ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತರ ರಾಜ್ಯ ಸಂಚಾರ; ಸಿಹಿ ಸುದ್ದಿ ಕೊಟ್ಟ ಕರ್ನಾಟಕ ಪೊಲೀಸ್

|
Google Oneindia Kannada News

ಬೆಂಗಳೂರು, ಮೇ 22 : ಕರ್ನಾಟಕದಿಂದ ಅಂತರ ರಾಜ್ಯ ಸಂಚಾರ ನಡೆಸುವ ಜನರಿಗೆ ಕರ್ನಾಟಕದ ಪೊಲೀಸರು ಸಿಹಿ ಸುದ್ದಿ ನೀಡಿದ್ದಾರೆ. ಇನ್ನು ಮುಂದೆ ಅಂತರ ರಾಜ್ಯ ಸಂಚಾರ ಮಾಡಬೇಕಾದರೆ ಕರ್ನಾಟಕ ಪೊಲೀಸರು ನೀಡುವ ಪಾಸು ಪಡೆಯುವ ಅಗತ್ಯವಿಲ್ಲ.

Recommended Video

ದೂರದ ಕತಾರ್‌ನಿಂದ ಭಾರತಕ್ಕೆ ಹಿಂದಿರುಗುತ್ತಿರುವ ಕನ್ನಡಿಗರು | Oneindia Kannada

ಶುಕ್ರವಾರ ಡಿಜಿ& ಐಜಿಪಿ ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ. ಕರ್ನಾಟಕದಿಂದ ಬೇರೆ ರಾಜ್ಯಕ್ಕೆ ಹೋಗಲು ಪಾಸುಗಳ ಅಗತ್ಯವಿಲ್ಲ (ಒನ್ ವೇ) ಎಂದು ಹೇಳಿದ್ದಾರೆ. ಆದರೆ, ಜನರು ತಾವು ಪ್ರಯಾಣ ಮಾಡುವ ರಾಜ್ಯದ ಒಪ್ಪಿಗೆಯನ್ನು ಪಡೆದಿರಬೇಕಾಗುತ್ತದೆ.

ಅಂತರ ಜಿಲ್ಲಾ ಸಂಚಾರ ಪಾಸು; ಪೊಲೀಸರ ಮಹತ್ವದ ಆದೇಶ ಅಂತರ ಜಿಲ್ಲಾ ಸಂಚಾರ ಪಾಸು; ಪೊಲೀಸರ ಮಹತ್ವದ ಆದೇಶ

ಇಷ್ಟು ದಿನ ಜನರು ಅಂತರ ರಾಜ್ಯ ಪ್ರಯಾಣ ಮಾಡಲು ಕರ್ನಾಟಕ ಪೊಲೀಸರು ನೀಡುವ ಪಾಸು ಪಡೆಯಬೇಕಿತ್ತು. ಅವರು ಪ್ರಯಾಣ ಮಾಡುವ ರಾಜ್ಯದ ಪಾಸುಗಳನ್ನು ಪಡೆಯಬೇಕಿತ್ತು. ಆದರೆ, ಈಗ ಕರ್ನಾಟಕದ ಪೊಲೀಸರ ಒಪ್ಪಿಗೆ ಬೇಕಿಲ್ಲ.

ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ

Pass Not Required For Inter State Movement From Karnataka

ವಿಮಾನ ಪ್ರಯಾಣಿಕರ ಗಮನಕ್ಕೆ : ಬೇರೆ ರಾಜ್ಯಗಳಿಂದ ವಿಮಾನ ಸಂಚಾರಕ್ಕಾಗಿ ಕರ್ನಾಟಕಕ್ಕೆ ಬರುವ ಪ್ರಯಾಣಿಕರು ಕ್ವಾರಂಟೈನ್‌ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ. ಅವರು ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಬಹುದು ಎಂದು ಕರ್ನಾಟಕ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕ್ವಾರಂಟೈನ್; ಹೋಟೆಲ್ ದರ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ ಕ್ವಾರಂಟೈನ್; ಹೋಟೆಲ್ ದರ ಪಟ್ಟಿ ಬಿಡುಗಡೆ ಮಾಡಿದ ಬಿಬಿಎಂಪಿ

ವಿಮಾನ ಪ್ರಯಾಣಕ್ಕಲ್ಲದೇ ಬೇರೆ ಕಾರಣಕ್ಕಾಗಿ ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಆಗಮಿಸುವ ಜನರು ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಆದರೆ, ಅಂತರಾಷ್ಟ್ರೀಯ ವಿಮಾನ ಏರಲು ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಇಲ್ಲ.

ಕರ್ನಾಟಕ ಪೊಲೀಸರು ಎರಡು ದಿನದ ಹಿಂದೆ ಅಂತರ ಜಿಲ್ಲಾ ಸಂಚಾರಕ್ಕೆ ಪಾಸು ಪಡೆಯುವುದು ಬೇಡ ಎಂದು ಸ್ಪಷ್ಟಪಡಿಸಿದ್ದರು. ಈಗ ಅಂತರರಾಜ್ಯ ಪಾಸುಗಳನ್ನು ತೆಗೆದುಹಾಕಲಾಗಿದೆ.

English summary
In a tweet Karnataka DG & IGP said that pass is not required for inter state movement from Karnataka. But people have written consent of the receiving state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X