ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ಹುದ್ದೆಗೆ ಸಿದ್ದರಾಮಯ್ಯ ಸೂಚಿಸಿದ ಇಬ್ಬರು ನಾಯಕರು ಯಾರು?

|
Google Oneindia Kannada News

Recommended Video

ಸಿದ್ದರಾಮಯ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಜೆಪಿ | Oneindia Kannada

ಬೆಂಗಳೂರು, ಜೂನ್ 06: ಬಿಜೆಪಿ ದಲಿತ ವಿರೋಧಿ ಎಂದು ಅಬ್ಬರಿಸಿದ್ದ ಸಿದ್ದರಾಮಯ್ಯ ಅವರಿಗೆ ಅವರ ಮಾತನ್ನೇ ತಿರುಗಿಸಿರುವ ಬಿಜೆಪಿ, ಸಿದ್ದರಾಮಯ್ಯ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು.

ದಲಿತ ಪರ ಎನ್ನುವ ಕಾಂಗ್ರೆಸ್, ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಲಿ ಎಂದು ರಾಜ್ಯ ಬಿಜೆಪಿಯು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿತ್ತು.

ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ವಿರುದ್ಧ ಯಡಿಯೂರಪ್ಪ ತಂತ್ರ ಕುಮಾರಸ್ವಾಮಿ ಗ್ರಾಮ ವಾಸ್ತವ್ಯದ ವಿರುದ್ಧ ಯಡಿಯೂರಪ್ಪ ತಂತ್ರ

ಹಾಗಾಗಿ ತಮ್ಮ ನಿಲವಿನ ಸಾಬೀತುಪಡಿಸುವ ಒತ್ತಡದಿಂದಲೋ ಅಥವಾ ಅರ್ಹತೆಯ ಆಧಾರದಲ್ಲಿಯೋ ಸಿದ್ದರಾಮಯ್ಯ ಅವರು, ಪರಮೇಶ್ವರ್ ಮತ್ತು ಖರ್ಗೆ ಸಿಎಂ ಆಗಲಿ ನನಗೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.

ಯಾರು ಬೇಕಾದರೂ ಸಿಎಂ ಆಗಬಹುದು: ಸಿದ್ದರಾಮಯ್ಯ

ಯಾರು ಬೇಕಾದರೂ ಸಿಎಂ ಆಗಬಹುದು: ಸಿದ್ದರಾಮಯ್ಯ

ಪರಮೇಶ್ವರ್ ಅಥವಾ ಮಲ್ಲಿಕಾರ್ಜುನ ಖರ್ಗೆ ಯಾರು ಬೇಕಾದರೂ ಸಿಎಂ ಆಗಬಹುದು ಅದಕ್ಕೆ ಯಾರ ಅಭ್ಯಂತರವೂ ಇಲ್ಲ, ಆದರೆ ಅದನ್ನೆಲ್ಲಾ ಹೈಕಮಾಂಡ್ ನಿರ್ಧರಿಸುತ್ತದೆ. ನನ್ನನ್ನು ಸಿಎಂ ಆಗುವಂತೆ ಹೈಕಮಾಂಡ್ ಹೇಳಿತ್ತು ಅದರಂತೆ ಸಿಎಂ ಆದೆ ಎಂದು ಸಿದ್ದರಾಮಯ್ಯ ಹೈಕಮಾಂಡ್‌ ನತ್ತ ಬೊಟ್ಟು ಮಾಡಿದ್ದಾರೆ.

ಚುನಾವಣೆ ನಡೆದರೆ ಸಿದ್ದರಾಮಯ್ಯ ಅವರೇ ಸಿಎಂ ಅಭ್ಯರ್ಥಿ

ಚುನಾವಣೆ ನಡೆದರೆ ಸಿದ್ದರಾಮಯ್ಯ ಅವರೇ ಸಿಎಂ ಅಭ್ಯರ್ಥಿ

ಅರ್ಧ ಹಾದಿಯಲ್ಲಿ ವಿಧಾನಸಭೆ ಚುನಾವಣೆ ನಡೆದರೆ ಈಗಲೂ ಸಿದ್ದರಾಮಯ್ಯ ಅವರೇ ಸಿಎಂ ಅಭ್ಯರ್ಥಿ ಹಾಗಾಗಿ, ತಾವು ಸಿಎಂ ಆಗುವ ಅವಕಾಶವನ್ನು ಮತ್ತೊಬ್ಬ ಪ್ರಬಲ ನಾಯಕರ ಹೆಸರು ಹೇಳಿ ಅವಕಾಶವನ್ನು ಹಾಳು ಮಾಡಿಕೊಳ್ಳುವಷ್ಟು ಸಿದ್ದರಾಮಯ್ಯ ಮೂರ್ಖರಲ್ಲ, ಆದರೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿಯಷ್ಟೆ ಸಿದ್ದರಾಮಯ್ಯ ಅವರು ಪರಮೇಶ್ವರ್ ಹಾಗೂ ಖರ್ಗೆ ಅವರ ಹೆಸರು ಹೇಳಿದ್ದಾರೆ.

ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಗಟ್ಟಿ, ಬಿಜೆಪಿ ಲೆಕ್ಕಾಚಾರ ಬುಡಮೇಲು! ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಗಟ್ಟಿ, ಬಿಜೆಪಿ ಲೆಕ್ಕಾಚಾರ ಬುಡಮೇಲು!

ಖರ್ಗೆಗೆ ಸಿಎಂ ಕುರ್ಚಿವ ಅವಕಾಶ ಒದಗಿಬಂದಿಲ್ಲ

ಖರ್ಗೆಗೆ ಸಿಎಂ ಕುರ್ಚಿವ ಅವಕಾಶ ಒದಗಿಬಂದಿಲ್ಲ

ಖರ್ಗೆ ಅವರು ರಾಜ್ಯದ ಸಿಎಂ ಎಂದೋ ಆಗಬೇಕಿತ್ತು ಎಂದು ಕಾಂಗ್ರೆಸ್‌ನಲ್ಲಿ ಮಾತ್ರವಲ್ಲದೆ ಎದುರಾಳಿ ಪಕ್ಷದವರೂ ಹೇಳುತ್ತಾರೆ. ಆದರೆ ಅವರೊಂದಿಗೆ ರಾಜಕೀಯ ಪ್ರಾರಂಭಿಸಿದ ಧರ್ಮಸಿಂಗ್ ಸಿಎಂ ಆದರು ಆದರೆ ಖರ್ಗೆಗೆ ಆ ಅವಕಾಶ ಬರಲೇ ಇಲ್ಲ. ಆದರೆ ಈಗ ಮತ್ತೆ ಖರ್ಗೆ ಅವರನ್ನು ಸಿಎಂ ಮಾಡುವ ಮಾತು ಮತ್ತೆ ಮುನ್ನೆಲೆಗೆ ಬಂದಿದೆ.

ತಾಕತ್ತಿದ್ದರೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ: ಯಡಿಯೂರಪ್ಪ ಸವಾಲು ತಾಕತ್ತಿದ್ದರೆ ಪರಮೇಶ್ವರ್ ಅವರನ್ನು ಸಿಎಂ ಮಾಡಿ: ಯಡಿಯೂರಪ್ಪ ಸವಾಲು

ಪರಮೇಶ್ವರ್‌ಗೆ ಸಿಎಂ ಆಗುವ ಅವಕಾಶ ತಪ್ಪಿದೆ

ಪರಮೇಶ್ವರ್‌ಗೆ ಸಿಎಂ ಆಗುವ ಅವಕಾಶ ತಪ್ಪಿದೆ

ಪರಮೇಶ್ವರ್ ಅವರು ಸಿಎಂ ಆಗುವ ಅವಕಾಶವನ್ನು ಮೂರು ಬಾರಿ ತಪ್ಪಿಸಲಾಗಿದೆಯಂತೆ. ಹೀಗೆಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಪರಮೇಶ್ವರ್‌ಗೆ ಸಿಗುವ ಅವಕಾಶವೊಮ್ಮೆ ತಪ್ಪಿ ಧರಂ ಸಿಂಗ್ ಪಾಲಾಗಿತ್ತು. ಮತ್ತೊಮ್ಮೆ ಸಿದ್ದರಾಮಯ್ಯ ಅವರ ಪಾಲಾಗಿತ್ತು, ಈ ಬಾರಿ ಅದು ಕುಮಾರಸ್ವಾಮಿ ಪಾಲಾಗಿದೆ. ಪರಮೇಶ್ವರ್ ಅವರು ಕಾಂಗ್ರೆಸ್‌ನ ಅದೃಷ್ಟ ಹೀನ ರಾಜಕಾರಣಿಯಾಗಿ ಉಳಿದು ಬಿಟ್ಟಿದ್ದಾರೆ.

ದೇವೇಗೌಡ ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು? ದೇವೇಗೌಡ ಸೋಲಿನ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?

English summary
G Parameshwar or Mallikarjun Kharge both can become chief minister of Karnataka said Siddaramaiah. He said all the decision is left to congress high command.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X