ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ - 19 ಪರೀಕ್ಷೆ; ಕರ್ನಾಟಕದಿಂದ ಮಹತ್ವದ ಆದೇಶ

|
Google Oneindia Kannada News

ಬೆಂಗಳೂರು, ಮೇ 29 : ಕೋವಿಡ್ - 19 ಪರೀಕ್ಷೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಮಹತ್ವದ ಆದೇಶವನ್ನು ಹೊರಡಿಸಿದೆ. ಹೊರ ರಾಜ್ಯ ಅಥವ ದೇಶದಿಂದ ಬರುವ ಪ್ರಯಾಣಿಕರು ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬಹುದು. ಇದಕ್ಕೆ 650 ರೂ. ದರವನ್ನು ನಿಗದಿ ಮಾಡಿ ಆದೇಶ ಹೊರಡಿಸಲಾಗಿದೆ.

Recommended Video

ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳು | Yuvraj singh | Oneindia Kannada

ಅಂತರಾಷ್ಟ್ರೀಯ, ಅಂತರ ರಾಜ್ಯ ಪ್ರಯಾಣಿಕರು ಕರ್ನಾಟಕಕ್ಕೆ ವಿಮಾನ ಅಥವ ರೈಲಿನಲ್ಲಿ ಆಗಮಿಸಿದಾಗ ಖಾಸಗಿ ಲ್ಯಾಬ್‌ನಲ್ಲಿ ಕೋವಿಡ್ - 19 ಪರೀಕ್ಷೆ ಮಾಡಿಸಿಕೊಳ್ಳಬೇಕು. ರಾಜ್ಯಕ್ಕೆ ಆಗಮಿಸಿದ ಒಂದು ದಿನದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ಹೇಳಿದೆ.

ಕೊಪ್ಪಳದಲ್ಲಿ ಕೋವಿಡ್ - 19 ಪರೀಕ್ಷೆ ಲ್ಯಾಬ್ ಆರಂಭ ಕೊಪ್ಪಳದಲ್ಲಿ ಕೋವಿಡ್ - 19 ಪರೀಕ್ಷೆ ಲ್ಯಾಬ್ ಆರಂಭ

ಅಂತರಾಷ್ಟ್ರೀಯ ಮತ್ತು ಹೊರ ರಾಜ್ಯದ ಅನೇಕ ಜನರು ಬೆಂಗಳೂರು ಮತ್ತು ಇತರ ಜಿಲ್ಲೆಗಳಿಗೆ ಆಗಮಿಸುತ್ತಿದ್ದಾರೆ. ಎಲ್ಲರಿಗೂ 7 ದಿನದ ಕ್ವಾರಂಟೈನ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಕರ್ನಾಟಕ ಹೇಳಿದೆ. ಆದ್ದರಿಂದ, ಅವರಿಗೆ ಕೋವಿಡ್ - 19 ಪರೀಕ್ಷೆ ಮಾಡಿಸಿಕೊಳ್ಳಲು ಸರ್ಕಾರ ತಿಳಿಸಿದೆ.

5 ಪ್ರಯಾಣಿಕರಿಗೆ ಕೋವಿಡ್ -19 ಸೋಂಕು; 51 ಜನರಿಗೆ ಕ್ವಾರಂಟೈನ್ 5 ಪ್ರಯಾಣಿಕರಿಗೆ ಕೋವಿಡ್ -19 ಸೋಂಕು; 51 ಜನರಿಗೆ ಕ್ವಾರಂಟೈನ್

COVID - 19 Test

ಖಾಸಗಿ ಲ್ಯಾಬ್‌ಗಳು ವಿಮಾನ ನಿಲ್ದಾಣ, ರೈಲು ನಿಲ್ದಾಣದಲ್ಲಿಯೇ ಪ್ರಯಾಣಿಕರಿಂದ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಪರೀಕ್ಷೆ ವರದಿ ಬಗ್ಗೆ ಲ್ಯಾಬ್‌ಗಳು ಪ್ರಯಾಣಿಕ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.

ಕೋವಿಡ್ - 19 ಓಡಿಸಲು ದೇವಾಲಯದಲ್ಲಿ ನರಬಲಿ ಕೊಟ್ಟ ಅರ್ಚಕ! ಕೋವಿಡ್ - 19 ಓಡಿಸಲು ದೇವಾಲಯದಲ್ಲಿ ನರಬಲಿ ಕೊಟ್ಟ ಅರ್ಚಕ!

ರೈಲು ನಿಲ್ದಾಣ, ವಿಮಾನ ನಿಲ್ದಾಣ, ಹೋಟೆಲ್‌ನಲ್ಲಿ ಮಾದರಿಯನ್ನು ಸಂಗ್ರಹ ಮಾಡಬಹುದು. ಆರ್‌. ಟಿ-ಪಿಸಿಆರ್ ಮಾದರಿಯಲ್ಲಿ ಐಸಿಎಂಆರ್ ಮಾರ್ಗಸೂಚಿಯಂತೆ ಪರೀಕ್ಷೆಗಳನ್ನು ಖಾಸಗಿ ಲ್ಯಾಬ್‌ಗಳು ನಡೆಸಬೇಕು.

ವಿಮಾನ ನಿಲ್ದಾಣ, ರೈಲು ನಿಲ್ದಾಣದ ಅಧಿಕಾರಿಗಳು ಲ್ಯಾಬ್‌ಗಳು ಮಾದರಿ ಸಂಗ್ರಹ ಕೇಂದ್ರವನ್ನು ಸ್ಥಾಪನೆ ಮಾಡಲು ಅವಕಾಶವನ್ನು ನೀಡಬೇಕು. ಇದಕ್ಕೆ ಯಾವುದೇ ರೀತಿಯ ದರವನ್ನು ವಿಧಿಸುವಂತಿಲ್ಲ.

ಒಂದು ವೇಳೆ ಪ್ರಯಾಣಿಕನಿಗೆ ಪರೀಕ್ಷೆ ವೇಳೆ ಕೊರೊನಾ ಸೋಂಕು ಖಚಿತವಾದರೆ ತಕ್ಷಣ ಆ ವಲಯದ ಆರೋಗ್ಯ, ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಬೇಕು. ಜಿಲ್ಲಾಧಿಕಾರಿಗಳು ಆಯಾ ಜಿಲ್ಲೆಯ ಖಾಸಗಿ ಲ್ಯಾಬ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು ಎಂದು ಸೂಚಿಸಲಾಗಿದೆ.

English summary
Karnataka government ordered that international and interstate passengers arrived to state by air and train will have to shell out Rs 650 for pool testing at private labs for COVID - 19 test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X