ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಬಿಜೆಪಿಯ ಒಳಗುಟ್ಟನ್ನು ಟ್ವೀಟ್ ಮೂಲಕ ಬಹಿರಂಗಗೊಳಿಸಿದ ಸಿದ್ದರಾಮಯ್ಯ

|
Google Oneindia Kannada News

ಯಡಿಯೂರಪ್ಪನವರ ಸರಕಾರದ ವಿರುದ್ದ ಒಂದೇ ಸಮನೆ ಮುಗಿಬೀಳುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಒಂದು ಟ್ವೀಟ್ ಭಾರೀ ಸಂಚಲನ ಮೂಡಿಸುವ ಸಾಧ್ಯತೆಯಿಲ್ಲದಿಲ್ಲ.

Recommended Video

ಬೆಂಗಳೂರಿನಿಂದ ಬರುವವರಿಗೆ ಇಲ್ಲ ಪ್ರವೇಶ | Oneindia Kannada

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿರುವ (ಸಂಘಟನೆ) ಬಿ.ಎಲ್.ಸಂತೋಷ್ ಅವರನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಮಾಡಿರುವ ಟ್ವೀಟ್, ಬಿಜೆಪಿಯ ಆಂತರಿಕ ಒಳಗುಟ್ಟನ್ನು ಬಹಿರಂಗ ಪಡಿಸುವಂತಿದೆ.

ಸ್ವಯಂ ಕ್ವಾರಂಟೈನ್ ಗೆ ಒಳಗಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಸ್ವಯಂ ಕ್ವಾರಂಟೈನ್ ಗೆ ಒಳಗಾದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಸಿಎಂ ಯಡಿಯೂರಪ್ಪ ಮತ್ತು ಸಂತೋಷ್ ನಡುವಿನ ಸಂಬಂಧ ಅಷ್ಟಕಷ್ಟೆ ಎನ್ನುವ ಹರಿದಾಡುತ್ತಿದ್ದ ಸುದ್ದಿಗೆ, ಸಿದ್ದರಾಮಯ್ಯನವರು ಮಾಡಿರುವ ಸಾಲುಸಾಲು ಟ್ವೀಟ್ ಇಂಬು ನೀಡುವಂತಿದೆ.

ರಾಜ್ಯ ಸರ್ಕಾರದ ಅಯೋಗ್ಯತೆಗೆ ಇದಕ್ಕಿಂತ ಸಾಕ್ಷಿ ಬೇಕೇ? ಸಿದ್ದರಾಮಯ್ಯರಾಜ್ಯ ಸರ್ಕಾರದ ಅಯೋಗ್ಯತೆಗೆ ಇದಕ್ಕಿಂತ ಸಾಕ್ಷಿ ಬೇಕೇ? ಸಿದ್ದರಾಮಯ್ಯ

ಕೇಂದ್ರದ ನರೇಂದ್ರ ಮೋದಿ ಸರಕಾರದ ಮೊದಲ ವರ್ಷದ ಅಭಿಯಾನದ ಸಮಾರೋಪ ಸಮಾರಂಭವನ್ನು ವರ್ಚುಯಲ್ ಮಾಧ್ಯಮದ ಮೂಲಕ ಉದ್ದೇಶಿಸಿ ಮಾತನಾಡಿದ ಬಿ.ಎಲ್.ಸಂತೋಷ್, ಯಡಿಯೂರಪ್ಪನವರಿಗೆ ಶಹಬ್ಬಾಸ್ ಗಿರಿಯನ್ನು ನೀಡಿದ್ದರು. ಇದಕ್ಕೆ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಹೀಗಿತ್ತು:

ವರ್ಚುಯಲ್ ಮಾಧ್ಯಮದ ಮೂಲಕ ಬಿ.ಎಲ್.ಸಂತೋಷ್

ವರ್ಚುಯಲ್ ಮಾಧ್ಯಮದ ಮೂಲಕ ಬಿ.ಎಲ್.ಸಂತೋಷ್

ವರ್ಚುಯಲ್ ಮಾಧ್ಯಮದ ಮೂಲಕ ಬಿ.ಎಲ್.ಸಂತೋಷ್, "ಮೋದಿ ಇಲ್ಲದಿದ್ದರೆ ಕೊರೊನಾದಿಂದ ಈ ಮಟ್ಟದಲ್ಲಿ ದೇಶ ಬಚಾವ್ ಆಗುತ್ತಿರಲಿಲ್ಲ. ಯಡಿಯೂರಪ್ಪನವರ ನೇತೃತ್ವದಲ್ಲಿ ಕರ್ನಾಟಕದಲ್ಲೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ" ಎಂದು ಹೇಳಿದ್ದರು. ಇದಕ್ಕೆ, ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಬಿಜೆಪಿ ಒಳಗುಟ್ಟನ್ನು ಬಹಿರಂಗಗೊಳಿಸುವಂತಿದೆ.

