ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲಿ 91 ಸಾವಿರಕ್ಕೂ ಹೆಚ್ಚಿನ ಪಡಿತರ ಚೀಟಿ ರದ್ದು, ಕಾರಣವೇನು?

|
Google Oneindia Kannada News

ಬೆಂಗಳೂರು, ಜುಲೈ 02: ಆಹಾರ ಮತ್ತು ನಾಗರಿಕ ಸರಬರಾಜ ಇಲಾಖೆಯು 91 ಸಾವಿರಕ್ಕೂ ಹೆಚ್ಚಿನ ಪಡಿತರ ಚೀಟಿಗಳನ್ನು ರದ್ದುಪಡಿಸಿದೆ.

ಪಡಿತರ ಚೀಟಿ ಹೊಂದಿರುವವರ ಪೈಕಿ ಕನಿಷ್ಠ 91,189 ಜನರು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಸ್ತರಕ್ಕೆ ಸೇರಿದವರಲ್ಲ, ಆದರೆ ಸರ್ಕಾರದ ಸಬ್ಸಿಡಿಗಳನ್ನು ಬಳಸುತ್ತಿದ್ದಾರೆ. ಇಲಾಖೆ ಅಂತಹ ಪ್ರಕರಣಗಳನ್ನು ಗುರುತಿಸಿ ಅವರ ಪಡಿತರ ಚೀಟಿಗಳನ್ನು (ಆರ್‌ಸಿ) ರದ್ದುಗೊಳಿಸಿದೆ.

ಸಬ್ಸಿಡಿ ಪಡಿತರವನ್ನು ಪಡೆಯುತ್ತಿರುವ ಅಂತಹ ಅನೇಕ ವ್ಯಕ್ತಿಗಳು ಮೂರು ಹೆಕ್ಟೇರ್ ಭೂಮಿಯನ್ನು ಹೊಂದಿದ್ದಾರೆ ಅಥವಾ ವಾರ್ಷಿಕ ಆದಾಯವು 1.28 ಲಕ್ಷ ರೂ. ಇದೆ.

'ಪಡಿತರ ಚೀಟಿ ಇಲ್ಲದೆಯೇ ವಲಸೆ ಕಾರ್ಮಿಕರಿಗೆ ಆಹಾರ ದೊರೆಯುವುದು ಹೇಗೆ?' - ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ'ಪಡಿತರ ಚೀಟಿ ಇಲ್ಲದೆಯೇ ವಲಸೆ ಕಾರ್ಮಿಕರಿಗೆ ಆಹಾರ ದೊರೆಯುವುದು ಹೇಗೆ?' - ಕೇಂದ್ರಕ್ಕೆ ಸುಪ್ರೀಂ ಪ್ರಶ್ನೆ

ಇಂತಹ ಹೆಚ್ಚಿನ ಪ್ರಕರಣಗಳನ್ನು ಇಲಾಖೆ ಪರಿಶೀಲಿಸುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಅವರ ಆದಾಯ ತೆರಿಗೆ ವಿವರಗಳ ಆಧಾರದ ಮೇಲೆ ಒಟ್ಟು 91,189 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ.

