• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾಮಪತ್ರ ಸಲ್ಲಿಕೆಗೆ ಉಳಿದಿರುವುದು ಎರಡೇ ದಿನ: ಕೈ-ಜೆಡಿಎಸ್ ಪಟ್ಟಿ ಎಲ್ಲಿ?

|

ಬೆಂಗಳೂರು, ಮಾರ್ಚ್ 23: ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನ ಮಾರ್ಚ್ 26 ಆಗಿದ್ದು, ಮಧ್ಯದಲ್ಲಿ ಎರಡನೇ ಶನಿವಾರ ಮತ್ತು ಭಾನುವಾರ ಇರುವುದರಿಂದ ಬಾಕಿ ಉಳಿದಿರುವುದು ಎರಡು ದಿನವಷ್ಟೆ, ಆದರೆ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ.

ಮಾರ್ಚ್‌ 19ಕ್ಕೆ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ಮಾರ್ಚ್ 26 ಕ್ಕೆ ನಾಮಪತ್ರ ಸಲ್ಲಿಕೆ ಮುಗಿಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಮಾರ್ಚ್ 29 ಕೊನೆಯ ದಿನವಾಗಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಇದರಲ್ಲಿ ಮಾರ್ಚ್ 23 ಎರಡನೇ ಶನಿವಾರ, ಮಾರ್ಚ್ 24 ಭಾನುವಾರ ರಜೆ ಇರುವ ಕಾರಣ ಉಳಿದಿರುವುದು ಎರಡು ದಿನ ಮಾತ್ರ. ಅದರಲ್ಲಿಯೂ ಕೊನೆಯ ದಿನ ಮಂಗಳವಾರವಾದ್ದರಿಂದ ಬಹುತೇಕರು ಆ ದಿನ ನಾಮಪತ್ರ ಸಲ್ಲಿಸುವುದಿಲ್ಲ. ಹಾಗಾಗಿ ಒಂದು ದಿನ ಮಾತ್ರವೇ ಇದೆ ಎಂದು ಹೇಳಬಹುದು. ಆದರೆ ಜೆಡಿಎಸ್-ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮವಾಗಿಲ್ಲ.

ತುಮಕೂರು ಕ್ಷೇತ್ರದಿಂದಲೇ ದೇವೇಗೌಡರು ಸ್ಪರ್ಧೆ: ಅಧಿಕೃತ ಘೋಷಣೆ

ಸೀಟು ಹಂಚಿಕೆಯನ್ನು ಬೇಗನೆ ಮಾಡಿಕೊಂಡ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬಹಳ ಸಮಯ ತೆಗೆದುಕೊಂಡಿವೆ. ಜೆಡಿಎಸ್ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದು, ಈ ವರೆಗೆ ನಾಲ್ಕು ಅಭ್ಯರ್ಥಿಗಳ ಕ್ಷೇತ್ರಗಳು ಮಾತ್ರವೇ ಅಂತಿಮವಾಗಿದೆ. ಕಾಂಗ್ರೆಸ್‌ ಒಬ್ಬ ಅಭ್ಯರ್ಥಿಯ ಹೆಸರನ್ನೂ ಸಹ ಘೋಷಿಸಿಲ್ಲ.

ಎರಡೆರಡು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ

ಎರಡೆರಡು ಬಾರಿ ದೆಹಲಿಗೆ ಹೋಗಿ ಬಂದಿದ್ದಾರೆ

ಸಿದ್ದರಾಮಯ್ಯ , ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ ಇನ್ನೂ ಹಲವು ಮುಖಂಡರು ಇದೇ ವಾರದಲ್ಲಿ ಎರಡೆರಡು ಬಾರಿ ದೆಹಲಿಗೆ ಹೋಗಿ ಬಂದರೂ ಸಹ ಅಭ್ಯರ್ಥಿಗಳ ಪಟ್ಟಿ ಇನ್ನೂ ಅಂತಿಮಗೊಳಿಸಿಲ್ಲ. ಅಭ್ಯರ್ಥಿಗಳನ್ನು ಘೋಷಿಸಿದರೆ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಹ ಆರಂಭವಾಗಿಲ್ಲ.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

ಬಿಜೆಪಿ 21 ಅಭ್ಯರ್ಥಿಗಳನ್ನು ಘೋಷಿಸಿದೆ

ಬಿಜೆಪಿ 21 ಅಭ್ಯರ್ಥಿಗಳನ್ನು ಘೋಷಿಸಿದೆ

ಆದರೆ ಬಿಜೆಪಿಯು ಈಗಾಗಲೇ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ಕೆಲವರು ಈಗಾಗಲೇ ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿಗಳನ್ನೇ ಘೋಷಿಸದ ಕಾರಣ ಬಹುತೇಕ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಆರಂಭವಾಗಿಲ್ಲ.

