ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಡೈಸ್ ಪೇಪರ್ಸ್: ಹರ್ಷ ಮೊಯ್ಲಿ ಕಂಪನಿಯಲ್ಲಿ ವಿದೇಶಿ ಹೂಡಿಕೆ

By Sachhidananda Acharya
|
Google Oneindia Kannada News

ಬೆಂಗಳೂರು, ನವೆಂಬರ್ 6: ಪನಾಮ ಪೇಪರ್ಸ್ ಮಾದರಿಯಲ್ಲಿ ಸದ್ದು ಮಾಡಿರುವ ಪ್ಯಾರಡೈಸ್ ಪೇಪರ್ಸ್ 714 ಭಾರತೀಯರು ಸೇರಿ ಹಲವು ದೇಶಗಳ ಉದ್ಯಮಿಗಳು, ರಾಜಕಾರಣಿಗಳ ಗೌಪ್ಯ ವ್ಯವಹಾರಗಳನ್ನು ಬಯಲು ಮಾಡಿದೆ.

ಈ ಪಟ್ಟಿಯಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿ ಹೆಸರಿದೆ.

Paradise Papers: Offshore firms invested in Harsh Moily's firm

ಹರ್ಷ ಮೊಯ್ಲಿಗೆ ಸೇರಿದ 'ಮೋಕ್ಷ್ ಯುಗ್ ಆಕ್ಸೆಸ್ ಇಂಡಿಯಾ ಕ್ಯಾಪಿಟಲ್'ನಲ್ಲಿ ಯುನಿಟಸ್ ಗ್ರೂಪ್ ಗೆ ಸೇರಿದ ಕಂಪೆನಿಗಳು ಹೂಡಿಕೆ ಮಾಡಿವೆ ಎಂದು 'ದಿ ಇಂಡಿಯನ್ ಎಕ್ಸ್ ಪ್ರೆಸ್' ವರದಿ ಮಾಡಿದೆ.

ಯುನಿಟಸ್ ಲ್ಯಾಬ್, ಯುನಿಟಸ್ ಈಕ್ವಿಟಿ ಫಂಡ್, ಯುನಿಟಸ್ ಕ್ಯಾಪಿಟಲ್, ಯುನಿಟಸ್ ಸೀಡ್ ಫಂಡ್, ಯುನಿಟಸ್ ಇಂಪ್ಯಾಕ್ಟ್ ನಂಥ ಬೆಂಗಳೂರು ಮತ್ತು ಸಿಯಾಟಲ್ ನಲ್ಲಿ ನೋಂದಣಿಯಾದ ಕಂಪೆನಿಗಳನ್ನು ಈ ಯೂನಿಟಸ್ ಗ್ರೂಪ್ ಹೊಂದಿದೆ. ಈ ಕಂಪನಿಗಳ ಮೂಲಕವೇ ಹರ್ಷ್ ಮೊಯ್ಲಿ ಕಂಪೆನಿಯಲ್ಲಿ ಹೂಡಿಕೆ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

2012ರ ಪ್ರಕಾರ ಹರ್ಷ ಮೊಯ್ಲಿ ಮೋಕ್ಷ್ ಯುಗ್ ಕಂಪನಿಯಲ್ಲಿ ಶೇಕಡಾ 37.24 ಶೇರುಗಳನ್ನು ಹೊಂದಿದ್ದರು. ಈ ಕಂಪನಿ ಲಾಭದಾಯಕ ಕಂಪೆನಿಯಾಗಿದ್ದು ಗ್ರಾಮೀಣ ರೈತರ ಆದಾಯ ವೃದ್ಧಿ ಮಾಡುವಲ್ಲಿ ಕೆಲಸ ಮಾಡುತ್ತದೆ ಎಂದು ಕಂಪೆನಿ ಹೇಳಿಕೊಳ್ಳುತ್ತದೆ.

'ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ' (ಐಸಿಐಜೆ) ಈ ಎಲ್ಲಾ ದಾಖಲೆಗಳನ್ನು ಹೊರಗೆಡಹಿದೆ. ಒಟ್ಟು ಸಿರಿವಂತರ 1.34 ಕೋಟಿ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಇತ್ತೀಚೆಗೆ ಇದೇ ಹರ್ಷ ಮೊಯ್ಲಿ ಕನ್ನಡ ಸ್ಟಾರ್ಟ್ ಅಪ್ ಆನ್ಲೈನ್ ಮಾಧ್ಯಮ ಸಂಸ್ಥೆಯೊಂದರಲ್ಲಿಯೂ ಹಣ ಹೂಡಿದ್ದನ್ನೂ ಸ್ಮರಿಸಬಹುದು.

English summary
According to The Indian Express report, Harsh Moily's firm received investments from subsidiaries of Unitus Group. Harsha Moily is the son of ormer Union minister M Veerappa Moily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X