ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಕಮಲ : ಕರ್ನಾಟಕ ವಿಧಾನಸಭೆ ಬಲಾಬಲದ ಲೆಕ್ಕಾಚಾರ

|
Google Oneindia Kannada News

Recommended Video

Operation Kamala : ಕರ್ನಾಟಕ ವಿಧಾನಸಭೆಯ ಬಲಾಬಲದ ಲೆಕ್ಕಾಚಾರ | Oneindia Kannada

ಬೆಂಗಳೂರು, ಜನವರಿ 15 : 5 ಕಾಂಗ್ರೆಸ್ ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ. ಬಿಜೆಪಿ ಶಾಸಕರನ್ನು ಸೆಳೆಯಲು ಜೆಡಿಎಸ್ ಪ್ರಯತ್ನ ನಡೆಸುತ್ತಿದೆ. ರಾಜ್ಯದಲ್ಲಿ ಆಪರೇಷನ್ ಕಮಲ ನಡೆಯುತ್ತಿದೆ ಇಂತಹ ಸುದ್ದಿಗಳು ಕಳೆದ ಮೂರು ದಿನಗಳಿಂದ ಕಾಡ್ಗಿಚ್ಚಿನಂತೆ ಹಬ್ಬಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದೆ. ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ಪತನವಾಗುವಂತೆ ಮಾಡುವುದು ಬಿಜೆಪಿಯ ತಂತ್ರವಾಗಿದೆ. ಆದರೆ, ಅದು ಅಂದುಕೊಂಡಷ್ಟು ಸುಲಭವಿಲ್ಲ. ಬಹುಮತ ಪಡೆಯಲು ಬಿಜೆಪಿ ಸರ್ಕಸ್ ನಡೆಸಬೇಕಿದೆ.

ಆಪರೇಷನ್ ಕಮಲ : ಬೆಂಗಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್ಆಪರೇಷನ್ ಕಮಲ : ಬೆಂಗಳೂರಿಗೆ ಆಗಮಿಸಿದ ಕೆ.ಸಿ.ವೇಣುಗೋಪಾಲ್

2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗಳಿಸಿರುವ ಸ್ಥಾನ 104. ಕರ್ನಾಟಕ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಲು ಬೇಕಾದ ಮ್ಯಾಜಿಕ್ ನಂಬರ್ 113. ಬಿಜೆಪಿ ಆಪರೇಷನ್ ಕಮಲ ನಡೆಸಿದರೆ ಸ್ಪಷ್ಟ ಬಹುಮತ ಪಡೆಯಲು 9 ಶಾಸಕರನ್ನು ಸೆಳೆಯಬೇಕಿದೆ.

ಗುರುಗ್ರಾಮದ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರ ವಾಸ್ತವ್ಯ, ಕಾಂಗ್ರೆಸ್‌ನ 5 ಶಾಸಕರು ನಾಪತ್ತೆ!ಗುರುಗ್ರಾಮದ ರೆಸಾರ್ಟ್‌ನಲ್ಲಿ ಬಿಜೆಪಿ ಶಾಸಕರ ವಾಸ್ತವ್ಯ, ಕಾಂಗ್ರೆಸ್‌ನ 5 ಶಾಸಕರು ನಾಪತ್ತೆ!

ಕೇವಲ ಸ್ಪಷ್ಟ ಬಹುಮತ ಪಡೆದರೆ ಸರ್ಕಾರಕ್ಕೆ ಕಂಟಕ ತಪ್ಪಿದ್ದಲ್ಲ. ಆದ್ದರಿಂದ, ಬಹುಮತಕ್ಕಿಂತ ಹೆಚ್ಚು ಶಾಸಕರನ್ನು ಸೆಳೆಯಬೇಕಿದೆ. ಗುರುಗ್ರಾಮದಲ್ಲಿ ಬಿಡು ಬಿಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಯಾವ ತಂತ್ರ ಹಣೆಯುತ್ತಿದ್ದಾರೆ? ಎಂಬುದು ಇನ್ನೂ ನಿಗೂಢವಾಗಿದೆ.

