ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಡಿಪುರ ಅರಣ್ಯದಲ್ಲಿ 1,600ಕ್ಕೂ ಹೆಚ್ಚು ಆನೆಗಳು: ಆಂತರಿಕ ಸಮೀಕ್ಷೆ ಮಾಹಿತಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 19: ಬಂಡಿಪುರ ಹುಲಿ ಸಂರಕ್ಷಿತಾರಣ್ಯದಲ್ಲಿ (ಬಿಟಿಆರ್) 1,600ಕ್ಕೂ ಅಧಿಕ ಆನೆಗಳು ಇವೆ ಎಂದು ವಲಯದ ಅರಣ್ಯಾಧಿಕಾರಿಗಳು ನಡೆಸಿದ ಆಂತರಿಕ ಸಮೀಕ್ಷೆ ತಿಳಿಸಿದೆ.

ಏಪ್ರಿಲ್‌ನಲ್ಲಿ ಲಾಕ್‌ಡೌನ್ ಅವಧಿಯಲ್ಲಿ ಪ್ರಾರಂಭಿಸಿದ ಸಮೀಕ್ಷೆಯನ್ನು ಅನ್‌ಲಾಕ್ ಅವಧಿಯವರೆಗೆ ನಾಲ್ಕು ತಿಂಗಳು ನಡೆಸಲಾಗಿದೆ. ಅಖಿಲ ಭಾರತ ಆನೆ ಗಣತಿಯಲ್ಲಿ ತೆಗೆದುಕೊಳ್ಳಲಾಗುವ ಎಲ್ಲ ಶಿಷ್ಟಾಚಾರಗಳನ್ನು ಅಧಿಕಾರಿಗಳು ಅನುಸರಿಸಿದ್ದರು.

ಬಂಡಿಪುರ: ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ!ಬಂಡಿಪುರ: ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ!

ಒಂದು ನಿರ್ದಿಷ್ಟ ಅರಣ್ಯ ಪ್ರದೇಶದಲ್ಲಿ ಈ ರೀತಿ ತಂಡವೊಂದು ಆಂತರಿಕ ಸಮೀಕ್ಷೆ ನಡೆಸಿರುವುದು ಇದೇ ಮೊದಲು. ಕಳೆದ ಬಾರಿ ದೇಶದಾದ್ಯಂತ ನಡೆದ ಆನೆ ಗಣತಿಯಲ್ಲಿ ಕರ್ನಾಟಕದಲ್ಲಿ 8,500 ಆನೆಗಳಿವೆ ಎಂದು ಹೇಳಲಾಗಿದೆ.

Over 1,600 Elephants In Bandipur Tiger Reserve, Finds Internal Survey

'ನಾಲ್ಕು ತಿಂಗಳವರೆಗೂ ಪ್ರತಿ ತಿಂಗಳಲ್ಲಿ ಎರಡು ದಿನದಂತೆ ಸಮೀಕ್ಷೆಯನ್ನು ನಡೆಸಲಾಗಿದೆ. ಆನೆಗಳ ಚಟುವಟಿಕೆಗಳನ್ನು, ಅರಣ್ಯ ಪ್ರದೇಶವನ್ನು ಮತ್ತು ಅವುಗಳ ಆವಾಸವನ್ನು ಹೇಗೆ ಸುಧಾರಿಸಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ಸಮೀಕ್ಷೆ ಮಾಡಲಾಗಿದೆ' ಎಂದು ಬಿಆರ್‌ಟಿ ನಿರ್ದೇಶಕ ಟಿ. ಬಾಲಚಂದ್ರ ತಿಳಿಸಿದ್ದಾಗಿ 'ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ.

ಈ ದತ್ತಾಂಶಗಳನ್ನು ವಿಶ್ಲೇಷಣೆ ಮಾಡಲು ನಿವೃತ್ತ ಜೀವಶಾಸ್ತ್ರಜ್ಞರ ಸಹಾಯ ಪಡೆದುಕೊಳ್ಳಲಾಗುತ್ತಿದೆ. ಮೈಸೂರು ಅರಣ್ಯ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಕೂಡ ಈ ಚಟುವಟಿಕೆಯಲ್ಲಿ ಭಾಗಿಯಾಗಿದ್ದರು.

ಬಂಡೀಪುರದಲ್ಲಿ ಮೈಮೇಲೆ ಗಂಟುಗಳುಳ್ಳ ಹೆಣ್ಣಾನೆ ಪತ್ತೆಬಂಡೀಪುರದಲ್ಲಿ ಮೈಮೇಲೆ ಗಂಟುಗಳುಳ್ಳ ಹೆಣ್ಣಾನೆ ಪತ್ತೆ

'ನಿರ್ದೇಶಕನಾಗಿ ಉತ್ತಮ ನಿರ್ವಹಣೆಗಾಗಿ ಈ ವಿಭಾಗವನ್ನು ಚೆನ್ನಾಗಿ ಅರಿತುಕೊಳ್ಳಲು ಬಯಸಿದ್ದೇನೆ. ಈ ಭಾಗದಲ್ಲಿರುವ ಆನೆಗಳ ಸಂಖ್ಯೆ ಮತ್ತು ಜಮಾವಣೆಯ ಸ್ಥಳಗಳನ್ನು ಅರಣ್ಯ ಸಿಬ್ಬಂದಿ ತಿಳಿದುಕೊಂಡರೆ ಅವುಗಳನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಣೆ ಮಾಡಬಹುದು. ಕಾಂಕ್ರೀಟ್ ಮೂಲಸೌಕರ್ಯಕ್ಕಿಂತಲೂ ಸಸ್ಯ ಮೂಲಸೌಕರ್ಯವನ್ನು ಬಲಪಡಿಸಬೇಕು ಎನ್ನುವುದನ್ನು ನಾವು ಕಂಡುಕೊಂಡಿದ್ದೇವೆ.

Recommended Video

ಏನು ಇಲ್ಲ ನಮ್ ಕೈಯಲ್ಲಿ ,ಎಲ್ಲಾ ದೊಡ್ಡೋರು decide ಮಾಡ್ಬೇಕು | Oneindia Kannada

ಪ್ರಾಥಮಿಕ ಮಾಹಿತಿಯ ಪ್ರಕಾರ ಈ ಸಂರಕ್ಷಿತಾರಣ್ಯದಲ್ಲಿ 1600ಕ್ಕೂ ಹೆಚ್ಚು ಆನೆಗಳಿವೆ. ಇನ್ನು 20 ದಿನಗಳಲ್ಲಿ ಅಂತಿಮ ವರದಿ ಸಿದ್ಧವಾಗಲಿದೆ' ಎಂದು ನಿರ್ದೇಶಕರು ತಿಳಿಸಿದ್ದಾರೆ.

English summary
Over 1,600 elephants in Bandipur Tiger Reserve (BRT), finds internal survey which was done during lockdown period.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X