• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನತಾದರ್ಶನದಲ್ಲಿ ದೂರು, ಡಿಡಿಪಿಐ ಅಮಾನತು ಮಾಡಿದ ಎಚ್‌ಡಿಕೆ

By Gururaj
|

ಬೆಂಗಳೂರು, ಜೂನ್ 14 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಡಿಡಿಪಿಐ ಒಬ್ಬರನ್ನು ಅಮಾನತು ಮಾಡಲಾಗಿದೆ. ಡಿಡಿಪಿಐ ವಿರುದ್ಧ ಜನತಾದರ್ಶನದಲ್ಲಿ ಸಾರ್ವಜನಿಕರು ದೂರು ನೀಡಿದ್ದರು.

ಬೆಂಗಳೂರು ಉತ್ತರ ತಾಲೂಕಿನ ಡಿಡಿಪಿಐ ಅವರನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅಮಾನತು ಮಾಡಿದೆ. ಡಿಡಿಪಿಐ ಅಮಾನತು ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದರು.

ಜನತಾ ದರ್ಶನ: ಕೃಷ್ಣಾ ಬಿಟ್ಟು ಸಿಎಂ ನಿವಾಸಕ್ಕೆ ಬರುತ್ತಿರುವ ಸಾರ್ವಜನಿಕರು

ಅಬ್ದುಲ್ ವಾಜೀದ್ ಖಾಜಿ ಎಂಬ ಮಗುವಿನ ಪೋಷಕರು ಗುರುವಾರ ಬೆಳಗ್ಗೆ ಕುಮಾರಸ್ವಾಮಿ ಅವರಿಗೆ ಜನತಾದರ್ಶನದಲ್ಲಿ ಡಿಡಿಪಿಐ ವಿರುದ್ಧ ದೂರು ನೀಡಿದ್ದರು. ಕಡ್ಡಾಯ ಶಿಕ್ಷಣ ಕಾಯ್ದೆಯಡಿ ಸೀಟು ಕೊಡುವ ವಿಚಾರದಲ್ಲಿ ಡಿಡಿಪಿಐ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಕೆಂಪಾಪುರದ ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಲು ಡಿಡಿಪಿಐ ಸಹಕಾರ ನೀಡುತ್ತಿಲ್ಲ ಎಂದು ಮತ್ತೊಬ್ಬ ಫೋಷಕರು ದೂರು ಸಲ್ಲಿಸಿದ್ದರು. ಡಿಡಿಪಿಐಗೆ ಹಿಂದೆ ಹಲವು ಬಾರಿ ಎಚ್ಚರಿಕೆಯನ್ನು ನೀಡಲಾಗಿತ್ತು. ಅವರ ವಿರುದ್ಧ ಇಲಾಖಾ ತನಿಖೆಗೆ ಸಹ ಆದೇಶ ನೀಡಲಾಗಿತ್ತು.

ಜನತಾದರ್ಶನಕ್ಕೆ 4 ಸದಸ್ಯರ ತಂಡ ರಚನೆ ಮಾಡಿದ ಎಚ್.ಡಿ.ಕುಮಾರಸ್ವಾಮಿ

ಆದ್ದರಿಂದ, ಎಚ್.ಡಿ.ಕುಮಾರಸ್ವಾಮಿ ಅವರು ಡಿಡಿಪಿಐ ಅಮಾನತು ಮಾಡುವಂತೆ ಸೂಚನೆ ನೀಡಿದರು. ಬೀದರ್‌ನ ಡಿಐಇಟಿ ಪ್ರಾಂಶುಪಾಲರನ್ನಾಗಿ ವರ್ಗಾವಣೆ ಮಾಡಲಾಗಿದೆ.

English summary
The Department of Primary and Secondary Education has suspended the DDPI of Bengaluru North on the directions of Chief Minister H.D.Kumaraswamy. CM received parents complaint in Janata Darshan that, the DDPI not supporting the RTE quota students to get seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X