• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರ್ನಾಟಕದಲ್ಲಿ ಕೊರೊನಾ ಲಸಿಕೆ ಪಡೆದ ಗರ್ಭಿಣಿಯರೆಷ್ಟು?

|
Google Oneindia Kannada News

ಬೆಂಗಳೂರು, ಆಗಸ್ಟ್ 02: ದೇಶದಲ್ಲಿ ಇದುವರೆಗೆ ಒಟ್ಟಾರೆ 2.27 ಲಕ್ಷ ಮಂದಿ ಗರ್ಭಿಣಿಯರು ಕೊರೊನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಕರ್ನಾಟಕದಲ್ಲಿ 16,673 ಮಂದಿ ಗರ್ಭಿಣಿಯರು ಕೊರೊನಾ ಲಸಿಕೆ ಪಡೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತ ಡಿ ರಣದೀಪ್ ಅವರು ನೀಡಿರುವ ಮಾಹಿತಿ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಎಂಟು ಲಸಿಕಾ ಕೇಂದ್ರಗಳಲ್ಲಿ 444 ಮಹಿಳೆಯರು ಲಸಿಕೆ ಪಡೆದಿದ್ದಾರೆ ಅದರಲ್ಲಿ 432 ಮಂದಿ ಗರ್ಭಿಣಿಯರು ಹಾಗೂ 12 ಮಂದಿ ಹಾಳುಣಿಸುವ ತಾಯಂದಿರುವ ಕೂಡ ಇದ್ದಾರೆ ಯಾರಿಗೂ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರಿಲ್ಲ ಎಂದಿದ್ದಾರೆ.

ಕೊರೊನಾ ಲಸಿಕೆ; ಗರ್ಭಿಣಿಯರ ಆರೋಗ್ಯದ ಕುರಿತು ಎಚ್ಚರಿಕೆ ಕೊಟ್ಟ ಕೇಂದ್ರಕೊರೊನಾ ಲಸಿಕೆ; ಗರ್ಭಿಣಿಯರ ಆರೋಗ್ಯದ ಕುರಿತು ಎಚ್ಚರಿಕೆ ಕೊಟ್ಟ ಕೇಂದ್ರ

ಮುಂದಿನ ದಿನಗಳಲ್ಲಿ 87,989 ಮಂದಿ ಗರ್ಭಿಣಿಯರು, 1,36,971 ಮಂದಿ ಹಾಲುಣಿಸುವ ತಾಯಂದಿರಿಗೆ ಕೊರೊನಾ ಲಸಿಕೆ ನೀಡಬೇಕಿದೆ. ವಾಣಿವಿಲಾಸ ಆಸ್ಪತ್ರೆಯ ವೈದ್ಯೆ ಗೀತಾ ಶಿವಮೂರ್ತಿ ಅವರು ನೀಡಿರುವ ಮಾಹಿತಿ ಪ್ರಕಾರ ವಾಣಿ ವಿಲಾಸ ಆಸ್ಪತ್ರೆಯಲ್ಲಿ 130 ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಓರ್ವ ಬಾಣಂತಿಗೆ ಲಸಿಕೆ ನೀಡಲಾಗಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 40,000 ಮಂದಿ ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಅವರಲ್ಲಿ 5,582 ಮಂದಿ ಗರ್ಭಿಣಿಯರು, 432 ಮಂದಿ ತಾಯಂದಿರಿಗೆ ಲಸಿಕೆ ನೀಡಲಾಗಿದೆ.

ಚಿಕ್ಕಮಗಳೂರಿನಲ್ಲಿ 6,253 ಗರ್ಭಿಣಿಯರು, 12,947 ತಾಯಂದಿರು ನೋಂದಣಿ ಮಾಡಿಸಿದ್ದಾರೆ ಅದರಲ್ಲಿ 876 ಗರ್ಭಿಣಿಯರು3363 ತಾಯಂದಿರಿಗೆ ಲಸಿಕೆ ನೀಡಲಾಗಿದೆ.

 ವೈದ್ಯರ ಸಲಹೆ ಏನು?

ವೈದ್ಯರ ಸಲಹೆ ಏನು?

