ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸಭೆ ಅಧಿವೇಶನ; ಸರ್ಕಾರಕ್ಕೆ ಸಂಕಷ್ಟ ತರುವ ವಿಷಯಗಳು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 08 : ಕರ್ನಾಟಕದ ಬಿಜೆಪಿ ಸರ್ಕಾರವನ್ನು ಅಧಿವೇಶನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಿದ್ಧವಾಗಿವೆ. ಅಕ್ಟೋಬರ್ 10 ರಿಂದ 13ರ ತನಕ ಬೆಂಗಳೂರಿನಲ್ಲಿ ಈ ಬಾರಿಯ ಅಧಿವೇಶನ ನಡೆಯಲಿದೆ.

ವಿಧಾನಮಂಡಲ ಅಧಿವೇಶನದ ಹಿನ್ನಲೆಯಲ್ಲಿ ಬುಧವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಕರೆದಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕನ ಆಯ್ಕೆಯೂ ಬುಧವಾರ ನಡೆಯಲಿದೆ.

ಲಕ್ಷ್ಮಣ ಸವದಿಗೆ ಪರಿಹಾರ ಕೊಡಲು ಭಿಕ್ಷೆ ಎತ್ತಿದ ರೈತರು!ಲಕ್ಷ್ಮಣ ಸವದಿಗೆ ಪರಿಹಾರ ಕೊಡಲು ಭಿಕ್ಷೆ ಎತ್ತಿದ ರೈತರು!

ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧವಾಗಿವೆ. ಬೆಳಗಾವಿ ಸುವರ್ಣಸೌಧದಲ್ಲಿ ನಡೆಸಬೇಕಿದ್ದ ಅಧಿವೇಶನವನ್ನು ಪ್ರವಾಹದ ನೆಪವೊಡ್ಡಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ.

Exclusive: 'ಪ್ರಧಾನಿ ನಿಧಿ'ಯೇ ಖೋತಾ ಆಗಿರುವಾಗ ಪ್ರವಾಹ ಪರಿಹಾರ ನೀಡೋಕೆ ಹೇಗೆ ಸಾಧ್ಯ?Exclusive: 'ಪ್ರಧಾನಿ ನಿಧಿ'ಯೇ ಖೋತಾ ಆಗಿರುವಾಗ ಪ್ರವಾಹ ಪರಿಹಾರ ನೀಡೋಕೆ ಹೇಗೆ ಸಾಧ್ಯ?

ವಿಧಾನಸಭೆ ಪ್ರತಿಪಕ್ಷ ನಾಯಕ ಯಾರು? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್. ಡಿ. ಕುಮಾರಸ್ವಾಮಿ ಇರಲಿದ್ದು, ಚರ್ಚೆ ಕಾವೇರುವ ನಿರೀಕ್ಷೆ ಇದೆ. ಪ್ರತಿಪಕ್ಷದಲ್ಲಿ ಅನೇಕ ಹಿರಿಯ ನಾಯಕರಿದ್ದು, ಸದನ ನಡೆಸುವುದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೂ ಸವಾಲಾಗಿದೆ.

ಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರಕರ್ನಾಟಕ ಪ್ರವಾಹ ನಷ್ಟದ ಅಂದಾಜು ವರದಿ ತಿರಸ್ಕರಿಸಿದ ಕೇಂದ್ರ

ಯಾವ-ಯಾವ ವಿಚಾರಗಳು

ಯಾವ-ಯಾವ ವಿಚಾರಗಳು

ಪ್ರವಾಹ ಪರಿಹಾರ ವಿಳಂಬ, ಸರ್ಕಾರದ ಬೊಕ್ಕಸ ಖಾಲಿ ಎಂಬ ಯಡಿಯೂರಪ್ಪ ಹೇಳಿಕೆ, ಪ್ರವಾಹ ಪರಿಹಾರದ ವಿಚಾರದಲ್ಲಿ ಸಚಿವರ ಹಾರಿಕೆ ಉತ್ತರ ಮುಂತಾದ ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲಿವೆ.

ಸರ್ಕಾರ ವಿಫಲವಾಗಿದೆ

ಸರ್ಕಾರ ವಿಫಲವಾಗಿದೆ

22 ಜಿಲ್ಲೆಗಳಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆ ಎಂಬ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಹೋರಾಟ ಮಾಡಲಿವೆ. ಕಾಂಗ್ರೆಸ್-ಜೆಡಿಎಸ್ ಶಾಸಕರು ಇರುವ ಕ್ಷೇತ್ರಗಳಿಗೆ ಅನುದಾನ ಕಡಿತ ಮಾಡಿರುವ ವಿಚಾರವೂ ಬಿಸಿ-ಬಿಸಿ ಚರ್ಚೆಗೆ ಕಾರಣವಾಗಲಿದೆ.

ಸ್ಪೀಕರ್‌ಗೆ ಮೊದಲ ಸವಾಲು

ಸ್ಪೀಕರ್‌ಗೆ ಮೊದಲ ಸವಾಲು

ಸಿದ್ದರಾಮಯ್ಯ, ಎಚ್. ಡಿ. ಕುಮಾರಸ್ವಾಮಿ, ಎಚ್. ಡಿ. ರೇವಣ್ಣ, ಎಚ್. ಕೆ. ಪಾಟೀಲ್, ಆರ್. ವಿ. ದೇಶಪಾಂಡೆ, ರಾಮಲಿಂಗಾ ರೆಡ್ಡಿ, ರಮೇಶ್ ಕುಮಾರ್ ಸೇರಿದಂತೆ ಅನೇಕ ಹಿರಿಯ ನಾಯಕರು ಪ್ರತಿಪಕ್ಷದ ಸಾಲಿನಲ್ಲಿಇರುತ್ತಾರೆ. ಆದ್ದರಿಂದ, ನಿಯಾವಳಿಗಳ ಅನ್ವಯ ಸದನವನ್ನು ನಡೆಸುವುದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಮೊದಲ ಸವಾಲಾಗಿದೆ.

ಮೂರು ದಿನ ಮಾತ್ರ ಅಧಿವೇಶನ

ಮೂರು ದಿನ ಮಾತ್ರ ಅಧಿವೇಶನ

ಅಕ್ಟೋಬರ್ 10, 11 ಮತ್ತು 12ರಂದು ವಿಧಾನಸಭೆ ಅಧಿವೇಶ ನಡೆಯಲಿದೆ. ಅಧಿವೇಶನದ ಮೊದಲ ದಿನ ಬೃಹತ್ ಪ್ರತಿಭಟನೆ ನಡೆಸಲು ಜೆಡಿಎಸ್ ತೀರ್ಮಾನಿಸಿದೆ. ಸದನದ ಒಳಗೆ ಮತ್ತು ಹೊರಗೆ ಸರ್ಕಾರದ ವಿರುದ್ಧ ಬೃಹತ್ ಹೋರಾಟ ನಡೆಯಲಿದೆ.

English summary
Opposition party of Karnataka Congress and JD(S) all set to corner government in assembly session which will be held from October 10 to 13, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X