• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗುತ್ತಿಗೆದಾರರ 40% ಕಮಿಷನ್ ಕೂಗಿಗೆ ಧ್ವನಿಯಾಗಿದ್ದ ಕಾಂಗ್ರೆಸ್ ಈಗ ಉಲ್ಟಾ?

|
Google Oneindia Kannada News

ರಾಜ್ಯ ಬಿಜೆಪಿ ಸರಕಾರ ನಲವತ್ತು ಪರ್ಸೆಂಟ್ ಅವ್ಯವಹಾರ ನಡೆಸುತ್ತಿದೆ ಎನ್ನುವ ಆರೋಪ ಮನೆಮಾತಾಗಲು ಪ್ರಮುಖ ಕಾರಣವಾಗಿದ್ದ ಗುತ್ತಿಗೆದಾರರ ಸಂಘ ಮತ್ತು ಸಂಘದ ಅಧ್ಯಕ್ಷ ಡಿ.ಕೆಂಪಣ್ಣನವರು ಕಾಂಗ್ರೆಸ್ ಏಜೆಂಟ್ ನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

ರಾಜ್ಯ ಸರಕಾರದ ಇಲಾಖೆಗಳಲ್ಲಿ ಅದರಲ್ಲೂ ಪ್ರಮುಖವಾಗಿ ಜಲಸಂಪನ್ಮೂಲ, ಆರೋಗ್ಯ ಮತ್ತು ಲೋಕೋಪಯೋಗಿ ಇಲಾಖೆಗಳಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ ಎಂದು ಕೆಂಪಣ್ಣ ಅವರು ನೇರವಾಗಿ ಪ್ರಧಾನಮಂತ್ರಿಗೆ ಪತ್ರ ಬರೆದಿದ್ದರು.

ನಾರಾಯಣಪುರ ಬಲದಂಡೆ ನಾಲೆ ಆಧುನೀಕರಣದಲ್ಲಿ ಅವ್ಯವಹಾರ, ತನಿಖೆಗೆ ಸಿದ್ದರಾಮಯ್ಯ ಆಗ್ರಹನಾರಾಯಣಪುರ ಬಲದಂಡೆ ನಾಲೆ ಆಧುನೀಕರಣದಲ್ಲಿ ಅವ್ಯವಹಾರ, ತನಿಖೆಗೆ ಸಿದ್ದರಾಮಯ್ಯ ಆಗ್ರಹ

ಪ್ರಧಾನಿಗೆ ಬರೆದ ಪತ್ರ ಸಾರ್ವಜನಿಕವಾಗುತ್ತಿದ್ದಂತೆಯೇ ವಿರೋಧ ಪಕ್ಷ ಕಾಂಗ್ರೆಸ್ಸಿಗೆ ಇದೊಂದು ಪ್ರಮುಖ ಅಸ್ತ್ರವಾಗಿತ್ತು. ಇದನ್ನು ಬಳಸಿಕೊಂಡು ಸದನದ ಒಳಗೆ ಮತ್ತು ಹೊರಗೆ ಕಾಂಗ್ರೆಸ್ ಪಕ್ಷ ಬಿಜೆಪಿಯನ್ನು ಬೆಂಡೆತ್ತಲು ಆರಂಭಿಸಿತ್ತು.

ಗುತ್ತಿಗೆದಾರ ಸಂಘವನ್ನು ಕಾಂಗ್ರೆಸ್ಸಿನವರೇ ಎತ್ತಿಕಟ್ಟುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಈಗ, ಬಿಜೆಪಿ ವಿರುದ್ದ ಟೀಕಾ ಪ್ರಹಾರ ನಡೆಸಲು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಸರಿಯಿಲ್ಲ ಎಂದು ಕಾಂಗ್ರೆಸ್ ಆರೋಪಿಸಿ, ಬಿಜೆಪಿ ಮೂಲೆ ಗೂಬೆ ಕೂರಿಸಿದೆ.

 ಬೊಮ್ಮಾಯಿ ಅವರು ಸಂಘದ ಪದಾಧಿಕಾರಿಗಳನ್ನು ಕರೆಸಿ ಮಾತನಾಡಿಸಿದ್ದರು

ಬೊಮ್ಮಾಯಿ ಅವರು ಸಂಘದ ಪದಾಧಿಕಾರಿಗಳನ್ನು ಕರೆಸಿ ಮಾತನಾಡಿಸಿದ್ದರು

ಪ್ರಧಾನಿಗೆ ಪತ್ರ ಬರೆದ ನಂತರ ಅವರ ಭೇಟಿಗೆ ಸಮಯಾವಕಾಶವನ್ನು ಸಂಘ ಕೇಳಿತ್ತು. ಆದರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದಕ್ಕೋ ಏನೋ, ಪ್ರಧಾನಿ ಭೇಟಿಗೆ ಕಾಲಾವಕಾಶ ಕೂಡಿ ಬರಲಿರಲಿಲ್ಲ. ಇದನ್ನೇ ಇಟ್ಟುಕೊಂಡು ಕಾಂಗ್ರೆಸ್ ಬೀದಿಗಿಳಿದಿತ್ತು. ಇನ್ನು, ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮತ್ತೆ ಸರಕಾರದ ಕೆಲವು ಸಚಿವಾಲಯದ ವಿರುದ್ದ ಭ್ರಷ್ಟಾಚಾರದ ಆರೋಪವನ್ನು ಮಾಡುತ್ತಾ ಬರುತ್ತಿದ್ದರು. ಈ ನಡುವೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಘದ ಪದಾಧಿಕಾರಿಗಳನ್ನು ಕರೆಸಿ ಮಾತನಾಡಿಸಿದ್ದರು.