ಇದೀಗ ಕೇಂದ್ರ ಸರ್ಕಾರ ಗರ್ಭಿಣಿಯರಿಗೆ ಲಸಿಕೆ ನೀಡಲು ಒಪ್ಪಿಗೆ ಸೂಚಿಸಿರುವ ಹಿನ್ನೆಲೆಯಲ್ಲಿ ಕೊರೊನಾ ಮೂರನೇ ಅಲೆ ಆರಂಭಕ್ಕೂ ಮುನ್ನ ಗರ್ಭಿಣಿ ಮಹಿಳೆಯರಿಗೆ ಲಸಿಕೆ ನೀಡಲು ಯಾವುದೇ ರೀತಿಯ ಸಮಸ್ಯೆ ಹಾಗೂ ತೊಡಕುಗಳು ಎದುರಾಗದಂತೆ ನೋಡಿಕೊಳ್ಳಲು ಪ್ರತ್ಯೇಕ ಲಸಿಕಾ ಅಭಿಯಾನವನ್ನು ಸರ್ಕಾರ ನಡೆಸಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

 ಲಸಿಕೆಯಿಂದ ಅಡ್ಡಪರಿಣಾಮವಿಲ್ಲ

ಲಸಿಕೆಯಿಂದ ಅಡ್ಡಪರಿಣಾಮವಿಲ್ಲ

ಮೊದಲ ತ್ರೈಮಾಸಿಕ ಬಳಿಕ ಗರ್ಭಿಣಿಯರು ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಮೊದಲ ತ್ರೈಮಾಸಿಕ ಪೂರ್ಣಗೊಂಡ ಬಳಿಕ ಯಾವಾಗ ಬೇಕಾದರೂ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಬಹುದಾಗಿದೆ. ಗರ್ಭಧರಿಸಿದ ಆರಂಭಿಕ ತಿಂಗಳುಗಳಲ್ಲಿ ಎದುರಾಗುವ ಅಡ್ಡಪರಿಣಾಮಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಹೀಗಾಗಿ ಮೊದಲ ತ್ರೈಮಾಸಿಕದ ಬಳಿಕ ಲಸಿಕೆ ಪಡೆದುಕೊಳ್ಳುವುದು ಉತ್ತಮ . ಯಾವುದೇ ಅಡ್ಡಪರಿಣಾಮವಿಲ್ಲ.

 ಸೋಂಕು ತಗುಲಿದರೂ ತೀವ್ರತೆ ಕಡಿಮೆ

ಸೋಂಕು ತಗುಲಿದರೂ ತೀವ್ರತೆ ಕಡಿಮೆ

ಗರ್ಭಿಣಿಯರು ಲಸಿಕೆ ಪಡೆದುಕೊಂಡಿದ್ದೇ ಆದರೆ, ಸೋಂಕಿನ ತಗುಲಿದರೂ ಅದರ ತೀವ್ರತೆ ಕಡಿಮೆಯಿರುತ್ತದೆ. ಅಲ್ಲದೆ, ಹೆರಿಗೆ ಮತ್ತು ಅಕಾಲಿಕ ಹೆರಿಗೆಗಳ ಅಪಾಯ ಕಡಿಮೆ ಇರುತ್ತದೆ. ಸೋಂಕು ಹರಡುವ ಪ್ರಮಾಣ ಕೂಡ ಕಡಿಮೆ ಇರುತ್ತದೆ'' ಎಂದು ಡಾ. ಭಾರತಿ ತಿಳಿಸಿದ್ದಾರೆ. ಆಸ್ಟರ್ ಸಿಎಂಐ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ಹಿರಿಯ ಸಲಹೆಗಾರ ಡಾ.ಭಾರತಿ ಕಾಮೋಜಿ ಮಾತನಾಡಿ, ಇತರಂತೆಯೇ ಎಲ್ಲಾ ಗರ್ಭಿಣಿ ಮಹಿಳೆಯರಿಗೂ ಕೋವಿಡ್ ಲಸಿಕೆಗಳನ್ನು ನೀಡಬೇಕು ಎಂದು ತಿಳಿಸಿದ್ದಾರೆ.

