ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಕಮಲ ಬಿಜೆಪಿ ಹರಡಿಸುತ್ತಿರುವ ವೈರಸ್!

|
Google Oneindia Kannada News

ಬೆಂಗಳೂರು, ಜುಲೈ 14 : 'ಆಪರೇಷನ್ ಕಮಲ' ಎಂಬ ಹೆಸರು ಕೇಳುತ್ತಿದ್ದಂತೆ ನೆನೆಪಿಗೆ ಬರುವುದು ಕರ್ನಾಟಕದ ರಾಜಕೀಯ. ಈಗ ಇದು ಬೇರೆ ರಾಜ್ಯಗಳಿಗೆ ಹಬ್ಬಿದೆ. 'ಇಂತಹ ವೈರಸ್ ಹರಡುತ್ತಿರುವುದು ಬಿಜೆಪಿಯಿಂದ' ಎಂದು ಕಾಂಗ್ರೆಸ್ ಆರೋಪಿಸಿದೆ.

ಕರ್ನಾಟಕ ಕಾಂಗ್ರೆಸ್ ಭಾನುವಾರ ಟ್ವೀಟ್ ಮಾಡಿದ್ದು 'ಆಪರೇಷನ್ ಕಮಲ'ದ ವಿರುದ್ಧ ಟೀಕೆ ಮಾಡಿದೆ. 'ಈ ರೋಗ ದೇಶವನ್ನು ನಾಶ ಮಾಡುವ ಮುನ್ನ ಅದನ್ನು ತೊಲಗಿಸಬೇಕಿದೆ' ಎಂದು ಹೇಳಿದೆ.

ನವದೆಹಲಿಯಲ್ಲಿ ಬಿಜೆಪಿ ಸೇರಿದ ಗೋವಾದ 10 ಕಾಂಗ್ರೆಸ್ ಶಾಸಕರುನವದೆಹಲಿಯಲ್ಲಿ ಬಿಜೆಪಿ ಸೇರಿದ ಗೋವಾದ 10 ಕಾಂಗ್ರೆಸ್ ಶಾಸಕರು

'ಆಪರೇಷನ್ ಕಮಲ ಇದು ಅರುಣಾಚಲ ಪ್ರದೇಶದಿಂದ ಕರ್ನಾಟಕಕ್ಕೆ ಹರಡಿ ಅಲ್ಲಿಂದ ಗೋವಾ, ಬಂಗಾಳಕ್ಕೂ ವಿಸ್ತರಿಸಿದೆ' ಎಂದು ಕಾಂಗ್ರೆಸ್ ಟ್ವೀಟ್‌ನಲ್ಲಿ ದೂರಿದೆ.

ಆಪರೇಷನ್ ಮುಂಬೈನಲ್ಲಿ ಅಲ್ಲ: ಎಲ್ಲಾ ಬೆಂಗಳೂರಲ್ಲೇ: ಸಚಿವ ಜಿಟಿಡಿಆಪರೇಷನ್ ಮುಂಬೈನಲ್ಲಿ ಅಲ್ಲ: ಎಲ್ಲಾ ಬೆಂಗಳೂರಲ್ಲೇ: ಸಚಿವ ಜಿಟಿಡಿ

Operation Kamala virus spread by BJP alleges Congress

ಕಾಂಗ್ರೆಸ್ ಟ್ವೀಟ್ ಏನು? :

ಆಪರೇಷನ್ ಕಮಲ ಎಂಬುದು @BJP4India ಎಂಬ ವೈರಸ್ ನಿಂದ ಹರಡಿ ಪ್ರಜಾಪ್ರಭುತ್ವವನ್ನು ಹಾಳು ಮಾಡುತ್ತಿರುವ ಒಂದು ಗಂಭೀರವಾದ ಸಾಂಕ್ರಾಮಿಕ ರೋಗ. ಇದು ಅರುಣಾಚಲ ಪ್ರದೇಶದಿಂದ ಕರ್ನಾಟಕಕ್ಕೆ ಹರಡಿ ಅಲ್ಲಿಂದ ಗೋವಾ, ಬಂಗಾಳಕ್ಕೂ ವಿಸ್ತರಿಸಿದೆ. ಈ ರೋಗವು ಪೂರ್ಣವಾಗಿ ವ್ಯಾಪಿಸಿ ಈ ದೇಶವನ್ನು ನಾಶ ಮಾಡುವ ಮುನ್ನ ಅದನ್ನು ತೊಲಗಿಸಲೇಬೇಕಿದೆ !

Operation Kamala
English summary
In a tweet Karnataka Congress alleged that Operation Kamala is a virus it will spread from BJP. After Karnataka virus spread to Goa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X