ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣ ಜನ್ಮಾಷ್ಟಮಿ ಮಕ್ಕಳಿಗಾಗಿ ಸ್ಪರ್ಧೆ: ಕಥೆ ಹೇಳಿ ಬಹುಮಾನ ಗೆಲ್ಲಿ!

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 03: 2018 ನೇ ವರ್ಷದ ಚಾಂದ್ರಮಾನ ಶ್ರೀಕೃಷ್ಣ ಜನ್ಮಾಷ್ಟಮಿಯು 02.09.2018 ರಂದು ಆಚರಿಸಲ್ಪಡುತ್ತದೆ. ಈ ಪ್ರಯುಕ್ತವಾಗಿ ಪರ್ಯಾಯ ಶ್ರೀಪಲಿಮಾರು ಮಠವು ಪುಟಾಣಿ ಮಕ್ಕಳಿಗಾಗಿ ಶ್ರೀಕೃಷ್ಣನ ಕಥೆಯನ್ನು ಹೇಳುವ ಆನ್ ಲೈನ್ ಸ್ಪರ್ಧೆಯೊಂದನ್ನು ಏರ್ಪಡಿಸುತ್ತಿದೆ.

ಇದೊಂದು ಸರಳವಾದ ಸ್ಪರ್ಧೆ : ಶ್ರೀಕೃಷ್ಣನ ಚರಿತ್ರೆಯಲ್ಲಿ ಯಾವುದೇ ಭಾಗವನ್ನು ಮಕ್ಕಳು ಕಲಿತು ಕಥೆಯನ್ನು ಹೇಳಬಹುದು. ಮಗುವು ಚೆನ್ನಾಗಿ ಕಥೆಯನ್ನು ಹೇಳುವಷ್ಟು ಸಮರ್ಥವಾದ ನಂತರ ಒಂದು ಒಳ್ಳೆಯ ಸ್ಥಳದಲ್ಲಿ ನಿಂತು ಕಥೆಯನ್ನು ಹೇಳಿಸಿ. ಅದನ್ನು ನಿಮ್ಮ ಸ್ಮಾರ್ಟ್ ಫೋನಿನಲ್ಲಿ ರೆಕಾರ್ಡ್ ಮಾಡಿಕೊಳ್ಳಿರಿ. ಅದನ್ನು ಯುಟ್ಯೂಬಿಗೆ ಅಪ್ ಲೋಡ್ ಮಾಡಿ. ಅದರ ಲಿಂಕ್ ಅನ್ನು ನಮಗೆ ಸಲ್ಲಿಸಿ.

ನಿಯಮಗಳು
1) 3 ರಿಂದ 10 ವರ್ಷದ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ವಯಸ್ಸನ್ನು ಪ್ರಾಮಾಣಿಕವಾಗಿ ನೀವು ಹೇಳಿದ್ದನ್ನೇ ನಾವು ವಿಶ್ವಾಸ ಮಾಡುತ್ತೇವೆ. ಇದಕ್ಕಾಗಿ ಪ್ರತ್ಯೇಕವಾಗಿ ವಯಸ್ಸಿನ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ.

Parimalu Matha Sri Krishna Story Telling Competition for Kids

3 ಮತ್ತು 4 ವರ್ಷದ ಮಕ್ಕಳು : ಗುಂಪು ಎ
5, 6 ಮತ್ತು 7 ವರ್ಷದ ಮಕ್ಕಳು : ಗುಂಪು ಬಿ
8,9 ಮತ್ತು 10 ವರ್ಷದ ಮಕ್ಕಳು : ಗುಂಪು ಸಿ.

ಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮಈ ಮುಸ್ಲಿಂ ಕುಟುಂಬದಲ್ಲಿ 30ನೇ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

2) ಕನ್ನಡ, ತುಳು, ತಮಿಳು, ಹಿಂದಿ, ಮರಾಠಿ, ಕೊಂಕಣಿ, ತೆಲುಗು, ಬಂಗಾಲಿ ಭಾಷೆಗಳಲ್ಲಿ ಮಕ್ಕಳು ಕಥೆಯನ್ನು ಹೇಳಬಹುದು.
3) ಪ್ರತಿಯೊಂದು ಭಾಷೆಯಲ್ಲಿಯೂ ಮೇಲ್ಕಾಣಿಸಿದ ಪ್ರಕಾರದ ಗುಂಪಿನಲ್ಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ.
4) ಒಂದೇ ಮನೆಯಲ್ಲಿರುವ ಎಲ್ಲ ಮಕ್ಕಳೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಯಾ ವಯಸ್ಸಿನ ವಿಭಾಗದಲ್ಲಿಯೇ ಕಥೆಯನ್ನು ಹೇಳಲು ಅವಕಾಶವು ಸಿಗುತ್ತದೆ.

