ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಷ್ಟಿಲ್ಲದೇ ಸುಮ್ಮನೆ ಸೋನಿಯಾ, ವಿಪಕ್ಷ ನಾಯಕನ ಸ್ಥಾನ ಸಿದ್ದರಾಮಯ್ಯಗೆ ನೀಡುತ್ತಾರಾ?

|
Google Oneindia Kannada News

ಬಯಸಿದ ಹುದ್ದೆ ಸಿಕ್ಕಿದ ನಂತರ, ಗುರಿಯಿಟ್ಟ ಲಕ್ಷ್ಯವೂ ಸರಿಯಾದ ದಾರಿಯಲ್ಲಿ ಸಾಗುತ್ತಿರಬೇಕಾದರೆ, ಸಿದ್ದರಾಮಯ್ಯನವರಂತಹ ನಾಯಕನನ್ನು ಹಿಡಿದಿಡಲು ಸಾಧ್ಯವೇ? ಇದನ್ನರಿಯದೇ, ಸೋನಿಯಾ ಗಾಂಧಿಯಂತಹ ರಾಜಕಾರಣಿ, ಹಲವು ಆಕ್ಷೇಪಗಳ ನಡುವೆಯೂ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಸಿದ್ದರಾಮಯ್ಯನವರಿಗೆ ನೀಡುವರೇ?

ಚಳಿಗಲಾದ ಅಸೆಂಬ್ಲಿ ಅಧಿವೇಶನದ ಮೂರು ದಿನವನ್ನು ಅಕ್ಷರಸಃ ಸಿದ್ದರಾಮಯ್ಯ ಆಪೋಸನ ತೆಗೆದುಕೊಂಡ ರೀತಿ ವಿರೋಧಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟುವಂತದ್ದು. ಅಧಿವೇಶನದ ಮೊದಲ ದಿನದಿಂದ ಹಿಡಿದು, ಮೂರನೇ ದಿನದವರೆಗೂ, ಎಲ್ಲಾ ವಿಚಾರಗಳಲ್ಲೂ ಸಿದ್ದರಾಮಯ್ಯನವರದ್ದೇ ಸದ್ದು.

ಮೋದಿ ಸಖ್ಯ ತೊರೆದಿದ್ದಕ್ಕೆ ಪಶ್ಚಾತಾಪದ ಮಾತನಾಡಿದ ಚಂದ್ರಬಾಬು ನಾಯ್ಡಮೋದಿ ಸಖ್ಯ ತೊರೆದಿದ್ದಕ್ಕೆ ಪಶ್ಚಾತಾಪದ ಮಾತನಾಡಿದ ಚಂದ್ರಬಾಬು ನಾಯ್ಡ

ಮಾಜಿ ಸಿಎಂ ಆಗಿರುವುದರಿಂದ ಆಡಳಿತಾತ್ಮಕವಾಗಿ ಸರಕಾರದ ಆಗುಹೋಗುಗಳ ಬಗ್ಗೆ ಸಂಪೂರ್ಣ ಹಿಡಿತವನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಹಾಗಾಗಿ, ಇವರ ಹೊರತಾಗಿ, ಮೂಲ ಅಥವಾ ವಲಸೆ ಕಾಂಗ್ರೆಸ್ಸಿನ ಯಾವುದೇ ಮುಖಂಡರು, ಇಷ್ಟು, ಗಡಸ್ಸಾಗಿ , ಆಡಳಿತ ಪಕ್ಷವನ್ನು ಎದುರಿಸುತ್ತಿದ್ದರೋ ಎನ್ನುವ ಮಟ್ಟಿಗೆ ಸಿದ್ದರಾಮಯ್ಯ, ಅಧಿವೇಶನದಲ್ಲಿ ಹಿಡಿತವನ್ನು ಸಾಧಿಸಿದರು.

ಈಶ್ವರಪ್ಪ-ಸಿದ್ದರಾಮಯ್ಯ ವಾಕ್ಸಮರಕ್ಕೆ ಸದನ ಅಕ್ಷರಸಃ ತಬ್ಬಿಬ್ಬುಈಶ್ವರಪ್ಪ-ಸಿದ್ದರಾಮಯ್ಯ ವಾಕ್ಸಮರಕ್ಕೆ ಸದನ ಅಕ್ಷರಸಃ ತಬ್ಬಿಬ್ಬು

