{ "@context": "https://schema.org", "@type": "NewsArticle", "mainEntityOfPage":{ "@type":"WebPage", "@id":"http://kannada.oneindia.com/news/karnataka/panels-probe-to-power-purchase-nice-project-irregularities-087484.html" }, "headline": "ವಿದ್ಯುತ್ ಖರೀದಿ, ನೈಸ್ ಅಕ್ರಮ ತನಿಖೆಗೆ ಸಮಿತಿ ರಚನೆ ", "url":"http://kannada.oneindia.com/news/karnataka/panels-probe-to-power-purchase-nice-project-irregularities-087484.html", "image": { "@type": "ImageObject", "url": "http://kannada.oneindia.com/img/1200x60x675/2014/09/05-20-kagodutimmppa.jpg", "width": "1200", "height":"675" }, "thumbnailUrl":"http://kannada.oneindia.com/img/128x50/2014/09/05-20-kagodutimmppa.jpg", "datePublished": "2014-09-05 12:06:02", "dateModified": "2014-09-05T12:06:02+05:30", "author": { "@type": "Person", "url": "https://kannada.oneindia.com/authors/gururajks.html", "name": "Gururaj" }, "publisher": { "@type": "Organization", "name": "Oneindia Kannada", "url":"https://kannada.oneindia.com", "sameAs" : [ "https://www.facebook.com/oneindiakannada","https://twitter.com/oneindiakannada"], "logo": { "@type": "ImageObject", "url": "https://kannada.oneindia.com/images/amp-oneindia-logo.png", "width": "189", "height": "60" } }, "articleSection":"Karnataka", "description": "The Legislative Assembly on Thursday constituted two House Committees to look into alleged irregularities in the power sector and in the Bangalore-Mysore Infrastructure Corridor (BMIC) project.", "keywords": "Karnataka, Kagodu Thimmappa, Siddaramaiah, Power, NICE, House panels to probe power purchase, Nice project irregularities, ವಿದ್ಯುತ್ ಖರೀದಿ, ನೈಸ್ ಅಕ್ರಮದ ತನಿಖೆಗೆ ಸಮಿತಿ ರಚನೆ, ಕರ್ನಾಟಕ, ಕಾಗೋಡು ತಿಮ್ಮಪ್ಪ, ಸಿದ್ದರಾಮಯ್ಯ, ವಿದ್ಯುತ್, ನೈಸ್", "articleBody":"ಬೆಂಗಳೂರು, ಸೆ.5 : ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದ ವಿದ್ಯುತ್ ಖರೀದಿ ಹಗರಣ ಮತ್ತು ನೈಸ್ ಸಂಸ್ಥೆಯ ಅಕ್ರಮಗಳ ಕುರಿತು ತನಿಖೆ ನಡೆಸಲು ಸದಸ ಸಮಿತಿಯನ್ನು ರಚನೆ ಮಾಡಲಾಗಿದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸದಸನ ಸಮಿತಿ ರಚನೆ ಮಾಡಿ ಗುರುವಾರ ಆದೇಶ ಹೊರಡಿಸಿದ್ದಾರೆ.2004ರ ಅವಧಿಯಿಂದ 2014ರವರೆಗಿನ ವಿದ್ಯುತ್ ಖರೀದಿಯ ಸಂಪೂರ್ಣ ತನಿಖೆ ನಡೆಸಲು ಕಾಗೋಡು ತಿಮ್ಮಪ್ಪ ಅವರು ಆದೇಶ ಹೊರಡಿಸಿದ್ದಾರೆ. ಇಂಧನ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಶಾಸಕರಾದ ರಮೇಶ್ ಕುಮಾರ್, ಶಿವಾನಂದ ಪಾಟೀಲ್, ಬಸವರಾಜ್ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಒಟ್ಟು 11 ಜನ ಸದಸ್ಯರು ಸಮಿತಿಯಲ್ಲಿದ್ದು, 3 ತಿಂಗಳಿನಲ್ಲಿ ಸಮಿತಿ ವರದಿ ನೀಡಬೇಕಾಗಿದೆ.ನೈಸ್ ತನಿಖೆ ಸಮಿತಿ ಸದಸ್ಯರು : ನೈಸ್ ಯೋಜನೆಯಲ್ಲಿ ಆಗಿದೆ ಎಂಬ ಅವ್ಯವಹಾರದ ಕುರಿತು ತನಿಖೆ ನಡೆಸಲು ಸದನ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿಯೂ 11 ಸದಸ್ಯರಿದ್ದು, ಮೂರು ತಿಂಗಳಿನಲ್ಲಿ ಸಮಿತಿ ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕಾಗಿದೆ.ನೈಸ್ ಹಗರಣದ ಕುರಿತು ತನಿಖೆ ನಡೆಸುವ ಸಮಿತಿಗೆ ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರು ನೇತೃತ್ವ ವಹಿಸಿದ್ದಾರೆ. ಪ್ರಿಯಾಂಕ ಖರ್ಗೆ, ಬಸವರಾಜ್ ರಾಯರೆಡ್ಡಿ, ಎಸ್.ಟಿ ಸೋಮಶೇಖರ್, ಎಸ್.ಆರ್.ವಿಶ್ವನಾಥ್, ಬಿ.ಆರ್.ಪಾಟೀಲ್ ಸೇರಿದಂತೆ 11 ಜನ ಸದಸ್ಯರು ಸಮಿತಿಯಲ್ಲಿದ್ದಾರೆ. ನೈಸ್ ಅಕ್ರಮದ ತನಿಖೆ ಮಾಡಲಿದೆ ಸದನ ಸಮಿತಿನೈಸ್ ಸಂಸ್ಥೆಯ ಹಗರಣ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆದಿತ್ತು. ಬಹುಕೋಟಿ ಮೌಲ್ಯದ ನೈಸ್ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸುವುದಾಗಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ವಿಧಾನಸಭೆಯಲ್ಲಿ ಘೋಷಿಸಿದ್ದರು." }
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್ ಖರೀದಿ, ನೈಸ್ ಅಕ್ರಮ ತನಿಖೆಗೆ ಸಮಿತಿ ರಚನೆ

