ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ; ಡಿ. 11ರಂದು ಖಾಸಗಿ ಆಸ್ಪತ್ರೆ ಓಪಿಡಿ ಬಂದ್

|
Google Oneindia Kannada News

ಬೆಂಗಳೂರು, ಡಿಸೆಂಬರ್ 09 : ಬೆಂಗಳೂರು ಸೇರಿದಂತೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಖಾಸಗಿ ಆಸ್ಪತ್ರೆಗಳ ಹೊರ ರೋಗಿ ವಿಭಾಗಗಳು ಶುಕ್ರವಾರ ಬಂದ್ ಆಗಲಿವೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಓಪಿಡಿ ಬಂದ್ ಮಾಡಲಾಗುತ್ತಿದೆ.

ಖಾಸಗಿ ಆಸ್ಪತ್ರೆಗಳು, ನರ್ಸಿಂಗ್ ಹೋಮ್‌ಗಳ ಸಂಘದ ಅಧ್ಯಕ್ಷ ಪ್ರಸನ್ನ ಎಚ್‌. ಎಂ. ಈ ಕುರಿತು ಮಾಹಿತಿ ನೀಡಿದ್ದಾರೆ. "ಐಎಂಎ ಸೂಚನೆಯಂತೆ ಓಪಿಡಿಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಲ್ಳಲಾಗುತ್ತಿದೆ" ಎಂದು ಹೇಳಿದ್ದಾರೆ.

ಕೊರೊನಾ ಸೋಂಕಿಗೆ ವೈದ್ಯ ಬಲಿ: ಶ್ವಾಸಕೋಶ ಕಸಿ ವಿಳಂಬವಾಗಿದ್ದೇಕೆ? ಕೊರೊನಾ ಸೋಂಕಿಗೆ ವೈದ್ಯ ಬಲಿ: ಶ್ವಾಸಕೋಶ ಕಸಿ ವಿಳಂಬವಾಗಿದ್ದೇಕೆ?

ಕೇಂದ್ರ ಸರ್ಕಾರ ಅಲೋಪತಿ ಮತ್ತು ಆಯುರ್ವೇದ ವೈದ್ಯ ಪದ್ಧತಿಯನ್ನು ವಿಲೀನಗೊಳಿಸಿದೆ. ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಅನುಮತಿ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ.

31 ಲಕ್ಷಕ್ಕೆ 'ಅಲ್ಲಾವುದ್ದೀನ್ ದೀಪ' ಖರೀದಿಸಿ ಪೆಚ್ಚಾದ ವೈದ್ಯ!31 ಲಕ್ಷಕ್ಕೆ 'ಅಲ್ಲಾವುದ್ದೀನ್ ದೀಪ' ಖರೀದಿಸಿ ಪೆಚ್ಚಾದ ವೈದ್ಯ!

OPDs At Private Hospitals Across Karnataka Close On December 11

"ಇತ್ತೀಚಿನ ಗೆಜೆಟ್ ಅಧಿಸೂಚನೆಯಲ್ಲಿ ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಅನುಮತಿ ನೀಡಿದೆ. ಇದು ಜನರ ಜೀವದ ಜೊತೆ ಆಡುವ ಚೆಲ್ಲಾಟವಾಗಿದೆ" ಎಂದು ಪ್ರಸನ್ನ ಎಚ್. ಎಂ. ಆರೋಪಿಸಿದರು.

ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಅನುಮತಿ,ಕಾರ್ ಡ್ರೈವರ್ ವಿಮಾನ ಹಾರಿಸಿದಂತೆ ಎಂದ ವೈದ್ಯರು ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆ ಅನುಮತಿ,ಕಾರ್ ಡ್ರೈವರ್ ವಿಮಾನ ಹಾರಿಸಿದಂತೆ ಎಂದ ವೈದ್ಯರು

ಆಯುರ್ವೇದ ವೈದ್ಯರಿಗೆ ಶಸ್ತ್ರ ಚಿಕಿತ್ಸೆಯನ್ನು ಮಾಡಲು ಅವಕಾಶ ನೀಡಿರುವುದರಿಂದ ಆಗುವ ಅನಾಹುತಗಳನ್ನು ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು. ನೀಡಿರುವ ಅನುಮತಿಯನ್ನು ತಕ್ಷಣ ಹಿಂಪಡೆಯಬೇಕು ಎಂದು ವೈದ್ಯರು ಆಗ್ರಹಿಸುತ್ತಿದ್ದಾರೆ.

Recommended Video

ಸಿದ್ದರಾಮಯ್ಯಗೆ ತೀವ್ರ ಮುಜುಗರ ತಂದೊಡ್ಡಿದ ಅವರು ಬರೆದಿದ್ದ 7ವರ್ಷದ ಹಿಂದಿನ ಆ ಪತ್ರ | Oneindia Kannada

ಕೇಂದ್ರ ಸರ್ಕಾರದ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಲು ಬುಧವಾರ ವೈದ್ಯರು ಕಪ್ಪುಪಟ್ಟಿಯನ್ನು ಧರಿಸಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಶುಕ್ರವಾರ ಎಲ್ಲಾ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಮಾಡಿ ಪ್ರತಿಭಟನೆಯನ್ನು ನಡೆಸಲಿದ್ದಾರೆ.

English summary
Doctor's opposed union government decision to allow postgraduates in Ayurveda to perform surgeries. Doctor's decided to close OPDs at private hospitals across Karnataka on December 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X