ಲಾರಿ-ಸೈಕಲ್ ಅಪಘಾತ: ಪೇಪರ್ ಹಾಕುತ್ತಿದ್ದ ಬಾಲಕ ಸಾವು

Subscribe to Oneindia Kannada

ರಾಯಚೂರು, ಮಾರ್ಚ್ 20: ಮನೆ ಮನೆಗೆ ಪೇಪರ್ ಹಾಕಲು ತೆರಳುತ್ತಿದ್ದ ಬಾಲಕನಿಗೆ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ ಗೋಶಾಲಾ ರಸ್ತೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಗೋಶಾಲಾ ಸಮೀಪದ ಜಲಾಲನಗರ ನಿವಾಸಿ ಉಪೇಂದ್ರ (16 ವರ್ಷ) ಮನೆ ಮನೆಗೆ ಪೇಪರ್ ಹಾಕಲು ತನ್ನ ಸೈಕಲಿನಲ್ಲಿ ತೆರಳಿದ್ದ. ಈ ವೇಳೆ ಗೋಶಾಲಾ ರಸ್ತೆಯಲ್ಲಿ ಹಿಂದಿನಿಂದ ಬಂದ ಲಾರಿಯೊಂದು ಆತನ ಸೈಕಲಿಗೆ ಗುದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಉಪೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.[ರಾಯಚೂರಿನಲ್ಲಿ ನಾಲ್ವರ ಬಲಿತೆಗೆದುಕೊಂಡ ಡೀಸೆಲ್ ಜನರೇಟರ್]

ಬೆಳಗ್ಗಿನ ವೇಳೆ ಖಾಲಿ ರಸ್ತೆಯಾದ್ದರಿಂದ ಲಾರಿ ಚಾಲಕ ಮಿತಿಮೀರಿದ ವೇಗದಿಂದ ಬರುತ್ತಿದ್ದ ಎನ್ನಲಾಗಿದೆ.[ತ್ರಿಬಲ್ ರೈಡಿಂಗ್ ತಂದ ಆಪತ್ತು: ಸವಾರರಿಬ್ಬರು ಸಾವು, ಓರ್ವನ ಸ್ಥಿತಿ ಗಂಭೀರ]

ಇನ್ನು ಲಾರಿಯ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಲ್ಲಿನ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Paper boy dead in an accident between cycle and lorry here in Goshala road of Raichur. Upendra (16 year) was the boy who went early morning to delivery News papers to houses.
Please Wait while comments are loading...