ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹ ಸಂತ್ರಸ್ತರಿಗೆ ದೇಣಿಗೆ ಕೊಡಲು ಮಾಂಸಾಹಾರ ತ್ಯಜಿಸಿದ ಕೈದಿಗಳು

|
Google Oneindia Kannada News

ಬೆಂಗಳೂರು, ಆಗಸ್ಟ್ 23 : ಬೆಂಗಳೂರಿನ ಪರಪ್ಪನ ಅಗ್ರಹಾರದ ಕೈದಿಗಳು ಮಾಂಸಾಹಾರ ಸೇವನೆ ತ್ಯಜಿಸಲಿದ್ದಾರೆ. ಆದರೆ, ಇದು ಪ್ರತಿಭಟನೆ ನಡೆಸಲು ಅಲ್ಲ, ಪ್ರವಾಹ ಸಂತ್ರಸ್ತರಿಗೆ ದೇಣಿಗೆ ನೀಡಲು.

ಹೌದು, ಪರಪ್ಪನ ಅಗ್ರಹಾರದ ಕೈದಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಲು ಬಯಸಿದ್ದಾರೆ. ಇದಕ್ಕಾಗಿ 1 ತಿಂಗಳ ಕಾಲ ಮಾಂಸಾಹಾರವನ್ನು ತ್ಯಜಿಸಲಿದ್ದಾರೆ. ಆ ಹಣವನ್ನು ಉಳಿಸಿ ದೇಣಿಗೆ ನೀಡಲಿದ್ದಾರೆ.

ಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮಾಂಸದೂಟದ ಭಾಗ್ಯವಿಲ್ಲಪರಪ್ಪನ ಅಗ್ರಹಾರದಲ್ಲಿ ಕೈದಿಗಳಿಗೆ ಮಾಂಸದೂಟದ ಭಾಗ್ಯವಿಲ್ಲ

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಈ ಕುರಿತು ಕೈದಿಗಳು ಪತ್ರ ಬರೆದಿದ್ದಾರೆ. ಕೈದಿಗಳ ಸಾಮಾಜಿಕ ಕಳಕಳಿಗೆ ಜೈಲಿನ ಅಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಂದು ತಿಂಗಳು ಮಾಂಸಾಹಾರ ತ್ಯಜಿಸಿದರೆ ಸುಮಾರು 10 ಲಕ್ಷ ರೂ. ಉಳಿತಾಯವಾಗಲಿದೆ.

ಬೇಕೆ ಬೇಕು ನಾನ್‌ವೆಜ್ ಬೇಕು: ಪರಪ್ಪನ ಅಗ್ರಹಾರ ಕೈದಿಗಳ ಪ್ರತಿಭಟನೆಬೇಕೆ ಬೇಕು ನಾನ್‌ವೆಜ್ ಬೇಕು: ಪರಪ್ಪನ ಅಗ್ರಹಾರ ಕೈದಿಗಳ ಪ್ರತಿಭಟನೆ

Parappana Agrahara Jail

ಪತ್ರದಲ್ಲಿ ಏನಿದೆ? : ರಾಜ್ಯದ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇವೆ. ನಾವು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪ್ರವಾಹ ಸಂತ್ರಸ್ತರಿಗಾಗಿ ದೇಣಿಗೆ ನೀಡುತ್ತೇವೆ. ನಾಲ್ಕು ವಾರಗಳ ಕಾಲ ನಮಗೆ ಮಾಂಸಾಹಾರ ನೀಡಬೇಡಿ. ಆ ಹಣವನ್ನು ಪರಿಹಾರ ನಿಧಿಗೆ ಕೊಡುತ್ತೇವೆ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.

ಪರಪ್ಪನ ಅಗ್ರಹಾರ ಸಮೀಪ ನೂತನ ಹೈಟೆಕ್ ಜೈಲು ನಿರ್ಮಾಣಪರಪ್ಪನ ಅಗ್ರಹಾರ ಸಮೀಪ ನೂತನ ಹೈಟೆಕ್ ಜೈಲು ನಿರ್ಮಾಣ

ಪರಪ್ಪನ ಅಗ್ರಹಾರದಲ್ಲಿ ವಾರಕ್ಕೊಮ್ಮೆ (ಶುಕ್ರವಾರ) ಕೈದಿಗಳಿಗೆ ಮಾಂಸಾಹಾರ ನೀಡಲಾಗುತ್ತದೆ. ಈಗ ಒಂದು ತಿಂಗಳು ಮಾಂಸಾಹಾರ ಸೇವೆನೆ ನಿಲ್ಲಿಸಿ ಸಂತ್ರಸ್ತರಿಗೆ ಆ ಹಣವನ್ನು ನೀಡಲಾಗುತ್ತದೆ.

ಇದೇ ವರ್ಷದ ಜನವರಿಯಲ್ಲಿ ಟೆಂಡರ್ ಸಮಸ್ಯೆಯಿಂದಾಗಿ ಮೂರು ವಾರಗಳ ಕಾಲ ಮಾಂಸಾಹಾರ ನೀಡುವುದನ್ನು ನಿಲ್ಲಿಸಲಾಗಿತ್ತು. ಆಗ ಕೈದಿಗಳು ಜೈಲಿನ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು.

English summary
Parappana Agrahara jail inmates to donate 10 lakh Rs for Chief Minister relief fund for flood relief work. Inmates will not eat non veg for one month to save money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X