ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್ ಆಗಮನಕ್ಕೆ ಪ್ರಧಾನಿ ನರೇಂದ್ರ ಮೋದಿ 'ತಡೆಗೋಡೆ'ಗೆ ವಿಪಕ್ಷಗಳ ಕಿಡಿ!

|
Google Oneindia Kannada News

ಬೆಂಗಳೂರು. ಫೆ. 18: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತದ ಭೇಟಿ ವೇಳೆ ಅಹ್ಮದಾಬಾದ್‌ ನಗರದ ಸ್ಲಂಗಳು ಕಾಣದಂತೆ ಗೋಡೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ದೇಶದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ವಿರೋಧ ಪಕ್ಷಗಳು, ವಿರೋಧ ಪಕ್ಷಗಳ ನಾಯಕರು, ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಕಿಡಿಕಾರುತ್ತಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್ ಕೂಡ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನೆ ಮಾಡಿದೆ. ಪ್ರಧಾನಿ ಮೋದಿ ಅವರು ಅಹಮದಾಬಾದ್‌ನಲ್ಲಿ ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ, ಆದರೆ ಅಧಃಪತನಕ್ಕೆ ಕುಸಿದಿರುವ ದೇಶದ ಆರ್ಥಿಕತೆ ಕಾಣಿಸದಂತೆ ಮೋದಿ ಅವರು ಯಾವ ಗೋಡೆ ಕಟ್ಟುತ್ತಾರೆ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗಾಗಿ ನಡೆಸಿರುವ ಅದ್ದೂರಿ ಸಿದ್ಧತೆಯ ಬಗ್ಗೆಯೂ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದೆ. ಟ್ರಂಪ್ ಭೇಟಿಯ ಹಿನ್ನೆಲೆಯಲ್ಲಿ ಗುಜರಾತ್ ರಾಜ್ಯದ ಅಹಮದಾಬಾದ್‌ ನಗರದಲ್ಲಿನ ಕೊಳಗೇರಿಗಳು ಕಾಣದಂತೆ ಎತ್ತರದ ಗೋಡೆಗಳನ್ನು ನಿರ್ಮಾಣ ಮಾಡುತ್ತಿರುವುದು ಇದಕ್ಕೆ ಕಾರಣವಾಗಿದೆ.

ದೇಶದ ಆರ್ಥಿಕತೆ ಕಾಣದಂತೆ ಯಾವ ಗೋಡೆ ಕಟ್ಟಿಸ್ತಾರೆ: ಕುಮಾರಸ್ವಾಮಿದೇಶದ ಆರ್ಥಿಕತೆ ಕಾಣದಂತೆ ಯಾವ ಗೋಡೆ ಕಟ್ಟಿಸ್ತಾರೆ: ಕುಮಾರಸ್ವಾಮಿ

ಗೋಡೆ ನಿರ್ಮಾಣವನ್ನು ವಿರೋಧ ಪಕ್ಷಗಳು ಕಟುವಾಗಿ ಟೀಕಿಸಿವೆ. ಬಿಜೆಪಿಯ ಬಹುಕಾಲದ ಆಪ್ತಮಿತ್ರನಾಗಿದ್ದ ಶಿವಸೇನೆ ಕೂಡ, ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಡೊನಾಲ್ಡ್ ಟ್ರಂಪ್ ಭೇಟಿಯನ್ನು ಚಕ್ರವರ್ತಿಯೊಬ್ಬರ ಭೇಟಿಗೆ ಹೋಲಿಕೆ ಮಾಡುವ ಮೂಲಕ ತೀವ್ರವಾಗಿ ಟೀಕಿಸಿದೆ.

ಸಿಎಎ ಹೋರಾಟ ಕಾಣದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ?

ಸಿಎಎ ಹೋರಾಟ ಕಾಣದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ?

ದೇಶವ್ಯಾಪಿ ಭುಗಿಲೆದ್ದಿರುವ ಸಿಎಎ, ಎನ್‌ಆರ್‌ಸಿ ವಿರೋಧಿ ಹೋರಾಟಗಳು ಕಾಣಿಸದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆ ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿ ಅವರೇ ಉತ್ತರಿಸುವಿರಾ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಎಚ್‌ಡಿಕೆ ಪ್ರಶ್ನೆ ಮಾಡಿದ್ದಾರೆ.

ಗರೀಬಿ ಹಠಾವೋ, ಗರೀಬಿ ಚುಪಾವೋ!

ಗರೀಬಿ ಹಠಾವೋ, ಗರೀಬಿ ಚುಪಾವೋ!

