ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಲಿತ ಸಿಎಂ ಅಭ್ಯರ್ಥಿ ಘೋಷಿಸಿಲು ಮೋದಿಗೆ ಪರಂ ಸವಾಲು

By Nayana
|
Google Oneindia Kannada News

ಬೆಂಗಳೂರು, ಮೇ 4: ಖರ್ಗೆ ಮತ್ತು ದಲಿತರ ಬಗ್ಗೆ ಮಾತನಾಡುತ್ತಿರುವ ಮೋದಿಯವರು ತಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ದಲಿತರೊಬ್ಬರ ಹೆಸರು ಹೇಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಸವಾಲೆಸೆದಿದ್ದಾರೆ.

ಶುಕ್ರವಾರ ಕೆಪಿಸಿಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು, ಖರ್ಗೆ, ಮುನಿಯಪ್ಪ ಯಾರೂ ಬೇಕಾದರೂ ಮುಖ್ಯಮಂತ್ರಿ ಆಗಬಹುದು, ಅದನ್ನು ಸಿಎಲ್‌ಪಿ ತೀರ್ಮಾನಿಸುತ್ತದೆ. ಯಾರು ಬೇಕಾದರೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.

ಕಲಬುರಗಿಯಲ್ಲಿ ಖರ್ಗೆ ಮೇಲೆ ಬಿತ್ತು ಪ್ರಧಾನಿ ಮೋದಿ ಕಣ್ಣು! ಕಲಬುರಗಿಯಲ್ಲಿ ಖರ್ಗೆ ಮೇಲೆ ಬಿತ್ತು ಪ್ರಧಾನಿ ಮೋದಿ ಕಣ್ಣು!

ಖರ್ಗೆಯನ್ನು ಸಿಎಂ ಮಾಡಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿಕೆ ಕುರಿತು ಮಾತನಾಡಿದ ಅವರು ಅರವಿಂದ ಕಾರಜೋಳ ಅಥವಾ ನಿಮಗೆ ಅನಿಸಿದವರನ್ನು ಸಿಎಂ ಮಾಡಿ ಆದರೆ ಕಾಂಗ್ರೆಸ್ ದಲಿತರಿಗೆ ಸಾಕಷ್ಟು ಅವಕಾಶ ನೀಡಿದೆ. ಖರ್ಗೆಯವರನ್ನು ವಿಪಕ್ಷ ನಾಯಕನನ್ನಾಗಿ ಮಾಡಿದೆ.

Parameshwar challenges Modi to declare Dalit as CM

ಬೆಂಗಳೂರು ಬಗ್ಗೆ ನಕಾರಾತ್ಮಕವಾಗಿ ಹೇಳಿಕೆ ನೀಡಿ ಅವಮಾನ ಮಾಡಬೇಡಿ, ಮೋದಿಗೆ ಕಾಂಗ್ರೆಸ್ ಒತ್ತಾಯ ಮಾಡಿದೆ. ಸರ್ಕಾರ ಬಂದಕೂಡಲೇ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ನಾನು ವರದಿ ಅನುಷ್ಠಾನಕ್ಕೆ ವಿರೋಧಿಯಲ್ಲ ಎಂದು ಜಿ. ಪರಮೇಶ್ವರ್ ಹೇಳಿದರು.

English summary
KPCC President Dr G. parameshwar has challenged prime minister Narendra Modi to declare Dalit chief minister candidate if he had concern among Dalit rather false provocation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X