿ ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ, ಆದರೂ ನಮ್ಮ ಪಡ್ಡೆಹುಡುಗರು, ಮಧ್ಯ ವಯಸ್ಕರು, ವೃದ್ಧರಾದಿಯಾಗಿ ಎಲ್ಲರೂ ಎಲ್ಲೆಂದರಲ್ಲಿ ಧಮ್ ಹೊಡೆಯುತ್ತಾರೆ.

ಅದಕ್ಕಾಗಿ ಆರೋಗ್ಯ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್, ಬೀಡಿ ಸೇದಿದರೆ ದಂಡವನ್ನು 200ರೂ.ದಿಂದ ಒಂದು ಸಾವಿರಕ್ಕೆ ಹೆಚ್ಚಿಸಲು ಮುಂದಾಗಿದೆ.

ಧೂಮಪಾನಿಗಳ ಸಂಖ್ಯೆ: ಚೀನಾದ ಹಿಂದೆಯೇ ಇದೆ ಭಾರತ! ಧೂಮಪಾನಿಗಳ ಸಂಖ್ಯೆ: ಚೀನಾದ ಹಿಂದೆಯೇ ಇದೆ ಭಾರತ!

ಸಿಗರೇಟ್ ಹಾಗೂ ಇತರೆ ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಸೆಕ್ಷನ್ 4ರ ಅಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ.ಅಷ್ಟೇ ಅಲ ಸೆಕಷನ್ 5ರ ಅಡಿ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ಉತ್ತೇಜನ ಹಾಗೂ ಪ್ರಾಯೋಜಕತೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

Penalty on smoking in public place will increase to Rs1000

ವರ್ಷದಿಂದ ವರ್ಷಕ್ಕೆ ಧೂಮವ್ಯಸನಿಗಳ ಸಂಖ್ಯೆ ಅಧಿಕವಾಗುತ್ತಲೇ ಇದೆ. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಹತ್ತಿಕ್ಕಲು ಮಾಸ್ಟರ್ ಪ್ಲಾನ್ ಮಾಡಿದ್ದು, ಈಗಿರುವ 200ರೂ. ದಂಡವನ್ನು 1 ಸಾವಿರತ ರೂ.ಗೆ ಏರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರದಲ್ಲಿ ಧೂಮವ್ಯಸನಿಗಳಿಗೆ ಆಘಾತ ಕಾದಿದೆ.

English summary
Department of health and family welfare is planning to increase penalty for smoking in public places from Rs 200 to rs 1,000 soon to effectively restrict smoking in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X