ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕೊರೊನಾ ವೈರಸ್ ತಡೆಯಲು ಬರಿ ಭಾಷಣ ಬಿಗಿದ್ರೆ ಸಾಲದು, ಪ್ರತ್ಯೇಕ ಬಜೆಟ್ ಮಂಡಿಸಿ'

|
Google Oneindia Kannada News

ಬೆಂಗಳೂರು. ಮಾ. 14: ಕೊರೊನಾ ವೈರಸ್ ಹರಡುತ್ತಿರುವ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ, ಕೇಂದ್ರ ಸರ್ಕಾರದ ನಾಯಕರು ಕೊರೊನಾ ತಡೆಯುವ ಬದಲು ಬರೆಡ ಭಾಷಣ ಬಿಗೀಯುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕೇಂದ್ರದಿಂದ ಪ್ರತ್ಯೇಕ ಬಜೆಟ್ ಮಂಡಿಸಿ ರಾಜ್ಯಗಳಿಗೆ ಹಣಕಾಸು ಕೊಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ. ಕೊರೊನಾ ವೈರಸ್‌ ತಡೆಯುವುದಕ್ಕಾಗಿಯೆ ಕೇಂದ್ರ ಸರ್ಕಾರ ಪ್ರತ್ಯೇಕ ಬಜೆಟ್ ಮಂಡಿಸಬೇಕು.

ವೈರಸ್ ಹರಡದಂತೆ ತಡೆಯಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಹಂಚಿಕೆ ಮಾಡಬೇಕು ಎಂದಿದ್ದಾರೆ. ಇನ್ನು ರಾಜ್ಯ ಸರ್ಕಾರ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸದರೆ ಸಾಲದು, ಅದಕ್ಕೆ ತಕ್ಕದಾಗಿ ಮುಂಜಾಗ್ರತೆ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ.

ಕೊರೋನಾ ಭೀತಿ: ಲೋಕಸಭಾ ಅಧಿವೇಶನ ಕುರಿತು ಪ್ರಹ್ಲಾದ್ ಜೋಶಿ ಹೇಳಿಕೆಕೊರೋನಾ ಭೀತಿ: ಲೋಕಸಭಾ ಅಧಿವೇಶನ ಕುರಿತು ಪ್ರಹ್ಲಾದ್ ಜೋಶಿ ಹೇಳಿಕೆ

ಕೊರೊನಾ ಬಗ್ಗೆ ಜನ ಭಯಭೀತರಾಗಿದ್ದಾರೆ: ಇಲ್ಲಿಯವರೆಗೆ ಹೊರದೇಶದಿಂದ ಬಂದಿರೋರಿಗೆ ಮಾತ್ರ ಕೊರೊನಾ ವೈರಸ್ ತಗುಲಿದೆ. ಸ್ಥಳೀಯರಿಂದ ಕೊರೊನಾ ಬಂದಿಲ್ಲ. ಕೊರೊನಾ ಲಕ್ಷಣಗಳಿದ್ರೆ ಮಾತ್ರ ಭಯ ಪಡಬೇಕು, ಇಲ್ಲದಿದ್ರೆ ಆತಂಕ ಪಡುವ ಅಗತ್ಯ ಇಲ್ಲ.

Opposition leader Siddaramaiah has demanded a special budget to prevent COVID-19.

ದೆಹಲಿ ಮಹಿಳೆಯೂ ಹೊರದೇಶದಿಂದ ಬಂದ ಮಗನಿಂದಾಗಿ ಮೃತಪಟ್ಟಿದ್ದಾರೆ. ಕಲಬುರ್ಗಿಯಲ್ಲಿ ಸತ್ತ ವ್ಯಕ್ತಿಯೂ ಸೌದಿಯಿಂದ ಬಂದಿದ್ದರು. ಇಲ್ಲಿಯವರಿಗೆ ಕೊರೊನಾ ಸ್ಥಳೀಯರಿಂದ ಬಂದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

English summary
Opposition leader Siddaramaiah has demanded a special budget to prevent COVID-19. Plus people have said that they don't have to worry about COVID-19 said Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X