ತಾನು ಬಯಸಿದ ವಿರೋಧ ಪಕ್ಷದ ನಾಯಕನ ಸ್ಥಾನ, ಅಧಿವೇಶನದ ಒಂದು ದಿನದ ಹಿಂದೆ ಘೋಷಣೆಯಾದ ನಂತರ ಸಿದ್ದರಾಮಯ್ಯ ಅವರ ಬಾಡಿ ಲಾಂಗ್ವೇಜ್ ಬದಲಾಗಿತ್ತು. ಒಂದು ಹಂತದಲ್ಲಿ "ನೀವು ನನಗೆ ನಿರ್ದೇಶನ ನೀಡುವಂತಿಲ್ಲ" ಎಂದು ಸ್ಪೀಕರ್ ಅವರಿಗೇ ತಿರುಗೇಟು ನೀಡಿದರು. ಅಧಿವೇಶನದ ಟಗರು ಭಾಷಣದ ಹೈಲೆಟ್ಸ್ ಅನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

ವಿರೋಧ ಪಕ್ಷದ ನಾಯಕನಿಗೆ ನೀವು ಹೆಚ್ಚಿನ ಅವಕಾಶವನ್ನು ನೀಡಬೇಕು

ವಿರೋಧ ಪಕ್ಷದ ನಾಯಕನಿಗೆ ನೀವು ಹೆಚ್ಚಿನ ಅವಕಾಶವನ್ನು ನೀಡಬೇಕು

"ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಾದ ದಾರಿಯಲ್ಲಿ ಸಾಗಬೇಕಾದರೆ, ವಿರೋಧ ಪಕ್ಷದ ನಾಯಕನಿಗೆ ನೀವು ಹೆಚ್ಚಿನ ಅವಕಾಶವನ್ನು (ಸ್ಪೀಕರ್ ಉದ್ದೇಶಿಸಿ) ನೀಡಬೇಕು. ಅದು ಬಿಟ್ಟು, ಸರಕಾರಕ್ಕಿಂತ ಅರ್ಜೆಂಟ್ ನೀವು ತೋರಿದರೆ ಹೇಗೆ". ಸಿಎಂ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಹಕ್ಕನ್ನು ಮೊಟಕುಗೊಳಿಸಲು ಹೋದರೆ, ಅದು ತೊಂದರೆಯಾಗುತ್ತದೆ".

ನಿಮ್ಮ ಪಾರ್ಟಿ ಅಧ್ಯಕ್ಷ ಕಟೀಲ್ ಅವರಿಗೆ ಸರಿಯಾದ ಹೇಳಿಕೆಯನ್ನು ನೀಡಲು ಹೇಳಿ

ನಿಮ್ಮ ಪಾರ್ಟಿ ಅಧ್ಯಕ್ಷ ಕಟೀಲ್ ಅವರಿಗೆ ಸರಿಯಾದ ಹೇಳಿಕೆಯನ್ನು ನೀಡಲು ಹೇಳಿ

"ಖಜಾನೆ ಖಾಲಿಯಾಗಿದೆ, ಲೂಟಿ ಹೊಡೆದಿದ್ದಾರೆ ಎನ್ನುವ ಮಾತನ್ನು ಹೇಳಿದ್ದೀರಿ. ರಾಜ್ಯದ ಆರ್ಥಿಕ ವ್ಯವಸ್ಥೆ ಸರಿಯಾಗಿಯೇ ಇದೆ. ಮೊದಲು ನಿಮ್ಮ ಪಾರ್ಟಿ ಅಧ್ಯಕ್ಷ ಕಟೀಲ್ ಅವರಿಗೆ ಸರಿಯಾದ ಹೇಳಿಕೆಯನ್ನು ನೀಡಲು ಹೇಳಿ. ಸಿದ್ದರಾಮಯ್ಯನವರ ಸರಕಾರದಲ್ಲಿ ಸಾಲ ಜಾಸ್ತಿಯಾಗಿದೆ ಎನ್ನುವ ಹೇಳಿಕೆಯನ್ನು ಬಿಜೆಪಿಯವರು ನೀಡಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಏನಾದರೂ ತೊಂದರೆಯಾದರೆ, ಅದಕ್ಕೆ ನಾನು ಜವಾಬ್ದಾರಿನಾ".

ಸುಮ್ಮನೇ ಕೊಟ್ಟಿಲ್ಲ ಪ್ರತಿಪಕ್ಷ ಅಧ್ಯಕ್ಷ ಸ್ಥಾನ, ಷರತ್ತುಗಳೂ ಅನ್ವಯ!ಸುಮ್ಮನೇ ಕೊಟ್ಟಿಲ್ಲ ಪ್ರತಿಪಕ್ಷ ಅಧ್ಯಕ್ಷ ಸ್ಥಾನ, ಷರತ್ತುಗಳೂ ಅನ್ವಯ!