ಬಿಜೆಪಿಗೆ ಹಾರುತ್ತಿರುವ 15 ಶಾಸಕರು ಯಾರು? ಇವರ ಮೇಲಿದೆ ಗುಮಾನಿಬಿಜೆಪಿಗೆ ಹಾರುತ್ತಿರುವ 15 ಶಾಸಕರು ಯಾರು? ಇವರ ಮೇಲಿದೆ ಗುಮಾನಿ

224 ಶಾಸಕರ ಬಲ

224 ಶಾಸಕರ ಬಲ

ಕರ್ನಾಟಕ ವಿಧಾನಸಭೆಯ ಸದ್ಯದ ಬಲಾಬಲ ಹೀಗಿದೆ
* ಕಾಂಗ್ರೆಸ್ 80 (ಸ್ಪೀಕರ್ ಸೇರಿಸಿ)
* ಜೆಡಿಎಸ್ 37
* ಬಿಜೆಪಿ 104
* ಕೆಪಿಜೆಪಿ 1
* ಪಕ್ಷೇತರ 1
* ಬಿಎಸ್‌ಪಿ 1
* ನಾಮ ನಿರ್ದೇಶನ 1

ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ

ಸಮ್ಮಿಶ್ರ ಸರ್ಕಾರದ ಸಂಖ್ಯಾಬಲ

ಕರ್ನಾಟಕ ಕಾಂಗ್ರೆಸ್‌-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಕಾಂಗ್ರೆಸ್‌ನ 79 (ಸ್ಪೀಕರ್ ಬಿಟ್ಟು), ಜೆಡಿಎಸ್ 37, ಕೆಪಿಜೆಪಿ 1, ಬಿಎಸ್‌ಪಿ 1, ಪಕ್ಷೇತರ 1 ಸದಸ್ಯ ಬಲವಿದೆ. ಸರ್ಕಾರ ಬಹುಮತ ಸಾಬೀತು ಮಾಡಲು ಬೇಕಾದ ಮ್ಯಾಜಿಕ್ ನಂಬರ್ 113. ಸ್ಪೀಕರ್ ಹೊರತು ಪಡಿಸಿ ಸರ್ಕಾರಕ್ಕೆ 119 ಸದಸ್ಯರ ಬಲವಿದೆ.

ಬಹುಮತ ಪಡೆಯಲು ಬೇಕಾದ ಸಂಖ್ಯೆ

ಬಹುಮತ ಪಡೆಯಲು ಬೇಕಾದ ಸಂಖ್ಯೆ

ಬಿಜೆಪಿ 104 ಸದಸ್ಯ ಬಲವನ್ನು ಹೊಂದಿದೆ. ಸರಳ ಬಹುಮತವನ್ನು ಸಾಬೀತು ಮಾಡಲು ಪಕ್ಷ 9 ಶಾಸಕರನ್ನು ಸೆಳೆಯಬೇಕು. ಕೇಲವ ಮ್ಯಾಜಿಕ್ ನಂಬರ್ ಪಡೆದರೆ ಸಾಲದು ಸುಭದ್ರ ಸರ್ಕಾರ ರಚನೆ ಮಾಡಬೇಕಾದರೆ ಇನ್ನೂ ಹೆಚ್ಚಿನ ಶಾಸಕರನ್ನು ಸೆಳೆಯಬೇಕು. ಎಷ್ಟು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ? ಎಂಬುದು ಸದ್ಯಸ ಪ್ರಶ್ನೆ.

ಸ್ಪೀಕರ್ ನಡೆ ಕುತೂಹಲ

ಸ್ಪೀಕರ್ ನಡೆ ಕುತೂಹಲ

ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್ ಪಕ್ಷದವರು. ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ತಕ್ಷಣ ಅದನ್ನು ಅವರು ಸ್ವೀಕಾರ ಮಾಡಲಿದ್ದಾರೆಯೇ? ಎಂಬುದು ಬಿಜೆಪಿಯನ್ನು ಕಾಡುತ್ತಿರುವ ಪ್ರಶ್ನೆ. ಆದ್ದರಿಂದ, ಬಿಜೆಪಿ ಕಾನೂನು ಸಲಹೆಯನ್ನು ಪಡೆಯುತ್ತಿದೆ.

5 ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ

5 ಶಾಸಕರು ಸಂಪರ್ಕಕ್ಕೆ ಸಿಗುತ್ತಿಲ್ಲ

ಕಾಂಗ್ರೆಸ್‌ನ 5 ಶಾಸಕರು ಮತ್ತು ಮುಳುಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್.ನಾಗೇಶ್ ಅವರು ಬಿಜೆಪಿ ಸಂಪರ್ಕದಲ್ಲಿರಬಹುದು ಎಂದು ಶಂಕಿಸಲಾಗಿದೆ.

ಆದರೆ, ಈ ಬಗ್ಗೆ ಕಾಂಗ್ರೆಸ್ ನಾಯಕರಿಗೂ ಖಚಿತವಾದ ಮಾಹಿತಿ ಇಲ್ಲ. ಯಾವ-ಯಾವ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ಸಹ ಅಧಿಕೃತ ಹೇಳಿಕೆ ನೀಡುತ್ತಿಲ್ಲ.

English summary
Karnataka Congress and JD(S) alleged that BJP is trying to topple alliance govt. If more than 15 MLA's support to the BJP than Congress-JD(S) alliance govt will face magic number shortage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X