50,060 ಜನರು ಆಂತ್ಯೋದಯ ಅನ್ನ ಯೋಜನೆ (ಎಎವೈ), ಪ್ರಾಥಮಿಕ ನಿವಾಸಿ (ಪಿಎಚ್‌ಹೆಚ್) ಕಾರ್ಡ್‌ಗಳನ್ನು ಹೊಂದಿದ್ದಾರೆ, 1.20 ಲಕ್ಷ ರೂ.ಗಿಂತ ಹೆಚ್ಚಿನ ಕೌಟುಂಬಿಕ ಆದಾಯ ಹೊಂದಿ 85,204 ಆದಾಯ ತೆರಿಗೆ ಪಾವತಿದಾರರು ಮತ್ತು 2,18,125 ಜನರು ಗ್ರಾಮೀಣ ಪ್ರದೇಶದಲ್ಲಿ ಮೂರು ಹೆಕ್ಟೇರ್‌ಗಿಂತ ಹೆಚ್ಚು ಭೂಮಿಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಕೇಂದ್ರವು ಈಗ ವಿವರವಾದ ವರದಿಯನ್ನು ಕೋರಿದ್ದು ಹಾಗೂಸಬ್ಸಿಡಿಯನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲರನ್ನು ಕಂಡುಹಿಡಿಯಲು ಅದೇ ಮಾದರಿಯನ್ನು ಬಳಸಿಕೊಳ್ಲಲು ಇತರ ರಾಜ್ಯಗಳನ್ನು ಕೇಳಿದೆ.
-ರಾಜ್ಯದಲ್ಲಿ ಒಟ್ಟು ಪಡಿತರ ಚೀಟಿ ಹೊಂದಿರುವವರ ಸಂಖ್ಯೆ 1,48,89,430
-ಸ್ವೀಕರಿಸಲಾದ ಹೊಸ ಪಡಿತರ ಚೀಟಿ ಅರ್ಜಿ3,37,920
-ಅನರ್ಹ ಪಡಿತರ ಚೀಟಿಗಳು 5,53,969
-ತಿರಸ್ಕರಿಸಲಾದ ಅರ್ಜಿ 57,423
-ಪರಿಶೀಲಿಸಲಾಗಿರುವ ಅರ್ಜಿ 1,86,092

 ಅನರ್ಹ ಫಲಾನುಭವಿಗಳು

ಅನರ್ಹ ಫಲಾನುಭವಿಗಳು

ಡೇಟಾ ಎಲಿಮಿನೇಷನ್ ಮಾನದಂಡಗಳು ಆಧಾರ್ ಕಾರ್ಡ್‌ಗಳ ಡೇಟಾವನ್ನು ಆಧರಿಸಿದೆ. ಅನರ್ಹ ಫಲಾನುಭವಿಗಳನ್ನು ಗುರುತಿಸಲು ಭೂಮಿ ಡೇಟಾ ಸಂಚಯದ ದಾಖಲೆಗಳನ್ನು ಸಹ ಪರಿಶೀಲಿಸಲಾಯಿತು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಡೇಟಾಬೇಸ್‌ನಲ್ಲಿ ಸೇರ್ಪಡೆ ದೋಷಗಳನ್ನು ತೆಗೆದುಹಾಕಲು ಆಹಾರ ಫಲಾನುಭವಿಗಳ ಡೇಟಾಬೇಸ್ ಅನ್ನು ಈಗ ಬೇರೆ ಬೇರೆ ಇಲಾಖೆಗಳ ಫಲಾನುಭವಿಗಳ ಪಟ್ಟಿಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಇಲಾಖೆ ಯಾವುದೇ ಪಡಿತರ ಚೀಟಿ ನೀಡಿಲ್ಲ, ಮತ್ತು ಸಾಂಕ್ರಾಮಿಕ ರೋಗದ ಒಂದು ವರ್ಷಕ್ಕೂ ಹೆಚ್ಚು ಕಾಲಅಕ್ರಮ ಫಲಾನುಭವಿಗಳನ್ನು ತೆಗೆದು ಹಾಕಲು ಬಳಸಿಕೊಳ್ಳಲಾಗಿದೆ. ಡೇಟಾವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಕುಮಾರ್ ಹೇಳಿದರು.

