• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯ ರಾಜಕಾರಣ ಬದಲಾವಣೆ ನಿರೀಕ್ಷೆ:ಯಡಿಯೂರಪ್ಪ ಬರ ಪ್ರವಾಸ ಮುಂದೂಡಿಕೆ

|

ಬೆಂಗಳೂರು, ಜುಲೈ 03: ಯಡಿಯೂರಪ್ಪ ಅವರ ಎರಡನೇ ಹಂತದ ಬರ ಪ್ರವಾಸ ಮುಂದೂಡಲಾಗಿದೆ. ಯಡಿಯೂರಪ್ಪ ಅವರು ಇಂದು ಎರಡನೇ ಹಂತದ ಬರ ಪ್ರವಾಸ ಮಾಡಬೇಕಿತ್ತು.

ಇದು ಗ್ರಾಮ ವಾಸ್ತವ್ಯ ಮಾಡುವ ಸಮಯವಲ್ಲ: ಯಡಿಯೂರಪ್ಪ ಇದು ಗ್ರಾಮ ವಾಸ್ತವ್ಯ ಮಾಡುವ ಸಮಯವಲ್ಲ: ಯಡಿಯೂರಪ್ಪ

ಮೊದಲ ಹಂತದ ಬರ ಪ್ರವಾಸವನ್ನು ಸಿದ್ದರಾಮಯ್ಯ ಅವರ ಬಾದಾಮಿ ಕ್ಷೇತ್ರದಿಂದ ಆರಂಭಿಸಿದ್ದ ಯಡಿಯೂರಪ್ಪ ಅವರು, ಇಂದು ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬರ ಪ್ರವಾಸ ಮಾಡಬೇಕಿತ್ತು. ಆದರೆ ಇಂದಿನ ಬರ ಪ್ರವಾಸ ಅನಿವಾರ್ಯ ಕಾರಣಗಳಿಂದಾಗಿ ಮುಂದೂಡಲಾಗಿದೆ.

ಬರ ಅಧ್ಯಯನ : ಯಡಿಯೂರಪ್ಪ ಹೇಳಿಕೆ ಖಂಡಿಸಿದ ಕಾಂಗ್ರೆಸ್ ಬರ ಅಧ್ಯಯನ : ಯಡಿಯೂರಪ್ಪ ಹೇಳಿಕೆ ಖಂಡಿಸಿದ ಕಾಂಗ್ರೆಸ್

ರಾಜ್ಯದಲ್ಲಿ ರಾಜಕೀಯ ಘಟನೆಗಳು ನಡೆಯುತ್ತಿರುವ ಕಾರಣ ಯಡಿಯೂರಪ್ಪ ಅವರು ಬರ ಪ್ರವಾಸ ಮುಂದೂಡಿದ್ದಾರೆ ಎನ್ನಲಾಗಿದೆ. ಶೀಘ್ರದಲ್ಲೇ ಯಡಿಯೂರಪ್ಪ ಅವರು ಬರ ಪ್ರವಾಸವನ್ನು ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಕ್ಷೇತ್ರದಿಂದ ಯಡಿಯೂರಪ್ಪ ಬರ ಪ್ರವಾಸ ಶುರು ಸಿದ್ದರಾಮಯ್ಯ ಕ್ಷೇತ್ರದಿಂದ ಯಡಿಯೂರಪ್ಪ ಬರ ಪ್ರವಾಸ ಶುರು

ಇಬ್ಬರು ಕಾಂಗ್ರೆಸ್ ಶಾಸಕರು ತಮ್ಮ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಸಲ್ಲಿಸಿದ್ದು, ಇನ್ನಷ್ಟು ಶಾಸಕರು ರಾಜೀನಾಮೆಯ ಹಾದಿ ಹಿಡಿಯಬಹುದು ಎನ್ನಲಾಗುತ್ತಿದೆ. ಬಿಜೆಪಿಗೆ ತಾನಾಗಿಯೇ ಒಲಿಯುತ್ತಿರುವ ಈ ಅವಕಾಶವನ್ನು ಕೈಜಾರಲು ಸಿದ್ಧವಿಲ್ಲದ ಯಡಿಯೂರಪ್ಪ ಅವರು ಬರ ಪ್ರವಾಸವನ್ನು ಮುಂದೂಡಿ ರಾಜಕಾರಣ ಗಮನಿಸುತ್ತಿದ್ದಾರೆ.

English summary
Opposition leader BS Yeddyurappa's drought study tour has been postponed. BJP said drought study tour will start in few days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X