ಸಿದ್ದರಾಮಯ್ಯನವರ ಟ್ವೀಟ್ ಮೂಲಕ ಪ್ರತಿಕ್ರಿಯೆ

ಸಿದ್ದರಾಮಯ್ಯನವರ ಟ್ವೀಟ್ ಮೂಲಕ ಪ್ರತಿಕ್ರಿಯೆ ಹೀಗಿತ್ತು, "@blsanthosh ಅವರೇ, @BSYBJP ಅವರಿಗೆ ನೀವು ನೀಡಿರುವ ಶಹಭಾಸ್ ಗಿರಿ ಮನಸ್ಸಿನಿಂದ ಬಂದದ್ದೋ, ನಾಲಿಗೆಯಿಂದಲೋ? ನೀವು ಆಗಾಗ ಕರ್ನಾಟಕಕ್ಕೆ ಬಂದು ಅವರ ವಿರುದ್ಧ ಸಹದ್ಯೋಗಿಗಳನ್ನು ಎತ್ತಿಕಟ್ಟುವುದನ್ನು ನಿಲ್ಲಿಸಿದರೆ ಅವರು ನಿಮಗೆ ಶಹಭಾಸ್‌ಗಿರಿ ಕೊಡಬಹುದೇನೋ" ಎಂದು ಹೇಳಿದ್ದರು.

ಸಂತೋಷ್ ಮತ್ತು ಬಿಎಸ್ಬ್ವೈ ನಡುವೆ, ಯಾರ ಮಾತಿಗೆ ತೂಕ ಜಾಸ್ತಿ

ಸಂತೋಷ್ ಮತ್ತು ಬಿಎಸ್ಬ್ವೈ ನಡುವೆ, ಯಾರ ಮಾತಿಗೆ ತೂಕ ಜಾಸ್ತಿ

'ಆಗಾಗ ಕರ್ನಾಟಕಕ್ಕೆ ಬಂದು ಬಿಎಸ್ವೈ ವಿರುದ್ದ ಎತ್ತಿಕಟ್ಟುವುದನ್ನು ನಿಲ್ಲಿಸಿದರೆ' ಎಂದು ಸಿದ್ದರಾಮಯ್ಯ ಹೇಳಿರುವುದು, ಕರ್ನಾಟಕ ಬಿಜೆಪಿಯಲ್ಲಿ, ಸಂತೋಷ್ ಮತ್ತು ಬಿಎಸ್ಬ್ವೈ ನಡುವೆ, ಯಾರ ಮಾತಿಗೆ ತೂಕ ಜಾಸ್ತಿ, ಯಡಿಯೂರಪ್ಪವರ ಮಾತಿಗೆ ಬೆಲೆ ಸಿಗುತ್ತಿಲ್ಲವೇ ಎನ್ನುವ ಪ್ರಶ್ನೆ ಏಳುವುದು ಸಹಜ.

ಬಿಜೆಪಿಯ ಆಂತರಿಕ ಬೆಳವಣಿಗೆಯನ್ನು ಬಹಿರಂಗ ಮಾಡುವಂತಿದೆ

ಬಿಜೆಪಿಯ ಆಂತರಿಕ ಬೆಳವಣಿಗೆಯನ್ನು ಬಹಿರಂಗ ಮಾಡುವಂತಿದೆ

ತೀರಾ ಇತ್ತೀಚಿನ ಉದಾಹರಣೆಯನ್ನೇ ತೆಗೆದುಕೊಳ್ಳುವುದಾದರೆ, ರಾಜ್ಯಸಭಾ ಟಿಕೆಟಿಗೆ ಹಲವು ಹಿರಿಯ ಮುಖಂಡರ ಹೆಸರನ್ನು ಶಿಫಾರಸು ಮಾಡಲಾಗಿತ್ತು. ಆದರೆ, ಕೇಂದ್ರ ಬಿಜೆಪಿ ವರಿಷ್ಠರು ಆಯ್ಕೆ ಮಾಡಿದ್ದು ಬೇರೆಯವರನ್ನೇ. ನಳಿನ್ ಕಟೀಲ್ ಮತ್ತು ಸಂತೋಷ್ ಬಿಟ್ಟರೆ ಈ ವಿಚಾರ ಯಾರಿಗೂ ತಿಳಿದಿರಲಿಲ್ಲ. ಯಡಿಯೂರಪ್ಪ ಈ ವಿದ್ಯಮಾನದಿಂದ ತೀವ್ರ ಮುಜುಗರಕ್ಕೀಡಾಗಿದ್ದರು. ಹಾಗಾಗಿ, ಸಿದ್ದರಾಮಯ್ಯ ಮಾಡಿರುವ ಟ್ವೀಟ್, ಬಿಜೆಪಿಯ ಆಂತರಿಕ ಬೆಳವಣಿಗೆಯನ್ನು ಬಹಿರಂಗ ಪಡಿಸುವಂತಿದೆ.

English summary
Opposition Leader Siddaramaiah Tweet To B L Santosh Involvement In State BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X