5) ಕಥೆಯನ್ನು ಹೇಳಲು ಕಾಲಾವಧಿ 5 ನಿಮಿಷಗಳು ಮಾತ್ರ. 5 ನಿಮಿಷಗಳಿಗಿಂತ ಹೆಚ್ಚಾಗಿದ್ದಲ್ಲಿ ಸ್ಪರ್ಧೆಗೆ ಪರಿಗಣಿತವಾಗುವುದಿಲ್ಲ. ಕಥೆಯ ಮೊದಲು intro ಮತ್ತು title ಸೇರಿಸುವುದಿದ್ದಲ್ಲಿ ಅದು ಕೂಡ ಒಟ್ಟು ಕಥೆಯ ಅವಧಿಯಲ್ಲಿಯೆ ಬರುತ್ತದೆ.
5) ಒಂದೇ ಮಗುವು ಒಂದಕ್ಕಿಂತಲೂ ಹೆಚ್ಚಿನ ಭಾಷೆಯಲ್ಲಿ ಕಥೆಯನ್ನು ಹೇಳಬಹುದು.
6) ಕಥೆಯನ್ನು ಯುಟ್ಯೂಬಿನಲ್ಲಿ / ಫೇಸ್ ಬುಕ್ಕಿನಲ್ಲಿ ಅಪ್ ಲೋಡ್ ಮಾಡಿದ ನಂತರ #palimaru_krishna_katha ಎಂಬ ಹ್ಯಾಶ್ ಟ್ಯಾಗ್ ಸೇರಿಸಲು ಮರೆಯದಿರಿ. ಸೇರಿಸದಿದ್ದರೆ ಸ್ಪರ್ಧೆಗೆ ಅದು ಪರಿಗಣಿತವಾಗುವುದಿಲ್ಲ.
7) ವಿಡಿಯೋ ಅಪ್ ಲೋಡ್ ಮಾಡಲು ಕೊನೆಯ ದಿನಾಂಕ 25.08.2018 ರಾತ್ರಿ 8:00ರ ತನಕ

ಗ್ಯಾಲರಿ: ಜನ್ಮಾಷ್ಟಮಿ ಸಂಭ್ರಮ

8) ಸ್ಪರ್ಧೆಯ ಎಲ್ಲ ವಿಡಿಯೋಗಳನ್ನು ಸ್ವಯಂ ಸೇವಕರ ತಂಡವೊಂದು ಪರಿಶೀಲಿಸಿ ಗುಣಮಟ್ಟಕ್ಕೆ ತಕ್ಕಂತೆ ಅಂಕಗಳನ್ನು ಕೊಡುತ್ತದೆ. ಪ್ರಶಸ್ತಿಗೆ ಆಯ್ಕೆಯಾದ ವಿಡಿಯೊಗಳನ್ನು ಶ್ರೀಗಳವರ ಮುಂದೆ ಪ್ರಸ್ತುತ ಪಡಿಸಿ, ಅವರು ಆಯ್ಕೆ ಮಾಡುವ ಕಥೆಗೆ ಬಹುಮಾನವನ್ನು ಕೊಡಲಾಗುತ್ತದೆ.

ಬಹುಮಾನ
ಭಾಗವಹಿಸಿದ ಪ್ರತಿಯೊಬ್ಬರಿಗೂ ಒಂದು ಪ್ರಶಸ್ತಿಪತ್ರ (ಈ ಮೈಲ್ ಮೂಲಕ)
ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗೆ ಶ್ರೀಕೃಷ್ಣದೇವರಿಗೆ ಸಮರ್ಪಿಸಿದ ತುಳಸೀಮಣಿಮಾಲೆಯನ್ನು ಬಹುಮಾನವಾಗಿ ಕೊದಲಾಗುವುದು. ಪ್ರಶಸ್ತಿ ಪಡೆದದ್ದು ಹೆಣ್ಣುಮಗುವಾದಲ್ಲಿ ಶ್ರೀಕೃಷ್ಣದೇವರಿಗೆ ಸಮರ್ಪಿಸಿದ ಹವಳದ ಮಣಿಮಾಲೆಯನ್ನು ಪ್ರಶಸ್ತಿಯಾಗಿ ಕೊಡಲಾಗುವುದು.

English summary
Palimaru Matha Udupi is conducting annual Sri Krishna Online story telling competition for Kids across the Karnataka. Interested can send their entries latest by August 25, 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X