ಮೂಡಿಗೆರೆಯಲ್ಲಿ ಹುಲಿ ಪ್ರತ್ಯಕ್ಷ, ಜನರಲ್ಲಿ ಆತಂಕ

Posted By:
Subscribe to Oneindia Kannada

ಚಿಕ್ಕಮಗಳೂರು, ಡಿಸೆಂಬರ್ 05 : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಉದುಸೆ ಗ್ರಾಮದಲ್ಲಿ ಹುಲಿಯೊಂದು ಪತ್ತೆಯಾಗಿದೆ. ಇದರಿಂದಾಗಿ ಗ್ರಾಮದ ಜನರು ಆತಂಕದಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿಕ್ಯಾಮರಾದಲ್ಲಿ ಹುಲಿಯ ಓಡಾಟ ಪತ್ತೆಯಾಗಿದೆ. ನಾಲ್ಕು ದಿನದಿಂದ ಹುಲಿ ಈ ಭಾಗದಲ್ಲಿ ಸಂಚಾರ ನಡೆಸುತ್ತಿದ್ದು, ಎರಡು ಹಸು ಮತ್ತು ಒಂದು ಕರುವನ್ನು ತಿಂದು ಹಾಕಿದೆ.

ಮಂಗಗಳಿಂದ ಬೆಳೆ ರಕ್ಷಿಸಲು ಹುಲಿ ಬೊಂಬೆ ಮೊರೆ ಹೋದ ರೈತರು

Panic spreads after tiger caught on cam in Mudigere

ಚಕ್ಕೊಡಿಗೆ, ಹೆಗ್ಗರವಳ್ಳಿ, ದಿಣ್ಣೆಕೆರೆ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹುಲಿ ಬಂದ ವಿಚಾರ ಕೇಳಿ ಆತಂಕಗೊಂಡಿದ್ದಾರೆ. ಮನೆಯಿಂದ ಹೊರಬರಲು ಮತ್ತು ಕಾಫಿ ಎಸ್ಟೇಟ್‌ಗಳಿಗೆ ಕೆಲಸಕ್ಕೆ ಹೋಗಲು ಭಯಪಡುವಂತಾಗಿದೆ.

ನಾಗರಹೊಳೆ ಅಭಯಾರಣ್ಯದಲ್ಲಿ ಶುರುವಾಗಿದೆ ಹುಲಿ ಗಣತಿ

ಉದುಸೆ ಗ್ರಾಮದ ರವಿ ಎಂಬುವವರ ತೋಟದಲ್ಲಿ ಹಸುವನ್ನು ಹುಲಿ ಕೊಂದು ಹಾಕಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಇಲ್ಲಿ ಸಿಸಿಟಿವಿ ಅಳವಡಿಸಿದ್ದರು. ಹುಲಿಯ ಓಡಾಟ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

Panic spreads after tiger caught on cam in Mudigere

ಈ ಗ್ರಾಮದಲ್ಲಿ 2 ರಿಂದ 3 ಹುಲಿಗಳು ಇವೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಹುಲಿಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Panic spreads after tiger caught on camera in Mudigere, Chikkamagaluru district. Tiger found near Uduse village.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