ಯೋ ರೇವಣ್ಣ, ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೆದಾಗ್ಲಿ

ಯೋ ರೇವಣ್ಣ, ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೆದಾಗ್ಲಿ

"ಪ್ರಧಾನಿ ಮೋದಿ, ಕರ್ನಾಟಕದ ಯಾರಿಗೂ ಅಪಾಯಿಂಟ್ಮೆಂಟ್ ಕೊಟ್ಟಿಲ್ಲ. ಅವರಿಗೆ ಇಲ್ಲಿ ಪ್ರವಾಹ ಇದೆ ಅನ್ನುವುದು ಗೊತ್ತಿದೆಯೋ ಇಲ್ಲವೋ. ಯಡಿಯೂರಪ್ಪನವರಿಗೇ ಸಮಾಯವಾಕಾಶ ಕೊಟ್ಟಿಲ್ಲ, ಇನ್ನು ನನಗೆ ಕೊಟ್ಟಾರಾ.. ಯೋ ರೇವಣ್ಣ, ನಂಗೊಂದು ನಿಂಬೆಹಣ್ಣು ಕೊಡಪ್ಪಾ ಒಳ್ಳೆದಾಗ್ಲಿ".

ಯತ್ನಾಳ್ ಈಸ್ ಗುಡ್ ಫ್ರೆಂಡ್ ಆಫ್ ಮೈನ್

ಯತ್ನಾಳ್ ಈಸ್ ಗುಡ್ ಫ್ರೆಂಡ್ ಆಫ್ ಮೈನ್

ಯತ್ನಾಳ್ ಈಸ್ ಗುಡ್ ಫ್ರೆಂಡ್ ಆಫ್ ಮೈನ್. ಅವರು ಸತ್ಯ ಹೇಳ್ತಾರೆ ಪಾಪ.. ಇವತ್ತೂ ಒಂದು ಭವಿಷ್ಯವನ್ನು ಯತ್ನಾಳ್ ಹೇಳಿದ್ದಾರೆ. ರಾಜ್ಯದಿಂದ ಕೇಂದ್ರಕ್ಕೆ ಹೋಗಿರುವ ಇಬ್ಬರು, ಯಡಿಯೂರಪ್ಪನವರನ್ನ ಇಳಿಸರು ಸಂಚು ಮಾಡುತ್ತಿದ್ದಾರೆಂದು ಹೇಳಿದ್ದಾರೆ. ಸತ್ಯ ಹೇಳಿದ್ದಕ್ಕೆ ಅವರಿಗೆ ನೊಟೀಸ್ ಹೋಗಿದೆ. ಸತ್ಯ ಎಷ್ಟೇ ಕಹಿಯಾದರೂ, ನಿಜಹೇಳಬೇಕು. ನೀವು ಬಿಎಸ್ವೈ ಪರ ಬ್ಯಾಟಿಂಗ್ ಮಾಡಿದ್ರಿ". ನೀವು ಎಡಪಂಥೀಯ ಧೋರಣೆಯುಳ್ಳವರು, ಆದರೆ, ಬಲಪಂಥೀಯ ಪಕ್ಷದಲ್ಲಿದ್ದೀರಿ".

ಈಶ್ವರಪ್ಪ-ಸಿದ್ದರಾಮಯ್ಯ ವಾಕ್ಸಮರ

ಈಶ್ವರಪ್ಪ-ಸಿದ್ದರಾಮಯ್ಯ ವಾಕ್ಸಮರ

"ಹತ್ತು ಸಾವಿರ ಕೊಟ್ಟಿಲ್ವಾ, ಅದೇ ಜಾಸ್ತಿ ಎಂದು ಈಶ್ವರಪ್ಪ ಹೇಳುತ್ತಾರೆ. ಉಪಮುಖ್ಯಮಂತ್ರಿಯಾದವರು ನೀವು ಈಗ ಸಚಿವರಾಗಿದ್ದೀರಿ. ನಿಮ್ಮ ಮುಂದೆಯೇ ಬೇರೆ ಇಬ್ಬರು ಡಿಸಿಎಂ ಆದರು. ನಾಚಿಕೆ ನಿಮಗೆ ಆಗಬೇಕು. ನಾನಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತಿದ್ದೆ. ನನಗೆ ಹೇಳುವ ನಿಮಗೆ, ಮೋದಿ ಎದುರು ಹೋಗುವ ಧೈರ್ಯವಿದೆಯಾ, ನಾನ್ ಸೆನ್ಸ್".

English summary
Opposition Leader Siddaramaiah Fiery Speech In Karnataka Assembly Winter Session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X