ನಾಮಪತ್ರ ಸಲ್ಲಿಸಲಿರುವ ಮುದ್ದಹನುಮೇಗೌಡ, ಆತಂಕದಲ್ಲಿ ದೇವೇಗೌಡ

ನಾಮಪತ್ರ ಸಲ್ಲಿಕೆಗೆ ಸಮಸ್ಯೆ ಆಗುತ್ತದೆ

ನಾಮಪತ್ರ ಸಲ್ಲಿಕೆಗೆ ಸಮಸ್ಯೆ ಆಗುತ್ತದೆ

ನಾಮಪತ್ರ ಸಲ್ಲಿಕೆಗೆ ದಾಖಲೆಗಳನ್ನು ಹೊಂದಿಸಿಕೊಳ್ಳಲು, ಮಾಹಿತಿ ಹೊಂದಿಸಿಕೊಳ್ಳಲು ಕೆಲವು ಸಮಯ ಬೇಕಾಗುತ್ತದೆ. ಹಠಾತ್ತನೆ ಅಭ್ಯರ್ಥಿಗಳ ಘೋಷಣೆ ಮಾಡಿದರೆ ಅಚ್ಚರಿ ಅಭ್ಯರ್ಥಿಗಳಿಗೆ ತಯಾರಿ ಮಾಡಿಕೊಳ್ಳಲು ಸಮಯ ದೊರೆಯುವುದಿಲ್ಲ. ಈಗಾಗಲೆ ಕೆಲವು ಆಕಾಂಕ್ಷಿಗಳು ನಾಮಪತ್ರ ಸಲ್ಲಿಕೆಗೆ ಸರ್ವ ತಯಾರಿ ನಡೆಸಿದ್ದಾರೆ. ಆದರೆ ಅಚ್ಚರಿ ಅಭ್ಯರ್ಥಿಗಳಿಗೆ ಸಮಸ್ಯೆ ಆಗುತ್ತದೆ.

ಜೆಡಿಎಸ್ ಸಂಸದರು ಏನು ವಿದ್ಯಾರ್ಹತೆ ಪಡೆದಿದ್ದಾರೆ?

ಪೂರ್ಣ ಪ್ರಚಾರ ಸಾಧ್ಯವಾಗುವುದಿಲ್ಲ

ಪೂರ್ಣ ಪ್ರಚಾರ ಸಾಧ್ಯವಾಗುವುದಿಲ್ಲ

ಅಭ್ಯರ್ಥಿ ಘೋಷಣೆ ತಡವಾದಷ್ಟೂ ಅಭ್ಯರ್ಥಿಗೆ ಚುನಾವಣಾ ಪ್ರಚಾರಕ್ಕೆ ಹೆಚ್ಚು ಸಮಯ ದೊರೆಯುವುದಿಲ್ಲ. ಲೋಕಸಭಾ ಚುನಾವಣೆ ಆದ್ದರಿಂದ ಹೆಚ್ಚು ಕ್ಷೇತ್ರವನ್ನು ಸುತ್ತಾಡಬೇಕಾಗಿರುತ್ತದೆ. ಒಂದು ಕ್ಷೇತ್ರದಲ್ಲಿ ಸರಾಸರಿ 6-8 ಲಕ್ಷ ಮತದಾರರು ಇರುತ್ತಾರೆ, ಅಭ್ಯರ್ಥಿ ಘೋಷಣೆ ತಡವಾದರೆ ಎಲ್ಲ ಮತದಾರರನ್ನು ತಲುಪಲು ಅಭ್ಯರ್ಥಿಗೆ ಸಾಧ್ಯವಾಗುವುದಿಲ್ಲ. ಮತದಾನದ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಮುಕ್ತಾಯವಾಗುವ ಕಾರಣ ಹೆಚ್ಚು ಸಮಯವಾಕಾಶ ಅಭ್ಯರ್ಥಿಗೆ ದೊರಕುವುದಿಲ್ಲ.

ರಾಮುಲು ವಿರುದ್ಧ ಡಿಕೆಶಿ ರಣಕಹಳೆ, ಬಳ್ಳಾರಿಯಲ್ಲಿ ಬೃಹತ್ ಸಮಾವೇಶ

English summary
March 26 is the final date for filling nominations. congress did not announce its candidate till now, jds announce only four candidates name. BJP already announce 21 candidates name.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X