ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್ ಜಿಂದಾಬಾದ್: ಅಮೂಲ್ಯ ವಿಶ್ವಮಾನವ ತತ್ವ ಹೊಂದಿದ್ದಾಳೆ, ಡಿಕೆಶಿ

|
Google Oneindia Kannada News

ಬೆಂಗಳೂರು, ಫೆ 23: ನಗರದ ಫ್ರೀಡಂ ಪಾರ್ಕ್ ನಲ್ಲಿ ಸಿಎಎ ವಿರೋಧಿ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎನ್ನುವ ಘೋಷಣೆ ಕೂಗಿದ್ದ ಅಮೂಲ್ಯ 'ವಿಶ್ವಮಾನವ ತತ್ವ ಉಳ್ಳವಳು" ಎಂದು ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಹೇಳಿದರು.

Recommended Video

DK Shivakumar controversial Statement about Amulya Leona.

"ಆಕೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ತಪ್ಪೇ. ಆದರೆ, ಆಕೆ ಏನನ್ನೋ ಹೇಳೋಕೆ ಹೊರಟಿದ್ದಳು. ಆದರೆ ಅವಳನ್ನು ತಡೆಯಲಾಯಿತು" ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

'ಡಿಕೆಶಿ ಬಾಯಲ್ಲೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಬರಬಹುದು'; ಶೆಟ್ಟರ್ ಕಿಡಿ'ಡಿಕೆಶಿ ಬಾಯಲ್ಲೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಬರಬಹುದು'; ಶೆಟ್ಟರ್ ಕಿಡಿ

"ಅಮೂಲ್ಯ ಹಳೆಯ ವಿಡಿಯೋ ನೋಡುತ್ತಿದ್ದೆ. ಆಕಯದ್ದೇ ಆದ ತತ್ವವನ್ನು ಅವಳು ಪಾಲಿಸಿಕೊಂಡು ಬರುತ್ತಿದ್ದಾಳೆ. ಆದರೆ, ಅವಳ ವಿಚಾರದಲ್ಲಿ ಅನಾವಶ್ಯಕವಾಗಿ ರಾಜಕೀಯ ಮಾಡಲಾಗುತ್ತಿದೆ" ಎಂದು ಡಿಕೆಶಿ ಬೇಸರ ವ್ಯಕ್ತ ಪಡಿಸಿದ್ದಾರೆ.

Pakistam Jindabad Incident : Congress Leader DK Shivakumar Statement

"ನಮ್ಮ ದೇಶದ ವಿಚಾರದಲ್ಲಿ ಯಾರೂ ತಪ್ಪು ಮಾತನಾಡಬಾರದು. ಹಾಗೆಯೇ ಅಗೌರವದಿಂದ ವರ್ತಿಸಬಾರದು. ಪಾಕಿಸ್ತಾನ ಜಿಂದಾಬಾದ್ ಎಂದು ಆಕೆ ಹೇಳಿದ್ದು ಸರಿಯಲ್ಲ" ಎಂದು ಡಿಕೆಶಿ ಹೇಳಿದ್ದಾರೆ.

"ಪಾಕ್ ಜಿಂದಾಬಾದ್ ಎಂದು ಕೂಗುವವರ ಹಿಂದೆ ಇರುವವರು ಕಾಂಗ್ರೆಸ್‌ನವರು. ಕಾಂಗ್ರೆಸ್ ನಾಯಕರ ಬೆಂಬಲದಿಂದಾಗಿಯೇ ಹೆಚ್ಚಿನ ಈ ರೀತಿಯ ಚಟುವಟಿಕೆಗೆ ಇಂಬು ಕೊಟ್ಟಂತಾಗಿದೆ" ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದರು.

"ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಡಿಕೆಶಿ ಪ್ರೋತ್ಸಾಹ ಕೊಡುತ್ತಿರುವುದು ಖಂಡನಾರ್ಹ. ಇವತ್ತು ಹುಡುಗಿ ಬಾಯಲ್ಲಿ ಪಾಕಿಸ್ತಾನ ಬಂದಿದೆ, ಮುಂದೊಂದು ದಿನ ಡಿಕೆಶಿ ಬಾಯಲ್ಲಿ ಪಾಕಿಸ್ತಾನದ ಜಿಂದಾಬಾದ್ ಬಂದರೆ ಅಚ್ಚರಿ ಪಡಬೇಕಿಲ್ಲ' ಎಂದು ಡಿಕೆಶಿ ವಿರುದ್ದ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದರು.

English summary
Pakistam Jindabad Incident : Congress Leader DK Shivakumar Statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X