  ಬೊಮ್ಮಾಯಿ ಖುರ್ಚಿ ಜಾಸ್ತಿ ದಿನ ಉಳಿಯಲ್ವಂತೆ! | Oneindia Kannada
   ಗರ್ಭಿಣಿಯರು ಗಮನಿಸಬೇಕಾದ ಅಂಶ

  ಗರ್ಭಿಣಿಯರು ಗಮನಿಸಬೇಕಾದ ಅಂಶ

  -ಕೊರೊನಾ ಲಸಿಕೆ ತೆಗೆದುಕೊಂಡ ನಂತರ ಗರ್ಭಿಣಿಯರಿಗೆ ಒಂದರಿಂದ ಮೂರು ದಿನಗಳ ಕಾಲ ಅನಾರೋಗ್ಯ ಎನ್ನಿಸುವಂತೆ ಸಣ್ಣ ಪ್ರಮಾಣದ ಜ್ವರ, ನೋವು, ಸುಸ್ತು ಕಾಣಿಸಿಕೊಳ್ಳಬಹುದು. ಇಲ್ಲಿಯ ತನಕ ಕೊರೊನಾ ಲಸಿಕೆ ಮಗುವಿನ ಮೇಲೆ ದೀರ್ಘಕಾಲಿಕ ಪರಿಣಾಮ ಬೀರುತ್ತದೆ ಎನ್ನುವುದು ಯಾವುದೇ ಅಧ್ಯಯನದಲ್ಲಿ ಸಾಬೀತಾಗಿಲ್ಲ. ಅತೀ ಅಪರೂಪದ ಪ್ರಕರಣದಲ್ಲಿ (1.5ಲಕ್ಷದಲ್ಲಿ ಒಬ್ಬರಿಗೆ) ಲಸಿಕೆ ತೆಗೆದುಕೊಂಡ ನಂತರ ತುರ್ತು ವೈದ್ಯಕೀಯ ಸಹಾಯ ಬೇಕಾಗಬಹುದು. ಅದರಲ್ಲಿ ಉಸಿರಾಟದ ಸಮಸ್ಯೆ, ಎದೆನೋವು, ಕೈ ಕಾಲು ಸೆಳೆತ, ತಲೆನೋವು, ವಾಂತಿ, ಕಣ್ಣು ಮಂಜಾಗುವುದು ಸೇರಿದಂತೆ ಕೆಲ ಸಮಸ್ಯೆಗಳು ಬಾಧಿಸಬಹುದು.

  -ಕೊರೊನಾ ಲಸಿಕೆ ತೆಗೆದುಕೊಂಡ ನಂತರವೂ ಗರ್ಭಿಣಿಯರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಅವರಿಗೆ, ಅವರ ಕುಟುಂಬಸ್ಥರಿಗೆ ಅರಿವು ಮೂಡಿಸಬೇಕು. ಎರಡು ಮಾಸ್ಕ್ ಧರಿಸುವುದು, ಆಗಾಗ ಕೈಗಳನ್ನು ತೊಳೆಯುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಜನಸಂದಣಿ ಇದ್ದಲ್ಲಿ ತೆರಳದೇ ಇರುವುದು ಅತ್ಯವಶ್ಯಕ.

  -ಇಲ್ಲಿಯ ತನಕ ಕೊರೊನಾ ಸೋಂಕಿತರಿಗೆ ಜನಿಸಿದ ಶೇ.96ಕ್ಕಿಂತ ಹೆಚ್ಚು ನವಜಾತ ಶಿಶುಗಳು ಆರೋಗ್ಯಕರವಾಗಿಯೇ ಜನಿಸಿವೆ. ಆದರೆ, ಕೆಲವೇ ಕೆಲವು ಪ್ರಕರಣಗಳಲ್ಲಿ ಮಾತ್ರ ಅವಧಿಗೂ ಮುನ್ನವೇ ಮಗು ಜನಿಸುವ ಸಾಧ್ಯತೆ, ಮಗು ತೂಕ ಕಳೆದುಕೊಳ್ಳುವ ಸಾಧ್ಯತೆ ಅಥವಾ ಅಪರೂಪದ ಪ್ರಕರಣಗಳಲ್ಲಿ ಹುಟ್ಟುವ ಮುನ್ನವೇ ಮಗು ಸಾವಿಗೀಡಾಗಿರುವುದು ಕೂಡಾ ಕಂಡುಬಂದಿದೆ

