ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುದ್ದಿ ಮಾಧ್ಯಮಗಳು, ಪತ್ರಿಕೆಗಳಿಗೆ ಚುನಾವಣಾ ಆಯೋಗ ವಾರ್ನಿಂಗ್

By Manjunatha
|
Google Oneindia Kannada News

ಬೆಂಗಳೂರು, ಮಾರ್ಚ್ 27: ಚುನಾವಣಾ ನೀತಿ ಸಂಹಿತಿ ಇಂದಿನಿಂದಲೇ (ಮಾರ್ಚ್ 27) ಜಾರಿ ಆಗಿದ್ದು, ರಾಜಕೀಯ ಪಕ್ಷ ಮತ್ತು ರಾಜಕಾರಣಿಗಳ ಜಾಹೀರಾತು ಪ್ರಚಾರಕ್ಕೆ ಬ್ರೇಕ್ ಬಿದ್ದಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಚುನಾವಣಾ ನೀತಿ ಸಂಹಿತೆ ಪ್ರಕಾರ ಇಂದಿನಿಂದ ಸರ್ಕಾರಿ ಹಣದಿಂದ ಯಾವುದೇ ಜಾಹೀರಾತು ನೀಡುವಂತಿಲ್ಲ, ಒಂದು ವೇಳೆ ಚುನಾವಣಾ ಈಗಾಗಲೇ ಜಾಹಿರಾತು ನೀಡಿದ್ದಲ್ಲಿ 24 ಗಂಟೆ ಒಳಗೆ ಅದನ್ನು ಸ್ಥಗಿತಗೊಳಿಸಬೇಕು ರಾಜ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ ಕರ್ನಾಟಕ ವಿಧಾನಸಭೆ ಚುನಾವಣೆ: ಮೇ-12 ಮತದಾನ, ಮೇ-15 ಫಲಿತಾಂಶ

ಅಷ್ಟೆ ಅಲ್ಲ ಸರ್ಕಾರಿ ಜಾಹೀರಾತುಗಳ ದೊಡ್ಡ ದೊಡ್ಡ ಫ್ಲೆಕ್ಸ್ ಬ್ಯಾನರ್‌ಗಳನ್ನೂ ಸಹ ಹಾಕುವಂತಿಲ್ಲ ಹಾಗೇನಾದರೂ ಹಾಕಿದ್ದಲ್ಲಿ ಅದನ್ನು 24 ಗಂಟೆ ಒಳಗೆ ತೆಗೆಯಬೇಕು. ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು.

paid news about election party or candidate will be punished

ಪೇಯ್ಡ್ ಮೀಡಿಯಾ (ಕಾಸಿಗೆ ಸುದ್ದಿ) ಹಾಕುವ ಮಾಧ್ಯಮ ಮತ್ತು ಪತ್ರಿಕೆಗಳಿಗೂ ಚುನಾವಣಾ ಆಯೋಗ ವಾರ್ನ್ ನೀಡಿದೆ ವಾಣಿಜ್ಯ ಸ್ಥಳ (ಕಮರ್ಶಿಯಲ್ ಸ್ಪೇಸ್) ಹೊರತಾಗಿ ಸುದ್ದಿಯ ರೂಪದಲ್ಲಿ ಯಾವುದೇ ರಾಜಕೀಯ ಪಕ್ಷ ಅಥವಾ ಅಭ್ಯರ್ಥಿ ಪರ ಏಕಪಕ್ಷೀಯ ಸುದ್ದಿ ಅಥವಾ ಪ್ರಚಾರದ ಉದ್ದೇಶದಿಂದ ಬರಹಗಳನ್ನು ಬರೆದರೆ ಅಂತಹಾ ಪತ್ರಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳುಕರ್ನಾಟಕ ವಿಧಾನಸಭೆ ಚುನಾವಣೆಯ ಮುಖ್ಯ ದಿನಾಂಕಗಳು

ಸುದ್ದಿ ಮಾಧ್ಯಮಗಳೂ ಸಹ ಜಾಹೀರಾತು ಪ್ರಸಾರ ಮಾಡಬೇಕಾದರೆ ಕಡ್ಡಾಯವಾಗಿ 'ಜಾಹೀರಾತು' ಅಥವಾ 'ಪ್ರಾಯೋಜಿತ' ಎಂದು ನಮೂದು ಮಾಡಲೇ ಬೇಕು. ಯಾವುದೇ ಪಕ್ಷ ಅಥವಾ ಅಭ್ಯರ್ಥಿಯ ಪರ ಏಕಪಕ್ಷೀಯ ಸುದ್ದಿ, ಅಥವಾ ಆತನ ಪರ ಪ್ರಚಾರಾರ್ಥಕ ಸುದ್ದಿ ಪ್ರಕಟಿಸಿದರೆ ಅಂತಹಾ ಸುದ್ದಿ ಮಾಧ್ಯಮದ ವಿರುದ್ಧ ಆಯೋಗ ಕ್ರಮ ಕೈಗೊಳ್ಳಲಿದೆ.

ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು? ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?

ಸುದ್ದಿ ಮಾಧ್ಯಮಗಳು, ಪತ್ರಿಕೆಗಳ ಕಚೇರಿಗೆ ಈ ಕುರಿತು ಸೂಚನೆ ಕಳಿಸಲಾಗುವುದು ಹಾಗೂ ಪೇಯ್ಡ್ ನ್ಯೂಸ್ (ಕಾಸಿಗೆ ಸುದ್ದಿ)ಯ ವ್ಯಾಖ್ಯಾನ ಹೇಗೆ, ಆಯೋಗವು ಯಾವುದನ್ನು ಕಾಸಿಗೆ ಸುದ್ದಿ (ಪೇಯ್ಡ್ ನ್ಯೂಸ್) ಎಂದು ಪರಿಗಣಿಸುತ್ತದೆ ಎಂಬಿತರ ಮಾಹಿತಿ ಬಗ್ಗೆ ಚುನಾವಣಾ ಆಯೋಗವು ಒಂದು ದಿನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ ಎಂದು ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಹೇಳಿದರು.

ಈಗಾಗಲೇ ಕೆಲವು ರಾಜಕಾರಣಿಗಳು ಸುದ್ದಿ ವಾಹಿನಿಗಳಲ್ಲಿ ಬಂಡವಾಳ ಹೂಡಿದ್ದು ಅವರ ನಿಯಂತ್ರಣಕ್ಕೆ ಹೇಗೆ ಕ್ರಮ ಕೈಗೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಆಯೋಗಕ್ಕೆ ಪೇಯ್ಡ್ ನ್ಯೂಸ್‌ ಅನ್ನು ಗುರುತಿಸಲು ಮತ್ತು ಕ್ರಮ ಕೈಗೊಳ್ಳಲು ಕೆಲವು ನಿಯಮಗಳಿವೆ ಎಲ್ಲಾ ಮಾಧ್ಯಮಗಳು ಹಾಗೂ ಪತ್ರಿಕೆಗಳಿಗೆ ಇದೇ ನಿಯಮದ ಅಡಿ ಕ್ರಮ ಜರುಗಿಸುತ್ತೇವೆ ಎಂದರು.

English summary
'Paid News about any political party or election candidate will punished' said Karnataka state election commissioner Sanjeev Kumar. Form today no Advertisement from govt money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X