ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ನಲ್ಲಿ ಮದ್ಯ ಮಾರಾಟ; ಮೊದಲ ಹೆಜ್ಜೆ ಇಟ್ಟ ಕರ್ನಾಟಕ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 01: ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದು, ಈ ಕುರಿತು ವರದಿ ನೀಡಲು ಸಮಿತಿ ರಚನೆ ಮಾಡಿದೆ.

Recommended Video

KR Marketನಲ್ಲಿ 5 ತಿಂಗಳಿನ ಬಳಿಕ ವ್ಯಾಪಾರ ಶುರು | Oneindia Kannada

ಮಂಗಳವಾರ ವಿಕಾಸಸೌಧದಲ್ಲಿ ಅಬಕಾರಿ ಸಚಿವ ಹೆಚ್. ನಾಗೇಶ್ ಈ ಕುರಿತು ಮಾತನಾಡಿದ್ದಾರೆ. "ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಇಲಾಖೆಯ ಹಿರಿಯ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ" ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಶುರುವಾಗಲಿವೆ 900 ಹೊಸ ಮದ್ಯ ಮಾರಾಟ ಮಳಿಗೆಗಳುರಾಜ್ಯದಲ್ಲಿ ಶುರುವಾಗಲಿವೆ 900 ಹೊಸ ಮದ್ಯ ಮಾರಾಟ ಮಳಿಗೆಗಳು

"ಬೇರೆ ರಾಜ್ಯದಲ್ಲಿ ಆನ್‌ಲೈನ್‌ನಲ್ಲಿ ಹೇಗೆ ಮದ್ಯಮಾರಾಟ ನಡೆಯುತ್ತಿದೆ ಎಂಬುದನ್ನು ಅಧ್ಯಯನ ನಡೆಸಿ ವರದಿ ನೀಡಲು ಸಮಿತಿ ರಚನೆ ಮಾಡಲಾಗಿದೆ. ಇಲಾಖೆ ಆಯುಕ್ತ ಲೋಕೇಶ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ" ಎಂದು ಸಚಿವರು ತಿಳಿಸಿದ್ದಾರೆ.

ಮದ್ಯ ಪ್ರಿಯರಿಗೆ ಖುಷಿ ಸುದ್ದಿ: ಇನ್ನು ಫ್ಲಿಪ್ ಕಾರ್ಟ್‌ನಲ್ಲಿಯೂ ಸಿಗುತ್ತೆ ಎಣ್ಣೆ!ಮದ್ಯ ಪ್ರಿಯರಿಗೆ ಖುಷಿ ಸುದ್ದಿ: ಇನ್ನು ಫ್ಲಿಪ್ ಕಾರ್ಟ್‌ನಲ್ಲಿಯೂ ಸಿಗುತ್ತೆ ಎಣ್ಣೆ!

"ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡಲು ಕೆಲವು ವಿರೋಧಗಳು ಸಹ ಇವೆ. ಮಾರಾಟ ಆರಂಭಿಸಿದರೆ ಸಹಾಯಕವೂ ಆಗಲಿದೆ. ಈ ಬಗ್ಗೆ ವರದಿ ಬಂದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದರು.

ಮೇ-ಜೂನ್ ಅವಧಿಯಲ್ಲಿ ಮದ್ಯ ಮಾರಾಟ ಶೇಕಡಾ 60ರಷ್ಟು ಇಳಿಕೆಮೇ-ಜೂನ್ ಅವಧಿಯಲ್ಲಿ ಮದ್ಯ ಮಾರಾಟ ಶೇಕಡಾ 60ರಷ್ಟು ಇಳಿಕೆ

ವರದಿ ಬಂದ ಮೇಲೆ ತೀರ್ಮಾನ

ವರದಿ ಬಂದ ಮೇಲೆ ತೀರ್ಮಾನ

"ಆನ್‌ಲೈನ್‌ನಲ್ಲಿ ಮದ್ಯ ಆರ್ಡರ್ ಮಾಡಿದರವ ವಯಸ್ಸು ಎಷ್ಟು?, ಯಾರು ಆರ್ಡರ್ ಮಾಡುತ್ತಿದ್ದಾರೆ? ಮುಂತಾದ ಮಾಹಿತಿಗಳನ್ನು ಸಂಗ್ರಹ ಮಾಡಬೇಕು. ಇದಕ್ಕಾಗಿ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ. ವರದಿ ಬಂದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ" ಎಂದು ಸಚಿವರು ಹೇಳಿದರು.

ಮುಖ್ಯಮಂತ್ರಿಗಳ ಜೊತೆ ಚರ್ಚೆ

ಮುಖ್ಯಮಂತ್ರಿಗಳ ಜೊತೆ ಚರ್ಚೆ

"ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ಕೆಲವರ ವಿರೋಧವೂ ಇದೆ. ಅಧಿಕಾರಿಗಳ ತಂಡ ವರದಿ ನೀಡಿದ ಬಳಿಕ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುತ್ತದೆ. ಅವರ ಜೊತೆ ಚರ್ಚೆ ನಡೆಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ" ಎಂದು ಹೆಚ್. ನಾಗೇಶ್ ಹೇಳಿದರು.

ಶೇ 50ರಷ್ಟು ಆದಾಯ ಹೆಚ್ಚಳ

ಶೇ 50ರಷ್ಟು ಆದಾಯ ಹೆಚ್ಚಳ

"ಮಂಗಳವಾರದಿಂದ ಬಾರ್ ಅಂಡ್ ರೆಸ್ಟೋರೆಂಟ್ ಓಪನ್ ಮಾಡಲು ಅವಕಾಶ ನೀಡಲಾಗಿದೆ. ನಿತ್ಯ 80 ಕೋಟಿ ಆದಾಯ ಬರುತ್ತಿದೆ. ಬಾರ್‌ಗಳು ಓಪನ್ ಆಗಿರುವುದರಿಂದ ಇಲಾಖೆಗೆ ಶೇ 50ರಷ್ಟು ಆದಾಯ ಹೆಚ್ಚಾಗುವ ನಿರೀಕ್ಷೆ ಇದೆ" ಎಂದು ಸಚಿವರು ತಿಳಿಸಿದರು.

ಹೊಸ ಲೈಸೆನ್ಸ್ ನೀಡುತ್ತಿಲ್ಲ

ಹೊಸ ಲೈಸೆನ್ಸ್ ನೀಡುತ್ತಿಲ್ಲ

"ಅಬಕಾರಿ ಇಲಾಖೆ 2019-20ರಲ್ಲಿ 20,900 ಕೋಟಿ ಆದಾಯಗಳಿಸುವ ಟಾರ್ಗೆಟ್ ಇತ್ತು. ಈ ವರ್ಷ 22,700 ಕೋಟಿ ಗುರಿ ಇದೆ. ಎಂಎಸ್‌ಐಎಲ್ ಮಳಿಗೆಗಳಿಗೆ ಮಾತ್ರ ಹೊಸದಾಗಿ ಲೈಸೆನ್ಸ್‌ ನೀಡಲಾಗುತ್ತಿದೆ. ಬೇರೆ ಯಾವುದೇ ಹೊಸ ಲೈಸೆನ್ಸ್ ನೀಡುತ್ತಿಲ್ಲ" ಎಂದು ಸಚಿವರು ಸ್ಪಷ್ಟಪಡಿಸಿದರು.

English summary
Karnataka Excise minister H. Nagesh said the department officials panel formed to submit report on sale of liquor in online.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X