  -ಗರ್ಭಧಾರಣೆ ಕೊವಿಡ್​ 19 ಸೋಂಕಿನ ಅಪಾಯವನ್ನು ಹೆಚ್ಚಿಸುವುದಿಲ್ಲ. ಹೆಚ್ಚಿನ ಗರ್ಭಿಣಿಯರು ಯಾವುದೇ ಸೋಂಕು ಲಕ್ಷಣಗಳನ್ನೇ ಒಳಗೊಂಡಿರುವುದಿಲ್ಲ ಅಥವಾ ಸಣ್ಣ ಪ್ರಮಾಣದ ಗುಣಲಕ್ಷಣಗಳನ್ನು ತೋರಿಸಬಹುದು. ಆದರೆ, ಅವರ ಆರೋಗ್ಯ ತಕ್ಷಣ ಹದಗೆಟ್ಟು, ಗರ್ಭದಲ್ಲಿರುವ ಭ್ರೂಣದ ಮೇಲೂ ಅದು ಅಡ್ಡಪರಿಣಾಮ ಬೀರಬಹುದು. ಹೀಗಾಗಿ ಕೊರೊನಾ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ. ಇದಕ್ಕಾಗಿ ಗರ್ಭಿಣಿಯರೆಲ್ಲರೂ ಕೊರೊನಾ ಲಸಿಕೆ ತೆಗೆದುಕೊಳ್ಳಬೇಕು.

  -ಇದುವರೆಗೆ ಶೇ.80ಕ್ಕಿಂತ ಹೆಚ್ಚು ಪ್ರಮಾಣದ ಕೊರೊನಾ ಸೋಂಕಿತ ಗರ್ಭಿಣಿಯರು ಯಾವುದೇ ತೀವ್ರ ತೆರನಾದ ಸಮಸ್ಯೆ ಇಲ್ಲದೇ, ಆಸ್ಪತ್ರೆಗೆ ದಾಖಲಾಗದೆ ಚೇತರಿಸಿಕೊಂಡಿದ್ದಾರೆ. ಆದರೆ, ಕೆಲವು ಪ್ರಕರಣದಲ್ಲಿ ಸೋಂಕು ತೀವ್ರವಾಗಿ ಬಾಧಿಸಿದ್ದೂ ಇದೆ. ಒಂದುವೇಳೆ ಸೋಂಕು ಉಲ್ಬಣಿಸಿದರೆ ಗರ್ಭಿಣಿಯರಿಗೂ ಆಸ್ಪತ್ರೆಗೆ ದಾಖಲಾಗುವ ಅನಿವಾರ್ಯತೆ ಉಂಟಾಗುತ್ತದೆ. ಅಲ್ಲದೇ, ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹ, 35 ವರ್ಷ ಮೇಲ್ಪಟ್ಟವರು ಕೆಲ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದನ್ನು ತಡೆಯಲು ಕೊರೊನಾ ಲಸಿಕೆ ಅತ್ಯವಶ್ಯಕ.

  -35 ವರ್ಷ ಮೇಲ್ಪಟ್ಟ ಗರ್ಭಿಣಿಯರು ಗರ್ಭ ಧರಿಸುವ ಮುನ್ನವೇ ಮಧುಮೇಹ, ಅಧಿಕ ರಕ್ತದೊತ್ತಡ, ರಕ್ತ ಹೆಪ್ಪುಗಟ್ಟುವ ಸಮಸ್ಯೆ ಇತ್ಯಾದಿಯಿಂದ ಬಳಲುತ್ತಿದ್ದರೆ ಅಂತಹವರಿಗೆ ಕೊರೊನಾ ಹೆಚ್ಚು ಬಾಧಿಸುವ ಸಾಧ್ಯತೆ ಇರುತ್ತದೆ.

  -ಒಂದುವೇಳೆ ಗರ್ಭ ಧರಿಸಿದ ಸಂದರ್ಭದಲ್ಲೇ ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದ್ದಲ್ಲಿ ಅವರಿಗೆ ಹೆರಿಗೆಯಾದ ಕೂಡಲೇ ಆದಷ್ಟು ಬೇಗ ಕೊರೊನಾ ಲಸಿಕೆ ನೀಡುವುದಕ್ಕೆ ಕ್ರಮ ಕೈಗೊಳ್ಳಬೇಕು

  English summary
  More than 2.27 lakh pregnant women across India have received the first dose of the Covid-19 vaccine under the ongoing national Covid vaccination drive.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X