 ಸಿಎಂ ಭೇಟಿಯಾಗಿದ್ದ ಸಂಘದ ಅಧ್ಯಕ್ಷ ಕೆಂಪಣ್ಣ

ಸಿಎಂ ಭೇಟಿಯಾಗಿದ್ದ ಸಂಘದ ಅಧ್ಯಕ್ಷ ಕೆಂಪಣ್ಣ

ಏಪ್ರಿಲ್ 25ಕ್ಕೆ ಸಿಎಂ ಭೇಟಿಯಾಗಿದ್ದ ಸಂಘದ ಅಧ್ಯಕ್ಷ ಕೆಂಪಣ್ಣನವರು ಬೊಮ್ಮಾಯಿಯವರ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದರು. "ಮುಖ್ಯಮಂತ್ರಿಗಳನ್ನು ನಮ್ಮನ್ನು ಕರೆಸಿಕೊಂಡು ಉತ್ತಮವಾಗಿ ನಡೆಸಿಕೊಂಡಿದ್ದಾರೆ. ನಮ್ಮೆಲ್ಲಾ ನೋವುಗಳನ್ನು ಹೇಳಿಕೊಂಡಿದ್ದೇವೆ, ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ನೀಡಿದ್ದಾರೆ"ಎಂದು ಕೆಂಪಣ್ಣ ಹೇಳಿದ್ದರು. ಇದರ ನಂತರ, ಸಂಘದಿಂದ ಬಹಿರಂಗ ಆರೋಪ ಸರಕಾರದ ವಿರುದ್ದ ಅಷ್ಟಾಗಿ ಬರುತ್ತಿರಲಿಲ್ಲ. ಈಗ ಅದನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

 ಮುಖ್ಯಮಂತ್ರಿ ಬೊಮ್ಮಾಯಿಯವರ ಜೊತೆಗೆ ಒಳ ಒಪ್ಪಂದ

ಮುಖ್ಯಮಂತ್ರಿ ಬೊಮ್ಮಾಯಿಯವರ ಜೊತೆಗೆ ಒಳ ಒಪ್ಪಂದ

"ಕಾಮಗಾರಿ ನಿಲ್ಲಿಸುವುದಾಗಿ ಹೇಳಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರು ಮುಖ್ಯಮಂತ್ರಿ ಬೊಮ್ಮಾಯಿಯವರ ಜೊತೆಗೆ ಒಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಕೆಂಪಣ್ಣ ಈಗ ಸುಮ್ಮನಾಗಿದ್ದಾರೆ, ಏನೋ ಗೋಲ್ಮಾಲ್ ನಡೆದಿದೆ. ಕೆಂಪಣ್ಣನವರನ್ನು ಇದುವರೆಗೆ ನಾನು ಭೇಟಿಯಾಗಿಲ್ಲ, ಆದರೆ ಅವರು ಪ್ರಧಾನಿಗೆ ಬರೆದ ಪತ್ರ ನನ್ನಲ್ಲಿ ಇದೆ. ಸರಕಾರದ ಜೊತೆಗೆ ಗುತ್ತಿಗೆದಾರರ ಸಂಘದ ಒಳ ಒಪ್ಪಂದ ನಡೆದಿರಲೂ ಬಹುದು" ಎಂದು ವಿರೋಧ ಪಕ್ಷದ ಸಿದ್ದರಾಮಯ್ಯ ಆರೋಪಿಸಿದ್ದಾರೆ.

 ಮೋದಿಯವರು ಸಾರ್ವಜನಿಕ ಭಾಷಣದಲ್ಲಿ ದಾಖಲೆಯಿಲ್ಲದೇ ಆರೋಪ

ಮೋದಿಯವರು ಸಾರ್ವಜನಿಕ ಭಾಷಣದಲ್ಲಿ ದಾಖಲೆಯಿಲ್ಲದೇ ಆರೋಪ

"ಕೆಂಪಣ್ಣನವರು ಸುಮ್ಮನಿರುವುದನ್ನು ನೋಡಿದರೆ ಅನುಮಾನ ಬರುತ್ತದೆ, ಒಳ ಒಪ್ಪಂದ ನಡೆದಿದೆಯೇ ಎಂದು ಗೊತ್ತಾಗಲು ತನಿಖೆಯಾಗಬೇಕು. ಹಿಂದೆ ನಾನು ಸಿಎಂ ಆಗಿದ್ದಾಗ, ಹತ್ತು ಪರ್ಸೆಂಟ್ ಸರಕಾರ ಎಂದು ಪ್ರಧಾನಿ ಮೋದಿಯವರು ಸಾರ್ವಜನಿಕ ಭಾಷಣದಲ್ಲಿ ದಾಖಲೆಯಿಲ್ಲದೇ ಆರೋಪಿಸಿದ್ದರು. ಈಗ ಸೂಕ್ತ ದಾಖಲೆ ಇದ್ದರೂ, ಸೂಕ್ತ ಕ್ರಮಗಳನ್ನು ಪ್ರಧಾನಿ ತೆಗೆದುಕೊಳ್ಳುತ್ತಿದ್ದಾರಾ"ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

English summary
Opposition Leader Siddaramaiah Said Kempanna May Had Internal Adjustment with Government. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X