ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಮಕೂರು ಕೈತಪ್ಪಿದ್ದಕ್ಕೆ ಪರಮೇಶ್ವರ್ ಗರಂ, ಸಭೆಯಿಂದ ದೂರ

|
Google Oneindia Kannada News

Recommended Video

ರಾಜ್ಯದಲ್ಲಿ ಸಿದ್ದರಾಮಯ್ಯ ಎಷ್ಟು ಪವರ್ ಫುಲ್ ಅನ್ನೋದು ಮತ್ತೆ ಸಾಬೀತಾಯ್ತು

ಬೆಂಗಳೂರು, ಮಾರ್ಚ್‌ 19: ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ಮಾಡುವ ಸಲುವಾಗಿ ಇಂದು ಮೈತ್ರಿ ಪಕ್ಷದ ಮುಖಂಡರು ಸಭೆ ನಡೆಸಿದರು, ಅದರ ನಂತರ ಜಂಟಿ ಸುದ್ದಿಗೋಷ್ಠಿ ಸಹ ನಡೆಸಿದರು ಆದರೆ ಇದಕ್ಕೆ ಪರಮೇಶ್ವರ್ ಗೈರಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಹಾಲಿ ಸಂಸದರಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕಾರಣ ಪರಮೇಶ್ವರ್ ಮೈತ್ರಿ ನಾಯಕರ ಮೇಲೆ ತೀವ್ರ ಅಸಮಾಧಾನಗೊಂಡಿದ್ದು, ಇಂದು ನಡೆದ ಮಹತ್ವದ ಸಭೆಗೆ ಗೈರಾಗುವ ಮೂಲಕ ಅದನ್ನು ಹೊರಹಾಕಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್ ನಾಯಕರ ಸಭೆಗೆ ಗೈರು, ಪರಮೇಶ್ವರ ಸ್ಪಷ್ಟನೆ ಕಾಂಗ್ರೆಸ್‌-ಜೆಡಿಎಸ್ ನಾಯಕರ ಸಭೆಗೆ ಗೈರು, ಪರಮೇಶ್ವರ ಸ್ಪಷ್ಟನೆ

ತುಮಕೂರನ್ನು ಕಾಂಗ್ರೆಸ್‌ಗೆ ವಾಪಸ್ ಬಿಟ್ಟುಕೊಡುವ ಬಗ್ಗೆ ಪರಮೇಶ್ವರ್ ಅವರು ದೇವೇಗೌಡ ಅವರಿಗೆ ಮನವಿ ಮಾಡಿದ್ದರು ಆದರೆ ಅವರು ಸಹ ಅದಕ್ಕೆ ಒಪ್ಪಿಗೆ ನೀಡಲಿಲ್ಲ, ಕಾಂಗ್ರೆಸ್ ಹೈಕಮಾಂಡ್‌ಗೂ ಇದರ ಬಗ್ಗೆ ದೂರು ನೀಡಲಾಗಿದೆ, ಅಲ್ಲಿಂದಲೂ ಸೂಕ್ತವಾದ ಪ್ರತಿಕ್ರಿಯೆ ಪರಮೇಶ್ವರ್‌ಗೆ ಸಿಕ್ಕಿಲ್ಲ ಹಾಗಾಗಿ ಪರಮೇಶ್ವರ್ ಅವರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.

Parameshwar upset with coalition leaders skip important meeting

ಪರಮೇಶ್ವರ್ ಅವರ ಅನುಪಸ್ಥಿತಿ ಜೆಡಿಎಸ್ ನಾಯಕರಿಗೆ ಎಚ್ಚರಿಕೆ ಗಂಟೆಯೂ ಆಗಲಿದೆ. ತುಮಕೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿ ಅಸಮಾಧಾನಗೊಂಡಿರುವ ಪರಮೇಶ್ವರ್ ಅವರು ಅವರ ವಿರುದ್ಧ ಕೆಲಸ ಮಾಡಿದರೆ ಜೆಡಿಎಸ್‌ಗೆ ಗೆಲುವು ಕಷ್ಟವಾಗಲಿದೆ.

ಮಾರ್ಚ್ 31ರಂದು ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ರಣಕಹಳೆ: ಜಂಟಿ ಘೋಷಣೆಮಾರ್ಚ್ 31ರಂದು ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ರಣಕಹಳೆ: ಜಂಟಿ ಘೋಷಣೆ

ಸಂಸದ ಮುದ್ದಹನುಮೇಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗದ ಪಕ್ಷದಲ್ಲಿ ಪಕ್ಷೇತರವಾಗಿ ಅವರು ಸ್ಪರ್ಧಿಸುವ ಸಾಧ್ಯತೆ ಇದೆ. ಇದು ಜೆಡಿಎಸ್‌ಗೆ ಬಹಳ ಆತಂಕ ತಂದೊಡ್ಡಲಿದೆ.

ಸಭೆಗೆ ಗೈರಾಗಿದ್ದಕ್ಕೆ ಪೂರ್ವ ನಿಯೋಜಿತ ಕಾರ್ಯಕ್ರಮ ಕಾರಣ ಎಂದು ಪರಮೇಶ್ವರ್ ಸ್ಪಷ್ಟೀಕರಣ ನೀಡಿದ್ದಾರಾದರೂ, ಅದು ಕೇವಲ ಕಣ್ಣೊರೆಸುವ ತಂತ್ರವೆಂದು ಹೇಳಲಾಗುತ್ತಿದೆ.

English summary
DCM G Parameshwar upset with coalition leaders for missing out Tumakuru, Today he skipped important meeting about lok sabha elections 2019, to express his unhappy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X