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷದ ಜೊತೆಗೆ ಸರ್ಕಾರ ಮಾಡಿರುವ ಶಿವಸೇನೆ ಇದೇ ಸಂದರ್ಭದಲ್ಲಿ ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಯೋಜನೆಗಳನ್ನು ಹೊಗಳಿದೆ. ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಹಿಂದೆಯೇ 'ಗರೀಬಿ ಹಠಾವೋ' ಎಂಬ ಘೋಷಣೆಯೊಂದಿಗೆ ಬಡತನದ ವಿರುದ್ಧ ಹೋರಾಟದ ಯೋಜನೆ ರೂಪಿಸಿದ್ದರು. ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 'ಗರೀಬಿ ಚುಪಾವೋ' ಯೋಜನೆ ರೂಪಿಸಿರುವಂತೆ ಕಾಣುತ್ತಿದೆ. ಅಹಮದಾಬಾದ್‌ನಲ್ಲಿ ಅಮೆರಿಕದ ಅನುದಾನಡಿ ಗೋಡೆ ನಿರ್ಮಾಣ ಮಾಡಲಾಗುತ್ತಿದೆಯಾ? ಇನ್ನು ದೇಶಾದ್ಯಂತ ಬಡತನ ಕಾಣದಂತೆ ಗೋಡೆ ನಿರ್ಮಾಣ ಮಾಡಲು ಅಮೆರಿಕ ಭಾರತಕ್ಕೆ ಸಾಲ ನೀಡಲಿದೆಯೇ ಎಂದು ಶಿವಸೇನೆ ಪ್ರಶ್ನೆ ಮಾಡಿದೆ.

ಟ್ರಂಪ್ ಅಹಮದಾಬಾದ್ ಭೇಟಿಗೆ 100 ಕೋಟಿ ಖರ್ಚು!

ಟ್ರಂಪ್ ಅಹಮದಾಬಾದ್ ಭೇಟಿಗೆ 100 ಕೋಟಿ ಖರ್ಚು!

ಭಾರತ ಪ್ರವಾಸದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಹಮದಾಬಾದ್‌ನಲ್ಲಿ ಕಳೆಯುತ್ತಿರುವುದು ಕೇವಲ ಮೂರು ಗಂಟೆ ಮಾತ್ರ. ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಮೂರು ಗಂಟೆಗಳ ಕಾರ್ಯಕ್ರಮಕ್ಕೆ ಬರೋಬ್ಬರಿ ನೂರು ಕೋಟಿ ರುಪಾಯಿಗಳನ್ನು ಖರ್ಚು ಮಾಡಲಾಗುತ್ತಿದೆ ಎಂದು ಶಿವಸೇನೆ ಆರೋಪಿಸಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಅವರ ನಡುವೆ ನಡೆದಿರುವ ರಾಜಕೀಯ ಒಪ್ಪಂದ ಎಂದು ಸೇನೆ ಆರೋಪಿಸಿದೆ.

ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿರುವ ಟ್ರಂಪ್ ದಂಪತಿ

ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿರುವ ಟ್ರಂಪ್ ದಂಪತಿ

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಟ್ ಹಾಗೂ ಪತ್ನಿ ಮೆಲೆನಿಯಾ ಟ್ರಂಪ್ ಅವರು ಫೆಬ್ರವರಿ 24 ಹಾಗೂ 25ರಂದು ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ 'ನಮಸ್ತೆ ಟ್ರಂಪ್' ಎಂಬ ಬಹುದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಫೆಬ್ರವರಿ 25 ರಂದು ಡೊನಾಲ್ಡ್ ಟ್ರಂಪ್ ನವದೆಹಲಿಗೆ ಭೇಟಿ ಕೊಡಲಿದ್ದಾರೆ. ಅಮೆರಿಕದಲ್ಲಿ ಕಳೆದ ವರ್ಷ 'ಹೌಡಿ ಮೋದಿ' ಕಾರ್ಯಕ್ರಮ ಆಯೋಜಿಸತ್ತು. ಅದರಂತೆಯೆ ಭಾರತದಲ್ಲಿ 'ನಮಸ್ತೆ ಟ್ರಂಪ್' ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ ಕಾರ್ಯಕ್ರಮಕ್ಕೆ ಮಾಡುತ್ತಿರುವುದು ದುಂದುವೆಚ್ಚ ಎಂದು ವಿಪಕ್ಷಗಳು ಆರೋಪಿಸಿ, ಟೀಕೆ ಮಾಡಿವೆ.

English summary
Opposition parties have criticized the barrier wall being built in Ahmedabad in the wake of US President Trump's visit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X