ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ಎ ಮೀಸಲಾತಿ: ಸರ್ಕಾರಕ್ಕೆ ಗಡುವು ಕೊಟ್ಟ ಪಂಚಮಸಾಲಿ ಶ್ರೀ!

|
Google Oneindia Kannada News

ಬೆಂಗಳೂರು, ಫೆ. 21: ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಸೇರಿಸಲು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಸರ್ಕಾರಕ್ಕೆ ಗಡುವು ಕೊಟ್ಟಿದ್ದಾರೆ. ಕಳೆದ ಜನೆವರಿ 14 ರಂದು ಮಕರ ಸಂಕ್ರಮಣದಂದು ಕೂಡಲಸಂಗಮದಿಂದ ಬೆಂಗಳೂರಿಗೆ ಪಂಚಮಸಾಲಿ ಪಾದಯಾತ್ರೆ ಆರಂಭವಾಗಿತ್ತು. ಇಂದು ಅರಮನೆ ಮೈದಾನದಲ್ಲಿ ಪಂಚಮಸಾಲಿಗರ ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶ ಮುಗಿಯುವುದರೊಳಗೆ ರಾಜ್ಯ ಸರ್ಕಾರದಿಂದ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸುವ ಕುರಿತು ಅಧಿಕೃತ ಆದೇಶ ಮಾಡಬನೇಕು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ಗಡುವು ಹಾಕಿದ್ದಾರೆ.

Panchamasali seer given deadline to govt to add Panchamasali community to Category 2A

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಮಾತನಾಡಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು, ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಿ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕು. ನಮ್ಮ ಸಮಾವೇಶ ಮುಗಿಯುವುದರೊಳಗೆ ಸರ್ಕಾರದಿಂದ ಅಧಿಕೃತ ಆದೇಶವಾಗಬೇಕು. ಇಲ್ಲದಿದ್ದರೆ ಮಾರ್ಚ್‌ 4ರವರೆಗೆ ಧರಣಿ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Panchamasali seer given deadline to govt to add Panchamasali community to Category 2A

ಇದೇ ಸಂದರ್ಭದಲ್ಲಿ ಪಂಚಮಸಾಳಿ ಶ್ರೀಗಳು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಸಂಘಟನೆ ಘೋಷಣೆ ಮಾಡಿದರು. ಪಂಚಮಸಾಲಿ ಮಹಾಸಭಾದ ಮೊದಲ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೆಸರನ್ನು ಘೋಷಣೆ ಮಾಡಲಾಯಿತು. ಅವರಿಗೆ ಅಧಿಕಾರವನ್ನು ಸ್ವಾಮೀಜಿ ಹಸ್ತಾಂತರಿಸಿದರು.

English summary
Basava Jayamritunjaya Swamiji of the Kudalasangama Panchamasali Peetha has given a deadline to the government to add the Lingayat Panchamasaali community to the Category 2A reservation list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X