 ಎರಡು ಮಾದರಿಯ ಪಡಿತರ ಚೀಟಿ ರದ್ದು

ಎರಡು ಮಾದರಿಯ ಪಡಿತರ ಚೀಟಿ ರದ್ದು

ಆದಾಯ ತೆರಿಗೆ ಸಲ್ಲಿಕೆಯ ಆಧಾರದ ಮೇಲೆ ಒಟ್ಟು 79,069 ಎಎವೈ ಪಡಿತರ ಚೀಟಿಗಳು ಮತ್ತು ಪಿಎಚ್‌ಹೆಚ್ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್ ಅನಿಲ್ ಕುಮಾರ್ ಟಿಎನ್‌ಐಇಗೆ ತಿಳಿಸಿದ್ದಾರೆ. ಈ ಕಾರ್ಯಾಚರಣೆಯು ಇಲಾಖೆಗೆ ತಿಂಗಳಿಗೆ 5.01 ಕೋಟಿ ರೂ., ಮತ್ತು ವಾರ್ಷಿಕವಾಗಿ 60.20 ಕೋಟಿ ರೂ ಉಳಿತಾಯಕ್ಕೆ ಕಾರಣವಾಗಿದೆ.

 ಆದಾಯ ಪ್ರಮಾಣಪತ್ರ

ಆದಾಯ ಪ್ರಮಾಣಪತ್ರ

ಆದಾಯ-ತೆರಿಗೆ ಸಲ್ಲಿಸುವ ಡೇಟಾವನ್ನು ಸಿಂಕ್ರೊನೈಸ್ ಮಾಡುವ ಮೂಲಕ, ಈ 79,069 ಪಡಿತರ ಚೀಟಿ ಹೊಂದಿರುವವರಲ್ಲಿ 4,893 ಮಂದಿ ಎಎವೈ ಕಾರ್ಡ್ ಹೊಂದಿರುವವರು ಮತ್ತು 74,176 ಪಿಎಚ್‌ಹೆಚ್ ಕಾರ್ಡ್ ಹೊಂದಿರುವವರು ಎಂದು ಇಲಾಖೆ ಗುರುತಿಸಿದೆ. ಅಲ್ಲದೆ, ಕಂದಾಯ ಇಲಾಖೆ ಹಂಚಿಕೊಂಡ ಆದಾಯ ಪ್ರಮಾಣಪತ್ರದ ಆಧಾರದ ಮೇಲೆ, 12,120 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ, ಮತ್ತು ಸಾವಿನ ಮಾಹಿತಿಯ ನೋಂದಣಿಯ ಆಧಾರದ ಮೇಲೆ, ನಾವು 4,01,307 ಪಡಿತರ ಚೀಟಿ ಹೊಂದಿರುವವರನ್ನು ಗುರುತಿಸಲು ಸಾಧ್ಯವಾಯಿತು, "ಎಂದು ಅವರು ಹೇಳಿದರು.

 ಪಡಿತರ ಚೀಟಿ ಹೊಂದಿರುವ ಕೆಲವರು ಸಾವು

ಪಡಿತರ ಚೀಟಿ ಹೊಂದಿರುವ ಕೆಲವರು ಸಾವು

ಪಡಿತರ ಚೀಟಿ ಹೊಂದಿರುವ ಕೆಲವರು ಮೃತರಾಗಿದ್ದಾರೆ ಇತರರು ರಾಜಕೀಯ ಸಂಪರ್ಕಗಳನ್ನು ಹೊಂದಿದ್ದಾರೆ ಅಥವಾ ಉತ್ತಮ ವೃತ್ತಿಯನ್ನು ಹೊಂದಿದ್ದಾರೆ, ಆದರೆ ಇನ್ನೂ ಬಿಪಿಎಲ್ ಕಾರ್ಡುಗಳನ್ನು ಹೊಂದಿದ್ದಾರೆ ಮತ್ತು ಮಾಸಿಕ ಸಬ್ಸಿಡಿ ಪಡಿತರವನ್ನು ಪಡೆಯುತ್ತಾರೆ.

Recommended Video

ಮುಖ್ಯಮಂತ್ರಿ ವಿರುದ್ಧ ಕಿಡಿ ಕಾರಿದ DK Shivakumar | Oneindia Kannada

English summary
An assessment by the food and civil supplies department has thrown up some interesting data: at least 91,189 ration card holders did not belong to the BPL (below poverty line) strata, but were utilising government subsidies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X