|
Google Oneindia Kannada News

ಬೆಂಗಳೂರು, ಸೆ.5 : ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದ ವಿದ್ಯುತ್ ಖರೀದಿ ಹಗರಣ ಮತ್ತು ನೈಸ್ ಸಂಸ್ಥೆಯ ಅಕ್ರಮಗಳ ಕುರಿತು ತನಿಖೆ ನಡೆಸಲು ಸದಸ ಸಮಿತಿಯನ್ನು ರಚನೆ ಮಾಡಲಾಗಿದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸದಸನ ಸಮಿತಿ ರಚನೆ ಮಾಡಿ ಗುರುವಾರ ಆದೇಶ ಹೊರಡಿಸಿದ್ದಾರೆ.

2004ರ ಅವಧಿಯಿಂದ 2014ರವರೆಗಿನ ವಿದ್ಯುತ್ ಖರೀದಿಯ ಸಂಪೂರ್ಣ ತನಿಖೆ ನಡೆಸಲು ಕಾಗೋಡು ತಿಮ್ಮಪ್ಪ ಅವರು ಆದೇಶ ಹೊರಡಿಸಿದ್ದಾರೆ. ಇಂಧನ ಸಚಿವ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಿದ್ದು, ಶಾಸಕರಾದ ರಮೇಶ್ ಕುಮಾರ್, ಶಿವಾನಂದ ಪಾಟೀಲ್, ಬಸವರಾಜ್ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಒಟ್ಟು 11 ಜನ ಸದಸ್ಯರು ಸಮಿತಿಯಲ್ಲಿದ್ದು, 3 ತಿಂಗಳಿನಲ್ಲಿ ಸಮಿತಿ ವರದಿ ನೀಡಬೇಕಾಗಿದೆ.

Kagodu Thimmappa

ನೈಸ್ ತನಿಖೆ ಸಮಿತಿ ಸದಸ್ಯರು : ನೈಸ್ ಯೋಜನೆಯಲ್ಲಿ ಆಗಿದೆ ಎಂಬ ಅವ್ಯವಹಾರದ ಕುರಿತು ತನಿಖೆ ನಡೆಸಲು ಸದನ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿಯೂ 11 ಸದಸ್ಯರಿದ್ದು, ಮೂರು ತಿಂಗಳಿನಲ್ಲಿ ಸಮಿತಿ ತನಿಖೆ ನಡೆಸಿ ವರದಿಯನ್ನು ಸಲ್ಲಿಸಬೇಕಾಗಿದೆ.

ನೈಸ್ ಹಗರಣದ ಕುರಿತು ತನಿಖೆ ನಡೆಸುವ ಸಮಿತಿಗೆ ಕಾನೂನು ಸಚಿವ ಟಿ.ಬಿ ಜಯಚಂದ್ರ ಅವರು ನೇತೃತ್ವ ವಹಿಸಿದ್ದಾರೆ. ಪ್ರಿಯಾಂಕ ಖರ್ಗೆ, ಬಸವರಾಜ್ ರಾಯರೆಡ್ಡಿ, ಎಸ್.ಟಿ ಸೋಮಶೇಖರ್, ಎಸ್.ಆರ್.ವಿಶ್ವನಾಥ್, ಬಿ.ಆರ್.ಪಾಟೀಲ್ ಸೇರಿದಂತೆ 11 ಜನ ಸದಸ್ಯರು ಸಮಿತಿಯಲ್ಲಿದ್ದಾರೆ. [ನೈಸ್ ಅಕ್ರಮದ ತನಿಖೆ ಮಾಡಲಿದೆ ಸದನ ಸಮಿತಿ]

ನೈಸ್ ಸಂಸ್ಥೆಯ ಹಗರಣ ಬಗ್ಗೆ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆದಿತ್ತು. ಬಹುಕೋಟಿ ಮೌಲ್ಯದ ನೈಸ್ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸುವುದಾಗಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ವಿಧಾನಸಭೆಯಲ್ಲಿ ಘೋಷಿಸಿದ್ದರು.

English summary
The Karnataka Legislative Assembly on Thursday constituted two House Committees to look into alleged irregularities in the power sector and in the Bangalore-Mysore Infrastructure Corridor (BMIC) project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X